30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಫೋಟೋಗ್ರಫಿ ಮತ್ತು ವಿಡೀಯೋಗ್ರಫಿ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ: ಯುವ ಶಕ್ತಿ ಎಂಬುದು ದೊಡ್ಡ ಪ್ರವಾಹ ಇದ್ದ ಹಾಗೆ, ಪ್ರವಾಹವು ಪ್ರಖರವಾದ ವೇಗದಿಂದ ಕೂಡಿರುತ್ತದೆ. ಈ ಜಲರಾಶಿಗೆ ಅದರ ಪಾಡಿಗೆ ಅದನ್ನು ಬಿಟ್ಟರೆ ಅನೇಕ ನಾಶ ನಷ್ಟಗಳನ್ನು ಉಂಟು ಮಾಡಿ ಸಮುದ್ರ ಸೇರುತ್ತದೆ, ಆದರೆ ಆ ನೀರನ್ನು ಅಣೆಕಟ್ಟು ಕಟ್ಟಿ ಅದನ್ನು ನೀರಾವರಿಗೆ ಬಳಸಿಕೊಳ್ಳಲು ಅವಕಾಶ ಇದೆ. ಅದರಂತೆ ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಅವರಿಂದ ಕೂಡ ದೇಶಕ್ಕೆ ಪ್ರಯೋಜನವಿದೆ. ಜ್ಞಾನ, ಕೌಶಲ್ಯ, ದೋರಣೆ ಮತ್ತು ಮೌಲ್ಯಗಳನ್ನು ಯುವಜನರಿಗೆ ನೀಡಬೇಕು. ಅದರಂತೆ ರುಡ್‌ಸೆಟ್ ಸಂಸ್ಥೆಯ ಎಲ್ಲಾ ತರಬೇತಿಗಳಲ್ಲಿ ಈ ವಿಷಯಗಳನ್ನು ನೀಡಲಾಗುತ್ತದೆ, ಅವಕಾಶಗಳನ್ನು ಬಾಚಿಕೊಳ್ಳಬೇಕು ಅದರ ಜೊತೆಗೆ ಅವಕಾಶಗಳನ್ನು ನಾವೇ ಸೃಷ್ಠಿಸಬೇಕು, ಉನ್ನತ ಶಿಕ್ಷಣವನ್ನು ಪಡೆದು ಜೀವನದಲ್ಲಿ ನೆಲೆ ನಿಲ್ಲಲು ಸಾದ್ಯ ಇಲ್ಲದೇ ಇರಬಹುದು ಆದರೆ ರುಡ್‌ಸೆಟ್ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆದ ಯುವ ಜನತೆ ಸ್ವಾವಲಂಬಿಗಳಾಗಿ ಬಾಳುತ್ತಾರೆ ಎಂದು ಎಸ್‌ಡಿಎಮ್ ಏಜುಕೇಷನಲ್ ಸೊಸೈಟಿಯ ಕಾರ್ಯದರ್ಶಿಯಾದ ಡಾ. ಎಸ್. ಸತೀಶ್ಚ್ಂದ್ರ ಅವರು ಅಭಿಪ್ರಾಯ ಪಟ್ಟರು.

ಅವರು ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಫೋಟೋಗ್ರಫಿ ಮತ್ತು ವಿಡೀಯೋಗ್ರಫಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಗಿರಿಧರ್ ಕಲ್ಲಾಪುರರವರು ಅಧ್ಯಕ್ಷ ಸ್ಥಾನ ವಹಿಸಿದ್ದರು, ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್‌ರವರು ಅತಿಥಿಗಳನ್ನು ಸ್ವಾಗತಿಸಿ ತರಬೇತಿಯ ಹಿನ್ನೋಟವನ್ನು ನೀಡಿದರು. ಹಿರಿಯ ಉಪನ್ಯಾಸಕಿ ಶ್ರೀಮತಿ ಅನಸೂಯರವರು ಕಾರ್ಯಕ್ರಮ ನಿರ್ವಹಿಸಿದರೆ, ಹಿರಿಯ ಉಪನ್ಯಾಸಕರಾದ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್‌ರವರು ಧನ್ಯವಾದವಿತ್ತರು. ಕೆಲವು ಶಿಬಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯ 35 ಶಿಭಿರಾರ್ಥಿಗಳ ಜೊತೆಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ಬ್ಯೂಟಿ ಪಾರ್ಲರ್ ಮತ್ತು ಕಂಪ್ಯೂಟರ್ ಟ್ಯಾಲಿ ತರಬೇತಿಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು.

Related posts

ಬೆಳ್ತಂಗಡಿ : ಎಸ್.ಐ.ಟಿ ಕಚೇರಿಗೆ ಆಗಮಿಸಿ ದೂರು ನೀಡಿದ ಹೋರಾಟಗಾರರ ತಂಡ

Suddi Udaya

ಚಾರ್ಮಾಡಿ ಘಾಟ್ ನಲ್ಲಿ ತೂಫಾನ್ ಪಲ್ಟಿ

Suddi Udaya

ವಿದ್ಯುತ್ ಪೂರೈಕೆಯಲ್ಲಿ ಗ್ರಾಹಕರಿಗೆ ಮೆಸ್ಕಾಂ ಉತ್ತಮ ಸೇವೆ ನೀಡುತ್ತಿದೆ:ಕುತ್ಲೂರು- ಕಕ್ಕಿಂಜೆ,ಇಂದಬೆಟ್ಟು,ನಿನ್ನಿಕಲ್ಲು ಪ್ರದೇಶದಲ್ಲಿ ಹೊಸ ಸಬ್ ಸ್ಟೇಷನ್ ನಿರ್ಮಾಣ:ತಾಲೂಕಿಗೆ ಹೆಚ್ಚುವರಿ 1000 ಟ್ರಾನ್ಸ್ಪಾರ್ಮರ್ ಗಳ ಅಗತ್ಯವಿದೆ:ಪತ್ರಿಕಾಗೋಷ್ಠಿಯಲ್ಲಿ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿಕೆ

Suddi Udaya

ಅರಸಿನಮಕ್ಕಿ: ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಮಹಾಸಭೆ

Suddi Udaya

ಭಾರತೀಯ ಜನತಾ ಪಾರ್ಟಿ ಉಜಿರೆ ಮಹಾಶಕ್ತಿ ಕೇಂದ್ರ ದ ಸಭೆ

Suddi Udaya

ಎಕ್ಸೆಲ್ ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಮಹತ್ವದ ಸಾಧನೆ

Suddi Udaya
error: Content is protected !!