22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಬೆಳ್ತಂಗಡಿ ಕಸಾಪ ಸಹಯೋಗದೊಂದಿಗೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರು ರವರ ಚಿಂತನಾ ಬರಹಗಳ ಸಂಕಲನ ‘ಮೌಲ್ಯಗಳ ಹುಡುಕಾಟದಲ್ಲಿ’ ಪುಸ್ತಕ ಬಿಡುಗಡೆ’ ಕಾರ್ಯಕ್ರಮ

ಬೆಳ್ತಂಗಡಿ: ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಬೆಳ್ತಂಗಡಿ ಘಟಕ ಇದರ ಸುವರ್ಣ ಮಹೋತ್ಸವ ವರ್ಷಾಚರಣೆ ಸಂಭ್ರಮ 2023ರ ಪ್ರಯುಕ್ತ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಬೆಳ್ತಂಗಡಿ ಇದರ ಸಹಯೋಗದೊಂದಿಗೆ ‘ಮಾಮರ ಪ್ರಕಾಶನ ಮೈಸೂರು’ ಇವರು ಪ್ರಕಟಿಸಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಯಾಕೂಬ್ ಎಸ್ ಕೊಯ್ಯೂರುಇವರ ಚಿಂತನಾ ಬರಹಗಳ ಸಂಕಲನ ‘ಮೌಲ್ಯಗಳ ಹುಡುಕಾಟದಲ್ಲಿ’ ಪುಸ್ತಕ ಬಿಡುಗಡೆ ಸಮಾರಂಭವು ಅ.14 ರಂದು ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಅಧ್ಯಕ್ಷ ಲ| ಉಮೇಶ್ ಶೆಟ್ಟಿ ವಹಿಸಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತುಅಧ್ಯಕ್ಷ ಡಿ ಯದುಪತಿ ಗೌಡ ಪುಸ್ತಕ ಬಿಡುಗಡೆ ಗೊಳಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ, ಶಿಕ್ಷಕರು ಹಾಗೂ ಹಿರಿಯ ಸಾಹಿತಿ ಅರವಿಂದ ಚೊಕ್ಕಾಡಿ, ಮೌಲ್ಯಗಳ ಹುಡುಕಾಟ ಲೇಖಕರು ಯಾಕೂಬ್ ಎಸ್ ಕೊಯ್ಯೂರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಸದಸ್ಯರು, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಲಯನ್ಸ್ ಆಶ್ರಫ್ ಆಲಿಕುಂಞಿ ಪ್ರಸ್ತಾವಣೆಗೈದರು. ಅಬ್ಬುಲ್ ಖದರ್ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳಾಲು ಶ್ರೀ ಧ.ಮಂ. ಅನುದಾನಿತ ಪ್ರೌಢಶಾಲೆಯಲ್ಲಿ ಹಿಂದಿ ದಿನಾಚರಣೆ

Suddi Udaya

ಶಾಸಕ ಹರೀಶ್ ಪೂಂಜರಿಗೆ ಅಂಗರಕ್ಷಕ ನಿಯೋಜನೆ

Suddi Udaya

ಅರಸಿನಮಕ್ಕಿ ನವಶಕ್ತಿ ಆಟೋ ಚಾಲಕರ -ಮಾಲಕರ ಸಂಘ ಹಾಗೂ ದಾನಿಗಳ ಸಹಕಾರದಿಂದ ‘ನವಶಕ್ತಿ ಅಂಬ್ಯುಲೆನ್ಸ್’ ಲೋಕಾರ್ಪಣೆ

Suddi Udaya

ಗೋವಿಂದೂರು ಗುಡ್ಡಕ್ಕೆ ಬಿದ್ದ ಬೆಂಕಿ : ಗ್ರಾ.ಪಂ ಸದಸ್ಯ ಲತೀಫ್‌ರ ಸಮಯ ಪ್ರಜ್ಞೆ

Suddi Udaya

ಬೆಳ್ತಂಗಡಿ: ಲೋಬೋ ಮೋಟಾರ್ಸ್ ನಲ್ಲಿ ಯುಗಾದಿ – ರಂಜಾನ್ ಹಬ್ಬದ ಪ್ರಯುಕ್ತ ಸ್ಪೆಷಲ್ ಆಫರ್

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ-200 ರಲ್ಲಿ ಸ್ವೀಪ್ ಸಮಿತಿಯಿಂದ ತಾಲೂಕಿನ 241 ಬಿಎಲ್ ಒ ಗಳಿಗೆ ತರಬೇತಿ

Suddi Udaya
error: Content is protected !!