September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನ.4 : ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಬೃಹತ್ ರಕ್ತದಾನ  ಶಿಬಿರ 

ಬೆಳ್ತಂಗಡಿ: ಗುರುದೇವ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ , ರೆಡ್‌ಕ್ರಾಸ್ ಸೊಸೈಟಿ ಬೆಳ್ತಂಗಡಿ , ದ.ಕ ಜಿಲ್ಲಾ ಸಹಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ , ಸಂಶೋಧನಾ ಸಂಘ (ನಿ) ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಇದರ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ನ 4 ರಂದು ಶ್ರೀ ಗುರುದೇವ ಪ.ಪೂ ಕಾಲೇಜಿನಲ್ಲಿ ಜರುಗಲಿದೆ.

ಶಿಬಿರದ ಉದ್ಘಾಟನೆಯನ್ನು ಶ್ರೀ ಗುರುದೇವ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ , ಮಾಜಿ ಶಾಸಕ ವಸಂತ ಬಂಗೇರ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರೆಡ್‌ಕ್ರಾಸ್ ಸೊಸೈಟಿ ಬೆಳ್ತಂಗಡಿ ಅಧ್ಯಕ್ಷ ಹರಿದಾಸ್ ಎಸ್ . ಎಂ , ದ.ಕ ಜಿಲ್ಲಾ ಸಹಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ಶಿಕ್ಷಣ, ಸಂಶೋಧನಾ ಸಂಘ (ನಿ) ಅಧ್ಯಕ್ಷ ಶಿವಕುಮಾರ್ ಎಸ್.ಎಂ , ರೆಡ್‌ಕ್ರಾಸ್ ಸೊಸೈಟಿ ಬೆಳ್ತಂಗಡಿ ಕಾರ್ಯದರ್ಶಿ ಯಶವಂತ ಪಟವರ್ಧನ್ , ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜ್ ನ ಪ್ರಾಂಶುಪಾಲೆ ಡಾ. ಸವಿತಾ , ಶ್ರೀ ಗುರುದೇವ ಪ.ಪೂ ಕಾಲೇಜ್ ನ ಪ್ರಾಂಶುಪಾಲ ಸುಕೇಶ್ , ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜ್ ನ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಬಿ.ಎ ಶಮಿಯುಲ್ಲ ಭಾಗವಹಿಸಲಿದ್ದಾರೆ.

 ನವೆಂಬರ್ 4 ರಂದು ಬೆಳಗ್ಗೆ 9 ಘಂಟೆಯಿಂದ ಮಧ್ಯಾಹ್ನ 1 ಘಂಟೆ ತನಕ ಶ್ರೀ ಗುರುದೇವ ಪ.ಪೂ ಕಾಲೇಜಿನಲ್ಲಿ ರಕ್ತದಾನ ಶಿಬಿರ ನಡೆಯಲಿದ್ದು, ಯುವಕ/ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ , ರಕ್ತದಾನ ಮಾಡಬೇಕು. ರಕ್ತದಾನದಿಂದ ಇನ್ನೊಂದು ಜೀವವನ್ನು ಉಳಿಸಿದ ಸಾರ್ಥಕತೆ ಇರುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

Related posts

ಬೈಂದೂರು ಬ್ರಹ್ಮಾನಂದಶ್ರೀಗಳ ಚಾತುರ್ಮಾಸ್ಯ ವೃತಾಚರಣೆ: ಕಾರ್ಕಳ ಬಿಲ್ಲವ ಸಂಘದಿಂದ 300 ಮಂದಿ ಭಕ್ತಾದಿಗಳು ಭೇಟಿ

Suddi Udaya

ಗಾಳಿ ಮಳೆ: ಕೃಷಿ ಸೋತ್ತುಗಳಿಗೆ ಹಾನಿ : ತಡೆಗೋಡೆ‌ ಕುಸಿತ

Suddi Udaya

ಮಚ್ಚಿನ ಸ.ಉ. ಹಿ.ಪ್ರಾ. ಶಾಲೆಯ ಮೇಲ್ಚಾವಣಿ ಸೋರಿಕೆ: ಪೋಷಕರಿಂದ ಶೀಟ್, ಹಂಚು ಹಾಕಿ ಶ್ರಮದಾನ

Suddi Udaya

ಸುಮಂತ್ ಕುಮಾರ್ ಜೈನ್ ರಿಂದ ದಿ ರೋಟರೀ ಇಂಟರ್ ನ್ಯಾಷನಲ್ ಫಂಡ್ ಗೆ ರೂ.90,000 ಕೊಡುಗೆ

Suddi Udaya

ಮಾಜಿ ಶಾಸಕ ವಸಂತ ಬಂಗೇರ ಅಗಲುವಿಕೆಗೆ ಕಾಜೂರು ಸಮಿತಿಯಿಂದ ಸಂತಾಪ

Suddi Udaya

ಬೆಳ್ತಂಗಡಿ: 51 ನಾಯಿ ಮರಿಗಳು, 32 ಬೆಕ್ಕು ಮರಿಗಳ ದತ್ತು ಸ್ವೀಕಾರ

Suddi Udaya
error: Content is protected !!