September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಮೊಗ್ರು: ಮುಗೇರಡ್ಕ ಕಿ.ಪ್ರಾ. ಶಾಲೆಯ ಬಿಸಿಯೂಟ ಕೊಠಡಿಗೆ ಬಂದಾರು ಗ್ರಾ.ಪಂ. ವತಿಯಿಂದ ಶೀಟ್ ಅಳವಡಿಕೆ

ಮೊಗ್ರು : ಮೊಗ್ರು ಗ್ರಾಮದ ಮುಗೇರಡ್ಕ ಕಿರಿಯ ಪ್ರಾಥಮಿಕ ಶಾಲೆಯ ಬಿಸಿಯೂಟ ಕೊಠಡಿಯೊಳಗೆ ಮಳೆಗಾಲದ ಸಮಯದಲ್ಲಿ ನೀರು ಸೋರುತಿರುವುದನ್ನು ಕಂಡು ಶಾಲಾ ಮುಖ್ಯೋಪಾಧ್ಯಾಯರಾದ ಮಾಧವ ಗೌಡ, ಹಾಗೂ ಶಾಲಾಭಿವೃದ್ಧಿ ಸಮಿತಿಯವರು ಪಂಚಾಯತ್ ಗಮನಕ್ಕೆ ತಂದರು.

ತಕ್ಷಣ ಕಾರ್ಯಪ್ರವೃತರಾದ ಬಂದಾರು ಪಂಚಾಯತ್ ಸದಸ್ಯರಾದ ಗಂಗಾಧರ್ ಪೂಜಾರಿ ಮತ್ತು ಬಾಲಕೃಷ್ಣ ಗೌಡ ಮುಗೇರಡ್ಕ ಇವರು ಪಂಚಾಯತ್ ಅನುದಾನದಲ್ಲಿ ಬಂದಾರು ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ ಹಾಗೂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಇವರ ಸಹಕಾರದಲ್ಲಿ ಶಾಲೆ ಪ್ರಾರಂಭಕ್ಕೂ ಮೊದಲೇ ಬಿಸಿಯೂಟ ಕಟ್ಟಡಕ್ಕೆ ಶೀಟ್ ವ್ಯವಸ್ಥೆ ಮಾಡಲಾಯಿತು.

ಶಾಲಾಭಿವೃದ್ಧಿ ಸಮಿತಿ, ಪೋಷಕರು ಹಾಗೂ ವಿದ್ಯಾಭಿಮಾನಿಗಳು ಬಂದಾರು ಗ್ರಾಮ ಪಂಚಾಯತ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Related posts

ದ.ಕ. ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ ಕನ್ಯಾಡಿಯ ಸೇವಾನಿಕೇತನಕ್ಕೆ ಭೇಟಿ

Suddi Udaya

ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣ : ಸಿಬಿಐ ಮೇಲ್ಮನವಿ

Suddi Udaya

ಇತ್ತೀಚೆಗೆ ಮೃತಪಟ್ಟ ಬೂಡುಮುಗೇರು ತೇಜಸ್ವಿನಿಯವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಉರುವಾಲು ಸಿಡಿಲು ಬಡಿದು ಹಾನಿಯಾದ ಸೇಸಪ್ಪ ಗೌಡರ ಮನೆಗೆ ಕಣಿಯೂರು ಗ್ರಾ.ಪಂ. ನಿಂದ ಭೇಟಿ, ಪರಿಶೀಲನೆ

Suddi Udaya

ಕಾಯರ್ತಡ್ಕ: ಹದಗೆಟ್ಟ ರಸ್ತೆ, ಶಿಲಾನ್ಯಾಸಗೊಂಡ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ, ಪ್ರತಿಭಟನೆಗೆ ಗ್ರಾಮಸ್ಥರ ಸಿದ್ದತೆ

Suddi Udaya

ಗೇರುಕಟ್ಟೆ : ಪರಪ್ಪು ಮಸೀದಿಯಲ್ಲಿ ಎಸ್.ಎಸ್.ಎಫ್ ಸದಸ್ಯತ್ವ ಅಭಿಯಾನದ ಪೋಸ್ಟರ್ ಬಿಡುಗಡೆ

Suddi Udaya
error: Content is protected !!