September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ ಶ್ರೀ ನಾಗಬ್ರಹ್ಮ ಸ್ವಾಮಿ ಸೇವಾ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವ

ಗೇರುಕಟ್ಟೆ : ನಾಗಬ್ರಹ್ಮ ಸ್ವಾಮಿ ಸೇವಾ ಸನ್ನಿಧಿ, ಶೇಷಗಿರಿ ಕೊಜಪ್ಪಾಡಿಯಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವದ ಅಂಗವಾಗಿ ತಂಬಿಲ ಸೇವೆ, ನವಕ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಆಶ್ಲೇಷಾ ಬಲಿ ಹಾಗೂ ಭಜನಾ ಕಾರ್ಯಕ್ರಮವು ಫೆ.29ರಂದು ನಡೆಯಿತು.

ಬೆಳಿಗ್ಗೆ ನಾಗತಂಬಿಲ ಸೇವೆ, ಸಂದೇಶ್ ಅನಿಲ ಮತ್ತು ಬಳಗ, ಮದ್ದಡ್ಕ ಹಾಗೂ ನಾಗಶ್ರೀ ಮಕ್ಕಳ ಭಜನಾ ಮಂಡಳಿ ಶೇಷಗಿರಿ, ಕೊಜಪ್ಪಾಡಿ ಇವರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಆಶ್ಲೇಷಾ ಬಲಿ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ನಾಗಬ್ರಹ್ಮ ಸ್ವಾಮಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ.ಎನ್ ಆನಂದ ಶೆಟ್ಟಿ, ಕಾರ್ಯದರ್ಶಿ ಮಹೇಶ್. ಖಜಾಂಜಿ ಜಯರಾಂ ಶೆಟ್ಟಿ, ಸದಸ್ಯರು, ನಾಗಶ್ರೀ ಮಕ್ಕಳ ಭಜನಾ ಮಂಡಳಿಯ ಅಧ್ಯಕ್ಷರು, ಸದಸ್ಯರು, ನಾಗಶ್ರೀ ಮಹಿಳಾ ಮಂಡಳಿ ಅಧ್ಯಕ್ಷರು, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.

Related posts

ಜಿಲ್ಲಾ ಮಟ್ಟದ ಖೋ-ಖೋ ಸ್ಪರ್ಧೆ: ನಡ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿ ಕಿಶನ್ ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಕೇಳ್ತಾಜೆ: ಉಮರುಲ್ ಫಾರೂಕ್ ಜುಮಾ ಮಸ್ಜಿದ್ ಮತ್ತು ಸಿರಾಜುಲ್ ಹುದಾ ಮದರಸದಲ್ಲಿ ಈದುಲ್ ಫಿತರ್ ಆಚರಣೆ

Suddi Udaya

ಶೇಷನಾಗ ಜೋಡುಕರೆ ಕಂಬಳದ ಸಮಾರಂಭದಲ್ಲಿ ಚಂದ್ರಕಾಂತ ನಿಡ್ಡಾಜೆ ರವರಿಗೆ ಸನ್ಮಾನ

Suddi Udaya

ಉಜಿರೆ ಶಾಂತಿವನದಲ್ಲಿ “ಅತಿಸ್ಥೂಲ ನಿರ್ವಹಣೆಗೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಶಿಬಿರ

Suddi Udaya

ಮಲವಂತಿಗೆ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ನಿಡ್ಲೆ : ಕುದ್ರಾಯ ಓಡದಕೊಟ್ಯದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

Suddi Udaya
error: Content is protected !!