September 6, 2026
ಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಜೂ. 27 ರಂದು ನೆರವೇರಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧರ್ಮಸ್ಥಳ ಗ್ರಾ.ಪಂ. ಸದಸ್ಯ. ರಾಮಚಂದ್ರ ರಾವ್ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯ ಶಿಕ್ಷಕ ಪಿ. ಸುಬ್ರಮಣ್ಯ ರಾವ್ ಶಾಲೆಯಲ್ಲಿ ಇರುವ ಕಲಾ ಸಂಘ, ವಿಜ್ಞಾನ ಸಂಘ, ಕ್ರೀಡಾ ಸಂಘ, ಸಾಂಸ್ಕೃತಿಕ ಸಂಘಗಳನ್ನು ಶಿಕ್ಷಣದ ಜೊತೆಗೆ ನಿರ್ವಹಿಸಿಕೊಂಡು ಹೋಗಬೇಕು. ಸಂಘಗಳು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಗುರುಗಳಾದ ಲಕ್ಷ್ಮಣ ಗೌಡ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆ, ಶ್ರೀಮತಿ ಕಾವ್ಯರವರು ಸ್ವಾಗತಿಸಿ, ಪೂರ್ಣಿಮಾ ಜೋಷಿ ನಿರ್ವಹಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಸಹಕರಿಸಿದರು.

Related posts

ತೆಕ್ಕಾರು ಉಪ ಆರೋಗ್ಯ ಕೇಂದ್ರಕ್ಕೆ ಕಟ್ಟಡ ನಿರ್ಮಿಸಲು ಅನುದಾನ ಮಂಜೂರುಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರವರಿಗೆ ತೆಕ್ಕಾರು ಗ್ರಾ.ಪಂ. ಸದಸ್ಯ ಅಬ್ದುಲ್ ರಝಾಕ್ ರವರಿಂದ ಮನವಿ

Suddi Udaya

ಮೊಗ್ರು ಮುಗೇರಡ್ಕ ‘ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್’ ಬೆಳ್ಳಿಹಬ್ಬ ಪ್ರಯುಕ್ತ ‘ರಜತ ಪಥ’ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಪಾದಾಚಾರಿಗೆ ಡಿಕ್ಕಿ ಹೊಡೆದ ಕೆ.ಎಸ್.ಆರ್.ಟಿ.ಸಿ ಬಸ್

Suddi Udaya

ಮಾಚಾರಿನಲ್ಲಿ 32ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆಯ ಉದ್ಘಾಟನೆ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ವನದುರ್ಗ ದೇವಿ ಕ್ಷೇತ್ರಕ್ಕೆ ಸೋಲಾರ್ ಅಳವಡಿಸಲು ಕೆನರಾ ಬ್ಯಾಂಕಿನಿಂದ ರೂ 2 ಲಕ್ಷ ಮಂಜೂರು

Suddi Udaya

ಉಜಿರೆ ರತ್ನಮಾನಸದಲ್ಲಿ “ಆಟಿದ ಅಟಿಲ್ ” ಕಾರ್ಯಕ್ರಮ

Suddi Udaya
error: Content is protected !!