September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ಜೇಸಿಐ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂತೋಷ ಕುಮಾರ್ ಜೈನ್, ಕಾರ್ಯದರ್ಶಿ ಅಕ್ಷತ್ ರೈ

ಕೊಕ್ಕಡ: ಜೇಸಿಐ ಕೊಕ್ಕಡ ಕಪಿಲಾ ಘಟಕದ 2024 ನೇ ಸಾಲಿನ ನೂತನ ಅಧ್ಯಕ್ಷರಾಗಿ ಕಳೆಂಜ ಗ್ರಾಮದ ಶಿಬರಾಜೆ ನಿವಾಸಿ ಸಂತೋಷ್ ಕುಮಾರ್ ಜೈನ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಅಕ್ಷತ್ ರೈ ಅವರನ್ನು ಆರಿಸಲಾಯಿತು.

ಅ.15 ರಂದು ಶಿಬರಾಜೆ ಪಾದೆಯಲ್ಲಿನ ಗ್ರಾಮಾಭ್ಯದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಜಿತೇಶ್ ಎಲ್. ಪಿರೇರಾ ವಹಿಸಿದ್ದರು.

ಅಕ್ಷತ್ ಅವರು ಜೇಸಿ ವಾಣಿ ವಾಚಿಸಿದರು. ಜೆಸಿಂತಾ ಡಿ ಸೋಜ, ಜೋಸೆಫ್ ಪಿರೇರಾ, ಪಿ.ಟಿ. ಸೆಬಾಸ್ಟಿಯನ್, ಜಸ್ವಂತ್ ಪಿರೇರಾ ಮುಂತಾದ ಸದಸ್ಯರು ಶುಭ ಹಾರೈಸಿದರು.

ನಿಕಟಪೂರ್ವ ಅಧ್ಯಕ್ಷರಾದ ಕೆ. ಶ್ರೀಧರ್ ರಾವ್ ಅವರು ಚುನಾವಣೆಯನ್ನು ನಡೆಸಿಕೊಟ್ಟರು.

ನಿತ್ಯಾನಂದ ರೈ, ಬಾಲಕೃಷ್ಣ ದೇವಾಡಿಗ, ವಿನೋದ ಗೌಡ, ಸುಖಲತಾ ರೈ, ವಸಂತ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಕ್ಟರ್ ಸುವಾರಿಸ್ ವಂದಿಸಿದರು.

Related posts

ಪುದುವೆಟ್ಟು: ಶ್ರೀ.ಧ.ಮಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕ ವಿತರಣೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆ ಶೇ. 73.64 ಮತದಾನ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗಣೇಶೋತ್ಸವದಲ್ಲಿ 500 ಭಜಕರಿಂದ ಭಜನೋತ್ಸವ

Suddi Udaya

ರಾಷ್ಟ್ರೀಯ ಕರಾಟೆ ಪಂದ್ಯಾಟ: ಬೆಳ್ತಂಗಡಿಯ ಶೊರಿನ್ ರಿಯೊ ಕರಾಟೆ ಅಶೋಷಿಯೇಶನ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಕಕ್ಕಿಂಜೆ ಮಾಂಡೋವಿ ಮೋಟಾರ್ಸ್‌ನಲ್ಲಿ ನ್ಯೂ ಬ್ರೆಝಾ ಕಾರು ಬಿಡುಗಡೆ

Suddi Udaya

ಎಕ್ಸೆಲ್ ಪ.ಪೂ. ಕಾಲೇಜಿನ ಸಂಸ್ಕೃತ ಉಪನ್ಯಾಸಕ ರಘು ಬಿಜೂರ್ ರಿಗೆ ರಾಜ್ಯ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ

Suddi Udaya
error: Content is protected !!