September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಇಂದಬೆಟ್ಟು ಗ್ರಾ.ಪಂ. ನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಇಂದಬೆಟ್ಟು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಇಂದು 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಧ್ಯಕ್ಷೆ ಶ್ರೀಮತಿ ಆಶಾಲತಾ ರವರು ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಲಾಯಿತು.

ಆಜಾದಿ ಕಾ ಅಮೃತ ಮಹೋತ್ಸವ ದ ಅಂಗವಾಗಿ ‘ಪಂಚ್ ಪ್ರಾಣ್ ಪ್ರತಿಜ್ಞೆ’ ಮೂಲಕ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ವೀರ ಯೋಧರಿಗೆ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮವನ್ನು ದೇವನಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಕಿಶೋರ್ ಕುಮಾರ್ ರವರು ನಿರ್ವಹಿಸಿದರು. ದೇವನಾರಿ ಶಾಲಾ ಮಕ್ಕಳು ರಾಷ್ಟ್ರಗೀತೆ, ವಂದೇ ಮಾತರಂ, ಧ್ವಜಗೀತೆ ಹಾಡಿದರು.

ಅಧ್ಯಕ್ಷರಾದ ಶ್ರೀಮತಿ ಆಶಾಲತಾ ರವರು ಸ್ವಾತಂತ್ರ್ಯೋತ್ಸವದ ಶುಭಾಶಯಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗದವರು, ದೇವನಾರಿ ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ ಸದಸ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರ ಇಂದಬೆಟ್ಟು ಸಿಬ್ಬಂದಿಗಳು, ಗೆಳೆಯರ ಬಳಗ ನೇತ್ರಾವತಿ ನಗರದ ಸದಸ್ಯರು, ಸುಧರ್ಮ ಆಟೋ ರಿಕ್ಷಾ ಚಾಲಕ ಮಾಲಕರು ಇಂದಬೆಟ್ಟು, ನವಭಾರತ್ ಗೆಳೆಯರ ಬಳಗ ಕಲ್ಲಾಜೆ-ಇಂದಬೆಟ್ಟು ಸದಸ್ಯರು, ಇಂದಬೆಟ್ಟು ಗ್ರಾಮಸ್ಥರು, ಗ್ರಾಮದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

CRT ತಾಲೂಕು ಸಂಯೋಜಕರಾದ ವಿನೋದ್ ಪ್ರಸಾದ್ ರವರು ಧನ್ಯವಾದವಿತ್ತರು.

Related posts

ಧರ್ಮಸ್ಥಳ: ಜೋಡುಸ್ಥಾನ ನಿವಾಸಿ ಗೋವಿಂದ ಗೌಡರ ಪುತ್ರ ಪ್ರಥಮ್ ನಿಧನ

Suddi Udaya

ಕೊಕ್ಕಡ ಕಪಿಲಾ ಘಟಕದ ವ್ಯವಹಾರ ವಿಭಾಗದ ಉಪಾಧ್ಯಕ್ಷ ವಿಕ್ಟರ್ ಸುವಾರಿಸ್ ರಿಗೆ ವಲಯ ಪ್ರತಿಷ್ಠಿತ ಸಾಧನಾಶ್ರೀ ಪ್ರಶಸ್ತಿ

Suddi Udaya

ಜ.24- 30: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ವಾಣಿ ಆಂ.ಮಾ. ಪ್ರೌ. ಶಾಲಾ ಮಂತ್ರಿಮಂಡಲ ರಚನೆ: ಶಾಲಾ ನಾಯಕಿಯಾಗಿ ಕು.ನವಮಿ ಎಮ್ ಆಯ್ಕೆ

Suddi Udaya

ಮುಂಡಾಜೆ ಪ.ಪೂ. ಕಾಲೇಜು ಪ್ರಾರಂಭೋತ್ಸವ

Suddi Udaya

ವೇಣೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ, ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ

Suddi Udaya
error: Content is protected !!