September 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನ : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಹೆಗ್ಗಡೆಯವರಿಂದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಶ್ರೀ ಭಗವತಿ ದೇವಸ್ಥಾನ ಮೇಲಂತಬೆಟ್ಟು ಇದರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಬೀಡಿನಲ್ಲಿ ಧಮಾ೯ಧಿಕಾರಿ ಡಾ.‌ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಗೊಳಿಸಿ, ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ಧಮ೯ದಶಿ೯ ಯೋಗೀಶ್ ಪೂಜಾರಿ, ಬ್ರಹ್ಮಕಲಶೋತ್ಸವ ಸಮಿತಿ ಕಾಯಾ೯ಧ್ಯಕ್ಷ ಡಾ. ಎಂ.ಎಂ ದಯಾಕರ್‌ ಭಟ್ ಉಜಿರೆ, ಜೀಣೋ೯ದ್ಧಾರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಮಾಪಲಾಡಿ,


ಬೆಳ್ತಂಗಡಿ ಎಸ್ಕೆಡಿಆರ್ಡಿಪಿ ಯೋಜನಾಧಿಕಾರಿ ಸುರೇಂದ್ರ,
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೀವ ಸಾಲ್ಯಾನ್ ಮುಂಡೂರು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಬಟ್ಯರಡ್ಡ, ಪೂಜಾ ಸಮಿತಿ ಅಧ್ಯಕ್ಷ ರಮೇಶ್ ಬಂಗೇರ ಅಂಕಾಜೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ ಅಂಕಾಜೆ ಲಾಯಿಲ, ಪ್ರಧಾನ ಅರ್ಚಕ ಯಶವಂತ ಶಾಂತಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಯೋಗೀಶ್

ಕುಲಾಲ್ ಪಕ್ಕಿದಕಲ, ನವೋದಯ ಯುವಕ ಮಂಡಲದ ಅಧ್ಯಕ್ಷ ವಸಂತ, ಶೇಖರ್ ಪೂಜಾರಿ, ಪತ್ರಕತ೯ರಾದ ಪ್ರತೀಕ್ ಕೋಟ್ಯಾನ್, ಬಿ.ಎಸ್ ಕುಲಾಲ್ ಉಪಸ್ಥಿತರಿದ್ದರು. ಧಮ೯ಸ್ಥಳದಲ್ಲಿದ್ದ ತುರ್ತು ಕಾರ್ಯ ದಲ್ಲಿದ್ದ ಶಾಸಕರು ಹಾಗೂ ‌ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾದ ಹರೀಶ್ ಪೂಂಜ ಅವರು‌ ತಾನು ನಿಮ್ಮ ಜೊತೆಗಿದ್ದು, ಪೂಣ೯ ಸಹಕಾರ ನೀಡುವುದಾಗಿ ತಿಳಿಸಿದರು.

Related posts

ಗಾಯಕರಾದ ಕ್ಷಿತಿ ಕೆ.ರೈ ಮತ್ತು ಶ್ರೇಷ್ಠ ಆಳ್ವ ರಿಗೆ ಆಮಂತ್ರಣ ಸತ್ಯಶ್ರೀ ಗೌರವ ಪುರಸ್ಕಾರ

Suddi Udaya

ಉಜಿರೆ: ಚಲಿಸುತ್ತಿದ್ದಾಗಲೇ ಕಳಚಿ ಬಿದ್ದ ಕೆ.ಎಸ್ ಆರ್ ಟಿಸಿ ಬಸ್ ಟಯರ್

Suddi Udaya

ವೇಣೂರು ಪ್ರಾ.ಕೃ.ಪ.ಸ. ಸಂಘದ ನಿವೃತ್ತ ಲೆಕ್ಕಿಗ ಲೋಕಯ್ಯ ಗೌಡ ನಿಧನ

Suddi Udaya

ಕುವೆಟ್ಟು ಗ್ರಾ.ಪಂ. ನಿಂದ ಸಹಾಯಧನ ಹಸ್ತಾಂತರ

Suddi Udaya

ಶ್ರೀರಾಮನಿಗೆ ಅವಹೇಳನ: ಪ್ರೊ. ಕೆ. ಎಸ್. ಭಗವಾನ್ ಬಂಧನಕ್ಕೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ತಹಶೀಲ್ದಾರರಿಗೆ ಮನವಿ

Suddi Udaya

ಬೆಳ್ತಂಗಡಿ ಪಾರಸ್ ಪೃಥ್ವಿ ಜ್ಯುವೆಲ್ಸ್ ವತಿಯಿಂದ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Suddi Udaya
error: Content is protected !!