ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಷು ಕಣಿ ಆಚರಣಾ ಸಮಿತಿಯಿಂದ ಕೇರಳ ಸಂಪ್ರಾದಾಯಿಕ ವಿಷು ಕಣಿ ಆಚರಣೆ: ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಮನೋರಂಜನಾ ಕಾರ್ಯಕ್ರಮ, 30 ಬಗೆಯ ಉಟೋಪಚಾರ

ಬೆಳ್ತಂಗಡಿ: ವಿಷು ಕಣಿ ಆಚರಣಾ ಸಮಿತಿಯಿಂದ 3 ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷು ಕಣಿ ಆಚರಣೆಯು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಎ.13 ರಂದು ನಡೆಯಿತು.

ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ದೀಪ ಬೆಳಗಿಸುವುದರ ಮೂಲಕ ವಿಷು ಕಣಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ ವಿಷು ಕಣಿ ಹಬ್ಬ ಕೃಷಿ ಪ್ರಧಾನವಾಗಿದ್ದು, ವಿವಿಧ ಕೃಷಿಗಳನ್ನು ತಾಲೂಕಿಗೆ ಪರಿಚಯಿಸಿದ್ದು ಕೇರಳದವರು ಎಂದರು.

ಬರೋಡ ತುಳು ಕೂಟದ ಅಧ್ಯಕ್ಷ, ಪ್ರಸಿದ್ದ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ವಿಷು ಕಣಿಯನ್ನು ಉದ್ಘಾಟಿಸಿ ಶುಭ ಕೋರಿದರು.

ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉದ್ಯಮಿ ಮೋಹನ್ ಕುಮಾರ್ ರವರು ತೆಂಗಿನ ಗರಿಯನ್ನು ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನ‌ಪರಿಷತ್ ಶಾಸಕರಾದ ಕೆ.ಪ್ರತಾಪಸಿಂಹ ನಾಯಕ್,ಪ್ರಗತಿ ಪರ ಕೃಷಿಕ ಸಂತೋಷ್ ಕುಮಾರ್ ಕಾಪಿನಡ್ಕ,ಉಜಿರೆ ಗ್ರಾಮ ಪಂಚಾಯತ್ ಅದ್ಯಕ್ಷೆ ಉಷಾ ಕಾರಂತ್,ಬಿಜೆಪಿ ಬೆಳ್ತಂಗಡಿ ಮಂಡಲ‌ ಅಧ್ಯಕ್ಷ ಶ್ರೀನಿವಾಸ್ ರಾವ್, ಮರೋಡಿ ಗ್ರಾ.ಪಂ ಅಧ್ಯಕ್ಷ ರತ್ನಾಕರ ಬುಣ್ಣನ್ ಮುಖ್ಯ‌ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ವಿಷು ಕಣಿ ಆಚರಣಾ ಸಮಿತಿ‌ ಸಂಚಾಲಕರಾದ ಅನಿಲ್ ಕುಮಾರ್ ಶಿಬಾಜೆ ,ಪ್ರಸಾದ್ ಬಿ.ಎಸ್, ಉದ್ಯಮಿ ಬಾಲಕೃಷ್ಣ, ಪ್ರಮುಖರಾದ ದಿವಿನೇಶ್ ಚಾರ್ಮಾಡಿ, ರಿಜೇಶ್ ಜಿ.ಕೆರೆ ಅಖಿಲ್ ತೋಟತ್ತಾಡಿ, ಪ್ರಕಾಶ್ ನೆಕ್ಕರೆ, ರಂಗನಾಥ ಪುದುವೆಟ್ಟು, ಸುರೇಶ್ ಚಾರ್ಮಾಡಿ, ಪ್ರಸಾದ್ ಕೆ.ವಿ ತೋಟತ್ತಾಡಿ, ಪ್ರಕಾಶ್ ಹೊಸಮಠ ಚಾರ್ಮಾಡಿ, ಸುಧೀರ್ ಚಾರ್ಮಾಡಿ ಸಹಕರಿಸಿದರು.

ಬೆಳ್ತಂಗಡಿ ತಾಲೂಕು ವಿಷು ಕಣಿ ಆಚರಣಾ ಸಮಿತಿ ವಿನೂತನವಾಗಿ ಹಬ್ಬವನ್ನು ಆಚರಿಸಲು ನಿರ್ಧರಿಸಿ ವಿಶೇಷ ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಕೇರಳದ ನುರಿತ ಕಲಾವಿದರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.

Related posts

ಪುದುವೆಟ್ಟು ಗ್ರಾ.ಪಂ. ಅಧ್ಯಕ್ಷರಾಗಿ ಅನಿತಾ ಕುಮಾರಿ ಎ, ಉಪಾಧ್ಯಕ್ಷರಾಗಿ ಪೂರ್ಣಾಕ್ಷ ಬಿ ಆಯ್ಕೆ

Suddi Udaya

ಕೊಕ್ಕಡ ಶ್ರೀ ಶಿವಶಕ್ತಿ ಭಜನಾ ಮಂದಿರದ ಲೋಕಾರ್ಪಣೆ ಹಾಗೂ ಭಜನೋತ್ಸವ

Suddi Udaya

ನೆರಿಯ: ಗಂಡಿಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ

Suddi Udaya

ಶಿರ್ಲಾಲು:ಕೃಷಿಕ ಮುಡ್ಜಾಲು ವಸಂತ ಪೂಜಾರಿ ನಿಧನ

Suddi Udaya

ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ: ಶ್ರೀ ಧ.ಮಂ. ಆಂ.ಮಾ. ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಪೆರಿಂಜೆ ಇಂದಿರಾಗಾಂಧಿ ವಸತಿ ಶಾಲಾ ವಿದ್ಯಾರ್ಥಿ ಕುಶಿತ್ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ

Suddi Udaya
error: Content is protected !!