ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಇಂಗ್ಲಿಷ್ ಭಾಷಾ ಸಂವಹನ ವೃದ್ಧಿಯ ಬೆಳವಣಿಗೆಗಾಗಿ ಆಯೋಜಿಸಿರುವ ಅಕೊಲೆಡ್ಸ್ ತರಗತಿಯ ಉದ್ಘಾಟನಾ ಕಾರ್ಯಕ್ರಮವು ಜೂ9 ರಂದು ನಡೆಯಿತು.
2026-27ನೇ ಶೈಕ್ಷಣಿಕ ಸಾಲಿನ ಶಾಲಾ ವಿದ್ಯಾರ್ಥಿಗಳಿಗೆ ಅಕೊಲೆಡ್ಸ್ ತರಗತಿಗಳನ್ನು ನಡೆಸಲಿರುವ ಮಂಗಳೂರಿನ ಅಕೊಲೆಡ್ಸ್ ಅಕಾಡೆಮಿಯ ಸಿ.ಇ.ಒ ಕೃಷ್ಣಪ್ರಸಾದ್ ಅಡಪ್ಪ ಇವರು ಭಿತ್ತಿ ಪತ್ರಿಕೆ ಅನಾವರಣಗೊಳಿಸುವ ಮೂಲಕ ತರಗತಿಗೆ ಚಾಲನೆ ನೀಡಿದರು.
ವೇದಿಕೆಯಲ್ಲಿ ಮಂಗಳೂರಿನ ಅಕೊಲೆಡ್ಸ್ ಅಕಾಡೆಮಿಯ ಸಿ.ಇ.ಒ ಕೃಷ್ಣಪ್ರಸಾದ್ ಅಡಪ್ಪ ಹಾಗೂ ಅವರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಮನಮೋಹನ್ ನಾಯ್ಕ್ ಕೆ.ಜಿ ವಹಿಸಿದ್ದರು.
ವಿದ್ಯಾರ್ಥಿನಿ ಮಾನ್ವಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮನಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿದರು.












