ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ: ಸೃಷ್ಟಿ ಸಂಜೀವಿನಿ ಮಹಿಳಾ ಒಕ್ಕೂಟದ ಮಹಾಸಭೆ

ಶಿಶಿಲ : ಸೃಷ್ಟಿ ಸಂಜೀವಿನಿ ಮಹಿಳಾ ಒಕ್ಕೂಟ ಶಿಶಿಲದ ಮಹಾಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಅ.31ರಂದು ನಡೆಯಿತು.

ಮಹಾಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ, ವಲಯ ಮೇಲ್ವಿಚಾರಕರಾದ ಜಯಾನಂದ್ , ವೀಣಾಶ್ರೀ, ಪಂಚಾಯತ್ ಅಧ್ಯಕ್ಷರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಉಪಾಧ್ಯಕ್ಷರು, ಒಕ್ಕೂಟದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ಮಹಾಸಭೆಯನ್ನು ಪ್ರಾರಂಭಿಸಲಾಯಿತು.

ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಎನ್.ಆರ್.ಎಲ್.ಎಮ್ ಯೋಜನೆಯ ಉದ್ದೇಶ ಮತ್ತು ವಿವಿಧ ಜೀವನೋಪಾಯ ಚಟುವಟಿಕೆ ಬಗ್ಗೆ ಸಾವಿಸ್ತಾರವಾಗಿ ವಿವರಿಸಿದರು. ಒಕ್ಕೂಟದ ನೂತನ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಪದಾಧಿಕಾರಿಗಳ ಪದಗ್ರಹಣ ನಡೆಯಿತು.

ಕೃಷಿ ಸಖಿ ವಸಂತಿ ಒಕ್ಕೂಟದ ವರದಿ ಮಂಡನೆ ಮಾಡಿದರು. ಎಮ್.ಬಿಕೆ ಶಾರದಾ ಕಾರ್ಯಕ್ರಮ ನಿರೂಪಿಸಿದರು. ಎಲ್.ಸಿ.ಆರ್ ಪಿ ಶಶಿ ಭಾಗೀರಥಿ, ಕೃಷಿ ಸಖಿ, ಪಶು ಸಖಿ, ಬ್ಯಾಂಕ್ ಸಖಿ ಭಾಗವಹಿಸಿದ್ದರು. ಸಂಜೀವಿನಿ ಸದಸ್ಯರು. ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶಾರದಾ ಧನ್ಯವಾದವಿತ್ತರು.

Related posts

ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಸತ್ಯಾಸತ್ಯತೆ ಶೀಘ್ರವಾಗಿ ಹೊರಬರಲಿದೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ವಿಜಯೇಂದ್ರ ಹೇಳಿಕೆ

Suddi Udaya

ಅ ಭಾ ಸಾ ಪ ಬೆಳ್ತಂಗಡಿ ತಾ| ಸಮಿತಿ ಪ್ರಥಮ ಅಧಿವೇಶನ “ತೆಂಕಣದಲ್ಲಿ ನುಡಿದಿಬ್ಬಣ “

Suddi Udaya

ಜೂ.30 : ಕೊಕ್ಕಡ ಮಿಯಾವಕಿ ಅರಣ್ಯೀಕರಣ ಗಿಡನಾಟಿ ಕಾರ್ಯಕ್ರಮ

Suddi Udaya

ಮಡಂತ್ಯಾರು: ಬುಲೆಟ್ ಟ್ಯಾಂಕರ್ ಮತ್ತು ಓಮ್ನಿ ಕಾರ್ ಮುಖಾಮುಖಿ ಡಿಕ್ಕಿ

Suddi Udaya

ಶಾಸಕ ಹರೀಶ್ ಪೂಂಜರಿಂದ ಕುಂಡದಬೆಟ್ಟು ಸಂತ ಜಾನ್ ಪೌಲ್ ಚರ್ಚ್ ನ ಕಾಂಕ್ರೀಟ್ ರಸ್ತೆ ಉದ್ಘಾಟನೆ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ವಕ್ಫ್ ಜಾಗೃತಿ ಸಭೆ ಕಾರ್ಯಕ್ರಮ

Suddi Udaya
error: Content is protected !!