ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಪ್ರೌಢಶಾಲೆಯಲ್ಲಿ ತ್ರೋಬಾಲ್ ಪಂದ್ಯಾಟ

ಬೆಳಾಲು: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕೊಕ್ಕಡ ವಲಯ ಮಟ್ಟದ ಬಾಲಕ ಮತ್ತು ಬಾಲಿಕೆಯರ ತ್ರೋಬಾಲ್ ಪಂದ್ಯಾಟ ಜರಗಿತು.

ಪಂದ್ಯಾಟವನ್ನು ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ್ ಗೌಡ ಕೊಲ್ಲಿಮಾರ್ ರವರು ಉದ್ಘಾಟಿಸಿ ಶುಭಹಾರೈಸಿದರು. ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ದ ಕ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಾಲೆಯ ಮುಖ್ಯೋಪಾಧ್ಯಾಯರನ್ನು ಕೊಕ್ಕಡ ವಲಯದ ಶಾರೀರಿಕ ಶಿಕ್ಷಣ ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು.

ಶಿಕ್ಷಕಿ ರಾಜಶ್ರೀಯರವರು ಸ್ವಾಗತಿಸಿ, ರವಿಚಂದ್ರ ರವರು ಧನ್ಯವಾದ ಸಲ್ಲಿಸಿದರು. ಶಾರೀರಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಾನಂದರವರು ಕ್ರೀಡಾಕೂಟವನ್ನು ಸಂಯೋಜಿಸಿದರು. ಸುಮನ್ ರವರು ಕಾರ್ಯಕ್ರಮ ನಿರೂಪಿಸಿದರು.

ಪಂದ್ಯಾಟದಲ್ಲಿ ಒಟ್ಟು ಹದಿನೇಳು ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನ ಪಡೆದ ಬದನಾಜೆ ಪ್ರೌಢಶಾಲೆ ಮತ್ತು ದ್ವಿತೀಯ ಸ್ಥಾನ ಪಡೆದ ಬೆಳಾಲು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ತಂಡದವರು ತಾಲೂಕು ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾದರು. ಶೇಖರ್ ಕೊಲ್ಲಿಮಾರ್ ರವರು ಬಹುಮಾನ ವಿತರಿಸಿದರು. ನಾವುರ ಪ್ರೌಢಶಾಲೆಯ ಅಶೋಕ್ ಕುಮಾರ್ ಉಜಿರೆಯವರು ವಿಜೇತ ತಂಡದ ವಿವರವನ್ನು ಪ್ರಕಟಿಸಿದರು.

Related posts

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಿಂದ ಬಿ. ನಿರಂಜನ್ ಬಾವಂತಬೆಟ್ಟುರವರಿಗೆ ನುಡಿನಮನ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿದ ಪ್ರಕರಣ: 9 ನೇ ಗುರುತಿನಲ್ಲಿ ಪತ್ತೆಯಾಗದ ಕಳೇಬರದ ಅವಶೇಷ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

Suddi Udaya

ತಣ್ಣೀರುಪಂತ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷರಾಗಿ ಸಹಕಾರಿ ಭಾರತೀಯ ಜಗದೀಶ್ ಶೆಟ್ಟಿ ಮೈರ ಆಯ್ಕೆ: ಕಾಂಗ್ರೆಸ್ ಬೆಂಬಲಿತ ಜಯವಿಕ್ರಮ್ ಗೆ ಸೋಲು

Suddi Udaya

ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ ಭರದಿಂದ ಸಾಗುತ್ತಿದೆ ಅಯೋಧ್ಯೆ ಶಾಖಾಮಠದ ನಿರ್ಮಾಣ ಕೆಲಸ ಕಾರ್ಯಗಳು

Suddi Udaya

ಬಳಂಜ ಗ್ರಾ.ಪಂ ಹಾಗೂ ಅರಣ್ಯ ಇಲಾಖೆಯಿಂದ ವನಮಹೋತ್ಸವ ಆಚರಣೆ

Suddi Udaya
error: Content is protected !!