ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜ್ಯ ಸುದ್ದಿವರದಿ

ಶಾಸಕ ಹರೀಶ್ ಪೂಂಜರ ಮನೆಯಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು: ನಿನ್ನೆಯ ಡೇಟ್ ಹಾಕಿ ಇಂದು ನೋಟಿಸ್ ನೀಡಿದ ಪೊಲೀಸ್ ಇಲಾಖೆ ಶಾಸಕರ ಪರ ವಕೀಲರ ವಾದ

ಬೆಳ್ತಂಗಡಿ: ಮೇಲಂತಬೆಟ್ಟು ನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ
ಶಾಸಕ ಹರೀಶ್ ಪೂಂಜರ‌ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ ಹಿನ್ನೆಲೆಯಲ್ಲಿ ಮೇ 22ರಂದು ಬೆಳಿಗ್ಗೆ ಪೊಲೀಸರು ಅವರ ಮನೆಗೆ ಬಂಧನಕ್ಕೆ ಹೋಗಿದ್ದು, ಭಾರಿ ಸಂಖ್ಯೆಯಲ್ಲಿ ಕಾಯ೯ಕತ೯ರು ಸೇರಿ ವಿರೋಧ ವ್ಯಕ್ತಪಡಿಸಿದರು. ವಾದ-ಪ್ರತಿವಾದ ಮುಂದುವರಿದಿದೆ.


ಮೇಲಂತಬೆಟ್ಟು ಗ್ರಾಮದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಶಿರಾಜ್ ಅವರನ್ನು ಪೊಲೀಸರು ಅವರನ್ನು ರಾತ್ರಿ ಸಮಯ ಬಂಧಿಸಿರುವುದನ್ನು ವಿರೋಧಿಸಿ ಶಾಸಕ ಹರೀಶ್ ಪೂಂಜ ಅವರು ತಡ ರಾತ್ರಿ ಬೆಳ್ತಂಗಡಿ ಠಾಣೆಯಲ್ಲಿ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ನಡೆಸಿದ್ದರು.

ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಶಾಸಕ ಹರೀಶ್ ಪೂಂಜರ‌ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
‌ ಅಮಾಯಕ ಶಶಿರಾಜ್ ಶೆಟ್ಟಿ ಬಂಧನ ಹಾಗೂ ಶಾಸಕರ ಮೇಲೆ ಹಾಕಿದ ಕೇಸ್ ಹಿಂಪಡೆಯಲು ಮೇ 20ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಇಲಾಖೆಗೆ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸ್‌ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ, ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್‌ ಠಾಣೆಗೆ ಆದಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಶಾಸಕ ಹರೀಶ್ ಪೂಂಜರ‌ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.


ಶಾಸಕ ಹರೀಶ್ ಪೂಂಜರ‌ ಮೇಲೆ ಎರಡು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಮೇ 22ರಂದು ಶಾಸಕರ ಮನೆಗೆ ತೆರಳಿ ಮನೆಯಲ್ಲಿ ಇದ್ದ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಮುಂದಾದರು ಈ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾಯ೯ಕತ೯ರು ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದರು.


ಬಂಧನಕ್ಕೆ ಮೊದಲು ಆರೋಪಿಗೆ ನೋಟಿಸ್ ನೀಡಬೇಕು. ನಿನ್ನೆಯ ಡೇಟ್ ಹಾಕಿ ಇಂದು ನೋಟಿಸ್ ನೀಡಲಾಗಿದೆ. ಕೇಸ್ ಹಾಕಿದ ಎಫ್.ಐ.ಆರ್‌ ಸಿಕ್ಕಿಲ್ಲ, ಒಂದು ಕೇಸಿಗೆ ನೋಟೀಸ್ ಕೊಟ್ಟಿದ್ದಾರೆ, ಇನ್ನೊಂದಕ್ಕೆ ಕೊಟ್ಟಿಲ್ಲ, ನೋಟಿಸ್ ಕೊಡದೆ ಬಂಧಿಸುವ ಹಾಗಿಲ್ಲ , ಶಾಸಕರು ಕಾನೂನಿನ ಗೌರವ ಕೊಡುತ್ತಾರೆ ಎಂದು ಶಾಸಕರ ಪರ ವಕೀಲರು ವಾದಿಸಿದರು. ಪೊಲೀಸ್ ಅಧಿಕಾರಿಗಳ ಹಾಗೂ ಶಾಸಕರ ಬೆಂಬಲಿಗರ ನಡುವೆ ವಾದ -ಪ್ರತಿವಾದ ಮುಂದುವರಿದೆ.

Related posts

ಇಳಂತಿಲ ಅಂಡೆತಡ್ಕ ಮನೆ ನಿವಾಸಿ ಅರುಣ್ ನಾಪತ್ತೆ

Suddi Udaya

ಹಿರಿಯ ನಾಗರೀಕರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ, ಬೆಳ್ತಂಗಡಿ ನಗರಕ್ಕೆ ಪ್ರತ್ಯೇಕ ಪೀಢರ್ ಅಳವಡಿಸಿ, ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಗ್ರಾಹಕರ ಆಗ್ರಹ

Suddi Udaya

ನ್ಯಾಯತರ್ಪು ಕಲಾಯಿದೊಟ್ಟು ನಲ್ಲಿ ಧರೆ ಕುಸಿತ: ಇನ್ನಷ್ಟು ಧರೆ ಕುಸಿಯುವ ಭೀತಿ

Suddi Udaya

ವಿ.ಪ. ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪರವಾಗಿ ತಣ್ಣೀರುಪoತ, ಬಾರ್ಯ ಪಂಚಾಯತ್ ವ್ಯಾಪ್ತಿಯಲ್ಲಿ ಸoಸದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಶಾಸಕ ಹರೀಶ್ ಪೂಂಜರಿಂದ ಮತಪ್ರಚಾರ

Suddi Udaya

ನಡ ಸ. ಪ. ಪೂ ಕಾಲೇಜಿನಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೂನಿಯರ್ ಜೆಸಿ ಸಪ್ತಾಹ ಉದ್ಘಾಟನೆ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶಶಿಧರ್ ಶೆಟ್ಟಿ ನವಶಕ್ತಿ ಆಯ್ಕೆ

Suddi Udaya
error: Content is protected !!