ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ದಂತ ವೈದ್ಯಕೀಯದಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೆಳ್ತಂಗಡಿಯ ಹಮ್ನಾ ಜಝೀಲಾ

ಬೆಳ್ತಂಗಡಿ: ಕಳೆದ ಸಾಲಿನ ದಂತ ವೈದ್ಯಕೀಯದ ಅಂತಿಮ ವರ್ಷದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೆಳ್ತಂಗಡಿಯ ಹಮ್ನಾ ಜಝೀಲಾ ರಾಜೀವ್ ಗಾಂಧಿ ವಿಶ್ವವಿದ್ಯಾಲಯದಿಂದ ನಾಲ್ಕು Rank ಗಳನ್ನು ಪಡೆದು ಬೆಳ್ತಂಗಡಿಗೆ ಕೀರ್ತಿ ತಂದಿರುತ್ತಾರೆ.

ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ,ಫಿಜಿಯೋಲಾಜಿ ಮತ್ತು ಬಯೋಕೆಮೆಸ್ಟ್ರಿ,ಡೆಂಟಲ್ ಮೆಟೇರಿಯಲ್ಸ್ ಮತ್ತು ಕ್ಲಿನಿಕಲ್ ಪ್ರೊಸ್ಟೋಡೆಂಟಿಕ್ಸ್ ಈ ವಿಷಯಗಳಲ್ಲಿ ರ್ಯಾಂಕ್ ಪಡೆದಿರುವ ಇವರು ಎಂ.ಡಿ.ಎಸ್.ಕೋರ್ಸ್ ಮಾಡುವ ಇಚ್ಛೆ ವ್ಯಕ್ತಪಡಿಸಿರುತ್ತಾರೆ. ಲಾಯಿಲ ಸೈಂಟ್ ಮೇರೀಸ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಇವರು ಮೂಡಬಿದ್ರೆಯ ಎಕ್ಸೆಲೆಂಟ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದಿರುತ್ತಾರೆ.

ಶ್ರೀ ರಾಜರಾಜೇಶ್ವರಿ ದಂತ ವೈದ್ಯಕೀಯ ಕಾಲೇಜು,ಕೆಂಗೇರಿ, ಬೆಂಗಳೂರು ಇಲ್ಲಿ ತನ್ನ ದಂತ ವೈದ್ಯಕೀಯ ಕೋರ್ಸ್ ಮುಗಿಸಿರುವ ಇವರು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಕೊಯ್ಯೂರು ಹಾಗೂ ಶ್ರೀಮತಿ ಜಮೀಲಾ ಎಸ್ ಇವರ ಪುತ್ರಿ.

Related posts

ಭತ್ತದ ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆ: ಉಜಿರೆಯ ಆಕಾಂಕ್ಷ ಎಲ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಕಲ್ಮಂಜ ಶ್ರೀ ಸತ್ಯನಾರಾಯಣ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ

Suddi Udaya

ಕ್ಲಸ್ಟರ್ ಮಟ್ಟದ ವಾರ್ಷಿಕ ಕ್ರೀಡಾಕೂಟ: ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

Suddi Udaya

ಉಜಿರೆ: ಶ್ರೀ ಧ.ಮಂ.ಮಹಿಳಾ ಐಟಿಐಯಲ್ಲಿ ಪ್ರಾಂಶುಪಾಲರು, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರಿಂದ ದಿ| ಎಂ.ವೈ ಹರೀಶ್ ರವರ ಭಾವಚಿತ್ರಕ್ಕೆ ಪುಷ್ಪ ನಮನ

Suddi Udaya

ಅಳದಂಗಡಿ: ಶ್ರೀ ಸತ್ಯದೇವತಾ ದೈವಸ್ಥಾನದ ವತಿಯಿಂದ ಪುಸ್ತಕ ವಿತರಣಾ ಸಮಾರಂಭ ಮತ್ತು ಶಿವಪ್ರಸಾದ್ ಅಜಿಲರಿಗೆ ಪೌರ ಸನ್ಮಾನ ಪೂರ್ವಭಾವಿ ಸಭೆ

Suddi Udaya
error: Content is protected !!