September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕೆರೆಗೆ ಜಾರಿ ಬಿದ್ದು ಗರ್ಡಾಡಿ ನಿವಾಸಿ ನವ ವಿವಾಹಿತ ಸಾವು

ಬೆಳ್ತಂಗಡಿ : ನವ ವಿವಾಹಿತನೊಬ್ಬ ಆಕಸ್ಮಿಕವಾಗಿ ಮನೆಯ ಕೆರೆಗೆ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಮೇ.25 ರಂದು ರಾತ್ರಿ ಗರ್ಡಾಡಿಯ ನಂದಿಬೆಟ್ಟದಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದ ಹೊಸಹೊಕ್ಕು ನಿವಾಸಿ ಸದಾಶಿವ ಶೆಟ್ಟಿಯ ಒಬ್ಬನೇ ಮಗನಾಗಿರುವ ಕಳೆದ ಆರು ತಿಂಗಳ ಹಿಂದೆ ಮದುವೆಯಾಗಿದ್ದ ಕೃಷಿ ಕೆಲಸ ಮಾಡಿಕೊಂಡಿರುವ ಶೈಲೇಶ್ ಶೆಟ್ಟಿ(38) ಎಂಬವರು ತನ್ನ ಮನೆಯ ಕೆರೆಗೆ ಮೇ.25 ರಂದು ರಾತ್ರಿ ಸುಮಾರು 8:30 ಕ್ಕೆ ಜಾರಿ ಬಿದ್ದು ಕೆಸರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಂದು ಶೈಲೇಶ್ ಶವವನ್ನು ಮೇಲಕ್ಕೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಮೂರು ವರ್ಷಗಳ ಹಿಂದೆ ಶಿಬಾಜೆಯಲ್ಲಿ ನಡೆದ ಶ್ರೀಧರ ಕೊಲೆ ಪ್ರಕರಣ: ಮರು ತನಿಖೆಗೆ ಎಸ್.ಐ.ಟಿ ರಚಿಸಿ ರಾಜ್ಯ ಸರಕಾರ ಆದೇಶ

Suddi Udaya

ಬೆಳ್ತಂಗಡಿ : ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಗಿ ಕಿಶೋರ್ ಪಿ ನೇಮಕ

Suddi Udaya

ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಗುರುವಾಯನಕೆರೆ ಪ್ರಮೀಳಾ ಜ್ಯುವೆಲ್ಲರ್ಸ್ ನ ಮಾಲಕ ಹರಿಶ್ಚಂದ್ರ ಆಚಾರ್ಯ ನೈಕುಳಿ ನಿಧನ

Suddi Udaya

ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗು ತೋಟದ ಕೆರೆಗೆ ಬಿದ್ದು ಮೃತ್ಯು

Suddi Udaya

ಮಚ್ಚಿನ ಅಂಗನವಾಡಿ ಕೇಂದ್ರಕ್ಕೆ ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಮಕ್ಕಳ ಬರೆಯುವ ಟೇಬಲ್ ಕೊಡುಗೆ

Suddi Udaya
error: Content is protected !!