ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಶ್ರೀ ಗಣಪತಿ ಹವನ, ಆಶ್ಲೇಷ ಪೂಜೆ, ಅನುಜ್ಞಾಕಲಶ ದುರ್ಗಾ ಪೂಜೆ

Suddi Udaya

ತೆಕ್ಕಾರು: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ಬಟ್ರಬೈಲು ಎಂಬಲ್ಲಿ ನೇತ್ರಾವತಿ ನದಿಯ ತಟದ ಅನದಿದೂರದಲ್ಲಿದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜಮೀನು ಅನ್ಯಮತೀಯರಿಂದ ಅತಿಕ್ರಮಣವಾಗಿತ್ತು. ಸುಮಾರು ಹನ್ನೊಂದು ವರ್ಷಗಳ ನಿರಂತರ ಕಾನೂನು ಹೋರಾಟದ ಫಲವಾಗಿ ಬೆಳ್ತಂಗಡಿಯ ಶಾಸಕರ ಪ್ರಯತ್ನದ ಫಲವಾಗಿ ಯಾವುದೇ ಸಂಘರ್ಷವಿಲ್ಲದೆ ದೇವಸ್ಥಾನದ ಜಮೀನು ಶ್ರೀ ಗೋಪಾಲಕೃಷ್ಣ ಬಟ್ರಬೈಲು ದೇವರಗುಡ್ಡ ಸೇವಾ ಟ್ರಸ್ಟ್ ವತಿಗೆ ದೇವಸ್ಥಾನ ನಿರ್ಮಾಣಕ್ಕೆ ಮಂಜೂರು ಮಾಡಿಸುವಲ್ಲಿ ಬಹಳ ಮುತುವರ್ಜಿಯಿಂದ ಸಮಿತಿಗೆ ಸಹಕರಿಸಿದ್ದರು.

ಈ ಸಂಬಂಧ ಅ. 30ರಂದು ತಂತ್ರಿವರ್ಯರಾದ ಕರಾಯ ಹರಿಪ್ರಸಾದ್ ವೈಲಯರ ನೇತೃತ್ವದ ಪೌರೋಹಿತ್ಯದಲ್ಲಿ ವೈದಿಕ ಕಾರ್ಯ ಬೆಳಿಗ್ಗೆಯಿಂದ ಸಾನಿಧ್ಯ ನಿರ್ಮಾಣದ ಅಂಗವಾಗಿ ಶ್ರೀ ಗಣಪತಿ ಹವನ, ಆಶ್ಲೇಷ ಪೂಜೆ, ಸಾಮೂಹಿಕ ಪ್ರಾರ್ಥನೆ,ಅನುಜ್ಞಾಕಲಶ ರಾತ್ರಿ ದುರ್ಗಾ ಪೂಜೆ ನಡೆಯಿತು, ಉಳಿ,ಬಾರ್ಯ, ಪುತ್ತಿಲ,ತೆಕ್ಕಾರು ಗ್ರಾಮದ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಟ್ರಸ್ಟ್ ಅಧ್ಯಕ್ಷರಾದ ನಾಗಭೂಷಣ ರಾವ್ ಬಾಗ್ಲೋಡಿ, ತುಕಾರಾಂ ನಾಯಕ್, ಲಕ್ಷ್ಮಣ್ ಚೆನ್ನಪ್ಪ, ತುಕಾರಾಂ ನಾಯಕ್ ನಾಗರಕೋಡಿ, ಅಣ್ಣು ಪೂಜಾರಿ, ತಿಮ್ಮಪ್ಪ ಪೂಜಾರಿ, ಮಂಜುನಾಥ್ ಸಾಲ್ಯಾನ್, ನವೀನ್ ಕುಮಾರ್ ರೈ, ಸತೀಶ್ ಕುಲಾಲ್, ಪ್ರವೀಣ್ ರೈ ಸುರೇಶ್,.ಜನಾರ್ಧನ ಮರ್ಮ, ಸದಾನಂದ ನಾಯ್ಕ, ರವೀಂದ್ರ ಗೌಡ, ಸತೀಶ್ ಬೇನೆಪ್ಪು.ಅನಂತಶಯನ ಭಟ್.ಮತ್ತು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ವಿಶ್ರಾಂತ ತಹಸೀಲ್ದಾರ್ ರಾಘವೇಂದ್ರ ಆಚಾರ್,ಬಾರ್ಯವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮಂಡಳಿ ಟ್ರಸ್ಟಿ ಕೃಷ್ಣಪ್ಪ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮನೋಹರ್ ಶೆಟ್ಟಿ ಹಾಗೂ ನಾಲ್ಕು ಗ್ರಾಮದ ಭಕ್ತರು ಭಾಗವಹಿಸಿದ್ದರು.


ಶಾಸಕರಿಗೆ ಗೌರವಾಪ೯ಣೆ:
ಐತಿಹಾಸಿಕ ಹಿನ್ನೆಲೆ ಇದ್ದ ತೆಕ್ಕಾರು ಬಟ್ರಬೈಲು ದೇವಸ್ಥಾನ ಸ್ವಾತಂತ್ರ್ಯ ಪೂರ್ವದಲ್ಲೆ ಅಜೀರ್ಣ ಅವಸ್ಥೆಗೆ ತಲುಪಿ ಅನ್ಯಧರ್ಮಿಗಳ ವಶವಾಗಿ ನಾಶವಾಗಿದ್ದ ದೇವಸ್ಥಾನದ ಜಮೀನನ್ನು ಯಾವುದೇ ಸಂಘರ್ಷವಿಲ್ಲದೆ ಚಾಣಾಕ್ಷತನದಿಂದಲೇ ದೇವಸ್ಥಾನದ ಭೂಮಿಯನ್ನು ನಮಗೆ ದಕ್ಕುವಂತೆ ಮಾಡುವಲ್ಲಿ ಮುತುವರ್ಜಿ ವಹಿಸಿ ನೈಜವಾದ ಧರ್ಮ ರಕ್ಷಕನೆಂದು ಪ್ರತಿಪಾದಿಸಿದ ನೆಚ್ಚಿನ ಶಾಸಕರಾದ ಹರೀಶ್ ಪೂಂಜ ಅವರನ್ನು ಪ್ರಥಮ ವೈದಿಕ ಕಾರ್ಯದ ಸಂದರ್ಭದಲ್ಲಿ ಊರವರ ಪರವಾಗಿ ಟ್ರಸ್ಟ್ ವತಿಯಿಂದ ಗೌರವಿಸಲಾಯಿತು.

Leave a Comment

error: Content is protected !!