September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರ ಹುಟ್ಟುಹಬ್ಬ ಹಿನ್ನಲೆ ಬಂದಾರು ಶಾಲೆಯ ವಿದ್ಯಾರ್ಥಿಗಳಿಂದ ಲಕ್ಷ್ಮೀ ಗ್ರೂಪ್ಸ್ ಕಂಪನಿಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ

ಉಜಿರೆ: ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ರವರ ಹುಟ್ಟುಹಬ್ಬ ಹಿನ್ನಲೆಯಲ್ಲಿ ಬಂದಾರು ಶಾಲೆಯ ವಿದ್ಯಾರ್ಥಿಗಳಿಂದ ಲಕ್ಷ್ಮೀ ಗ್ರೂಪ್ಸ್ ಕಂಪನಿಯಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆಯು ಇಂದು ನಡೆಯಿತು.

ಸರಕಾರಿ ಉನ್ನತ್ತೀಕರಿಸಿದ ಪ್ರಾಥಮಿಕ ಶಾಲೆ ಬಂದಾರು ಬೆಳ್ತಂಗಡಿ ಡಿಸೆಂಬರ್ ನಲ್ಲಿ ಒರಿಸ್ಸಾದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದು ಈ ವಿದ್ಯಾರ್ಥಿಗಳಿಗೆ 12 ವಾಲಿಬಾಲ್ ಮತ್ತು 1 ನೆಟ್ ನೀಡಿದ ಬದುಕು ಕಟ್ಟೋಣ ಬನ್ನಿ ತಂಡ ನೀಡಿದೆ.

ಆಯ್ಕೆಯಾದ ಸುಮಾರು 14 ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಬದುಕು ಕಟ್ಟೋಣ ಬನ್ನಿ ತಂಡ ತರಭೇತಿ ನೀಡುತ್ತಿದೆ.
ಮುಂದಿನ ಪಂದ್ಯಾಟದ ಎಲ್ಲ ಖರ್ಚು ವೆಚ್ಚವನ್ನು ಬದುಕು ಕಟ್ಟೋಣ ಬನ್ನಿ ತಂಡ ಭರಿಸಲಿದೆ.

ಈ ಸಂದರ್ಭದಲ್ಲಿ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ್ , ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಮತ್ತು ರಾಜೇಶ್ ಪೈ , ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು, ಬಂದಾರು ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

Related posts

ಉರುವಾಲು: ನೆಕ್ಕಿಲು ಶಾಲಾ ಮುಖ್ಯ ಶಿಕ್ಷಕ ಬಿ . ಎಸ್ . ಬಿರಾದಾರ್ ಬೀಳ್ಕೊಡುಗೆ ಸಮಾರಂಭ

Suddi Udaya

ಸೌತಡ್ಕ: ಸತ್ತ ಕರುವೊಂದನ್ನು ಮೋರಿಗೆ ಎಸೆದ ದುಷ್ಕಾರ್ಮಿಗಳು: ಹಿಂ.ಜಾ. ವೇದಿಕೆ ಮತ್ತು ಶಿವಾಜಿ ಗ್ರೂಪ್ ಆಫ್ ಬಾಯ್ಸ್ ಸದಸ್ಯರಿಂದ ಅಂತ್ಯಸಂಸ್ಕಾರ

Suddi Udaya

ಬೆಳ್ತಂಗಡಿ: ಕೆಲ್ಲಗುತ್ತು ಪರಿಸರದಲ್ಲಿ ಚಿರತೆ ಓಡಾಟ : ಎಚ್ಚರಿಕೆ ವಹಿಸುವಂತೆ ಪ.ಪಂ ನಿಂದ ಸೂಚನೆ

Suddi Udaya

ರಸ್ತೆಯಲ್ಲಿ ಸಿಕ್ಕಿದ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಹಿಂತಿರುಗಿಸಿ ಕೊಟ್ಟು ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಸುರೇಶ್ ಎಂ. ಬಿ

Suddi Udaya

ಶಿಬಾಜೆಯಲ್ಲಿ ದಲಿತ ಯುವಕನ ಹತ್ಯೆ ಆರೋಪ ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಯಿಂದ ಒತ್ತಾಯ

Suddi Udaya

ಬೆಳ್ತಂಗಡಿ ಸಂತ ಲಾರೆನ್ಸ್ ಚರ್ಚ್‌ನಲ್ಲಿ ಆತ್ಯಾಕರ್ಷವಾಗಿ ಗಮನ ಸೆಳೆದ ಗೋದಲಿ

Suddi Udaya
error: Content is protected !!