September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿ

ಹತ್ಯಡ್ಕ ಪ್ರಾ.ಕೃ.ಪ.ಸ.ಸಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ಸೇವಾ ನಿವೃತ್ತಿ

ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ಜು.31 ರಂದು ಸೇವಾ ನಿವೃತ್ತಿ ಹೊಂದಿದರು.
1987ರಲ್ಲಿ ಸಹಕಾರಿ ಸಂಘದಲ್ಲಿ ದಿನವಹಿ ಸೇವೆ ಪ್ರಾರಂಭಿಸಿ 1991 ರಲ್ಲಿ ಗುಮಾಸ್ತರಾಗಿ2005 ರಲ್ಲಿ ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ 2015 ರಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಯಗಿ ಭಡ್ತಿಗೊಂಡು ಕಾರ್ಯನಿರ್ವಹಿಸಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದರು.


ಶಿಬಾಜೆ ಪೆರ್ಲ ‘ತುಡರ್’ ಮನೆಯವರಾದ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಸಾರ್ವಜನಿಕ ಸಂಪರ್ಕ ಹೊಂದಿದ್ದು ಅರಸಿನಮಕ್ಕಿ ಜೆಸಿಐ ಸದಸ್ಯರಾಗಿ, ಪೆರ್ಲ ಹಿ.ಪ್ರಾ. ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಪೆರ್ಲ ಶಾಲೆಯ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯ ಸಂಪಾದಕರಾಗಿ, ಶ್ರೀ ರಾಜರಾಜೇಶ್ವರಿ ಭಜನಾಮಂಡಳಿಯ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 2001ಮತ್ತು 2016ರ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.


ಅರಸಿನಮಕ್ಕಿಯ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ, ದಶಮಾನೋತ್ಸವ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಭಜನೆ, ತುಳು ನಾಟಕದಲ್ಲಿ ಅಭಿನಯ, ನಾಟಕ ರಚನೆ, ಯಕ್ಷಗಾನ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

Related posts

ಪೆರಿಂಜೆ : ಮಿಲಾದ್ ಆಚರಣೆಯ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಂದ ‘ನೂರುನ್ ಆಲಾ ನೂರ್ ‘ಕಾರ್ಯಕ್ರಮ

Suddi Udaya

ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ ಅಂಗದಾನ ಜಾಗೃತಿ ಕಾರ್ಯಕ್ರಮ ‘ಧಾತ್ರು’ ಆಯೋಜನೆ

Suddi Udaya

ವಾಣಿ ಪದವಿಪೂರ್ವ ಕಾಲೇಜಿನ ಬಾಲಕಿಯರು ಪ್ರತಿನಿಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ತ್ರೋಬಾಲ್ ತಂಡಕ್ಕೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ

Suddi Udaya

ಉಜಿರೆ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ; ಕಿರಿಯಾಡಿ ಭಜನಾ ಮಂಡಳಿ ಸದಸ್ಯರಿಂದ ಶ್ರಮದಾನ

Suddi Udaya

ಉಜಿರೆ: ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದ ವ್ಯಕ್ತಿ ನಾಪತ್ತೆ

Suddi Udaya

ಅ.10: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಪ್ರಯುಕ್ತ ಮಡಂತ್ಯಾರು ಹಾಗೂ ಬಳ್ಳಮಂಜ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ

Suddi Udaya
error: Content is protected !!