ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಎ.29-30: ಲಾಯಿಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನಕ್ಕೆ ಹಾಗೂ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಶ್ರೀಮಜ್ಜಗದ್ಗುರುಗಳಾದ ಶಂಕರಾಚಾರ್ಯ ಶ್ರೀ ಭಾರತೀತೀರ್ಥಮಹಾಸ್ವಾಮಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಭೇಟಿ

ಬೆಳ್ತಂಗಡಿ ಲಾಯಿಲ ಸುಬ್ರಹ್ಮಣ್ಯನಗರ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾಭವನಕ್ಕೆ ಎ.29 ರಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥಮಹಾಸ್ವಾಮಿ ಹಾಗೂ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ರವರು ಶ್ರೀ ಚಂದ್ರಮೌಳೀಶ್ವರ ಪೂಜಾದಿಗಳನ್ನು ನೆರವೇರಿಸಿ ಆಶೀರ್ವದಿಸಲಿದ್ದಾರೆ.
ಎ.29 ರಂದು ಸಾಯಂಕಾಲ ಗಂಟೆ 6ಕ್ಕೆ ಶ್ರೀ ಜಗದ್ಗುರುಗಳ ಆಗಮನ, ಸ್ವಾಗತ, ಧೂಳಿಪಾದ ಪೂಜೆ, ಫಲಸಮರ್ಪಣೆ, ಆಶೀರ್ವಚನ
ರಾತ್ರಿ ಶ್ರೀ ಚಂದ್ರಮೌಳೀಶ್ವರ ಪೂಜೆ ಪಾದಪೂಜಾ ಸೇವೆಗಳು ನಡೆಯಲಿದೆ.

ನಂತರ ಎ.30 ರಂದು ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಆಗಮಿಸಿ ಚಂಡಿಕಾ ಹೋಮದ
ಪೂರ್ಣಾಹುತಿಯನ್ನು ಸಂಪನ್ನಗೊಳಿಸಿ ಶ್ರೀ ದುರ್ಗಾಪರಮೇಶ್ವರೀ ದೇವರ ಪೂಜೆಯನ್ನು ಮಾಡಿ ಆಶೀರ್ವಚನಗಳನ್ನು ನೀಡಲಿದ್ದಾರೆ.
ಪ್ರಾತಃ 6-೦೦ ಗಂಟೆಗೆ ಶ್ರೀ ಚಂಡಿಕಾ ಹೋಮಾರಂಭ, 9 ಕ್ಕೆ ಶ್ರೀ ಜಗದ್ಗುರುಗಳ ಆಗಮನ, ಸ್ವಾಗತ, ಮೆರವಣಿಗೆ, ಚಂಡಿಕಾ ಹೋಮದ ಪೂರ್ಣಾಹುತಿ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಶ್ರೀ ಜಗದ್ಗುತುಗಳಿಂದ ಪ್ರಸನ್ನಪೂಜೆ, ಕ್ಷೇತ್ರದರ್ಶನ, ಧೂಳಿ ಪಾದಪೂಜೆ, ಫಲಸಮರ್ಪಣೆ, ಆಶೀರ್ವಚನ, ಪಾದಪೂಜಾ-ಭಿಕ್ಷಾವಂದನೆ ಸೇವೆಗಳು, ಸಮಸ್ತ ಭಕ್ತಜನರಿಗೆ
ಶ್ರೀ ಜಗದ್ಗುತುಗಳಿಂದ ಫಲಮಂತ್ರಾಕ್ಷತೆ, ನಡೆಯಲಿದೆ.

Related posts

ಕಲ್ಬೆಟ್ಟು ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

Suddi Udaya

ಬೆಳ್ತಂಗಡಿ ಮಹಿಳಾ ವೃಂದದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಆನೆ ದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಶೆಟ್ಟಿಯವರ ಮನೆಗೆ ಕೆಪಿಸಿಸಿ ಪ್ರ.ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ಅಳದಂಗಡಿಯಲ್ಲಿ “ನೊಚ್ಚ ಸೆರಾಮಿಕ್ಸ್” ಪ್ರಾರಂಭೋತ್ಸವ: ಶಾಸಕ ಹರೀಶ್ ಪೂಂಜ ಸೇರಿದಂತೆ ಹಲವು ಗಣ್ಯರಿಂದ ಶುಭ ಹಾರೈಕೆ

Suddi Udaya

ನಾವೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಉಜಿರೆ : ಅರ್ಜುನ ಪ್ರಶಸ್ತಿ ಪುರಸ್ಕೃತೆ ಪೂವಮ್ಮ ಅವರಿಂದ ಎಸ್.ಡಿ.ಎಂ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

Suddi Udaya
error: Content is protected !!