September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಬೆಳ್ತಂಗಡಿ: ಇಲ್ಲಿನ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ 9 ನೇ  ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮತ್ತು 6 ದಿನಗಳ ಯೋಗ ತರಬೇತಿ ಶಿಬಿರ ಜೂ. 21ರಂದು ಸಂಪನ್ನಗೊಂಡಿತು.

ಕಾರ್ಯಕ್ರಮದ ಮುಖ್ಯ ಅತಿಥಿ, ಧರ್ಮಸ್ಥಳ ಶಾಂತಿವನದ ನಿವಾಸಿ ವೈದ್ಯಾಧಿಕಾರಿ ಡಾ. ಶಶಿಕಿರಣ್ ಎಚ್ ಸಿ ಮಾತನಾಡಿ, ವಿದ್ಯಾರ್ಥಿಗಳು ಬೆಳಗ್ಗೆ ಬೇಗನೇ ಏಳುವ ಅಭ್ಯಾಸ, ಯೋಗ ಮತ್ತು ಧ್ಯಾನಗಳನ್ನು ಮೈಗೂಡಿಸಿಕೊಂಡು ಮತ್ತು ಬೇಕರಿ ಆಹಾರವನ್ನು ತ್ಯಜಿಸಿ, ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಎಸ್ ಡಿ ಎಂ ಪ್ರಕೃತಿ ಮತ್ತು ಯೋಗ ವಿಜ್ಞಾನಿಗಳ ಮಹಾವಿದ್ಯಾಲಯದ ಎಂ.ಡಿ  ವಿದ್ಯಾರ್ಥಿ ಡಾ. ಗುರುಪ್ರವೀಣ್ ಎಸ್ ಇವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.  
ಶಾಲಾ ಮುಖ್ಯ ಶಿಕ್ಷಕಿ ಹೇಮಲತಾ ಎಂ ಆರ್ ಮತ್ತು ದೈಹಿಕ ಶಿಕ್ಷಕರಾದ ಪ್ರವೀಣ್ ಕುಮಾರ್ ಇವರ ಮಾರ್ಗದರ್ಶನದಲ್ಲಿ, ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ಕಾರ್ಯಕ್ರಮ ಸಂಯೋಜಿಸಲಾಯಿತು. ಶಿಕ್ಷಕ ಶ್ರೇಯಾಂಸ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Related posts

ರೆಖ್ಯ: 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು

Suddi Udaya

ಕಾಶಿಪಟ್ಣ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಜಿ.ಪಂ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್‌ರ ಮಾತೃಶ್ರೀ ಸಿರಿಯಮ್ಮ ಹೊಸಂಗಡಿ ನಿಧನ

Suddi Udaya

31 ವರ್ಷಗಳ ವಿಶ್ವಾಸದ ಪಯಣ: ಸೋಜಾ ಎಲೆಕ್ಟ್ರಾನಿಕ್ಸ್‌ನಲ್ಲಿ ವಿಡಿಯಂ ಸರ್ವಿಸ್ ಕ್ಯಾಂಪ್‌ಗೆ ಚಾಲನೆ

Suddi Udaya

ಡಾ|| ಹೇಮಾವತಿ ವೀ. ಹೆಗ್ಗಡೆಯವರ ಹುಟ್ಟುಹಬ್ಬ: ಶ್ರೀ ಕ್ಷೇ ಧ ಗ್ರಾ ಯೋಜನೆಯ ಅಳದಂಗಡಿ ವಲಯದ ವಾತ್ಸಲ್ಯ ಕುಟುಂಬದ ಸದಸ್ಯರಿಗೆ ಹಣ್ಣು ಹಂಪಲು ವಿತರಣೆ

Suddi Udaya

ಧರ್ಮಸ್ಥಳ: ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಹೆತ್ತವರಿಗೆ ಮಾಹಿತಿ ಕಾರ್ಯಾಗಾರ

Suddi Udaya
error: Content is protected !!