ಗ್ರಾಮಾಂತರ ಸುದ್ದಿಚಿತ್ರ ವರದಿಚುನಾವಣೆ

ವಿಧಾನ ಪರಿಷತ್ ಚುನಾವಣೆ: ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಪದವಿಧರ ಕ್ಷೇತ್ರ ಶೇ 78.82 ಶಿಕ್ಷಕರ ಕ್ಷೇತ್ರ ಶೇ 81.54 ಮತದಾನ

ಬೆಳ್ತಂಗಡಿ: ಜೂ.3ರಂದು ನಡೆದ ವಿಧಾನ ಪರಿಷತ್‌ನ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಪದವಿಧರ ಕ್ಷೇತ್ರದಲ್ಲಿ ಶೇ 78.82 ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಶೇ 81.54 ಮತದಾನ ದಾಖಲಾಗಿದೆ. ಪದವೀಧರ ಕ್ಷೇತ್ರದಲ್ಲಿ 1543 ಮತದಾರರಿದ್ದು ಇವರಲ್ಲಿ 1216 ಮಂದಿ ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ.

ಇವರಲ್ಲಿ 686 ಪುರುಷರ ಪೈಕಿ 573 ಹಾಗೂ 857 ಮಹಿಳೆಯರ ಪೈಕಿ 643 ಮತದಾರರು ಮತ ಚಲಾಯಿಸಿದ್ದು, ಶೇಕಡ 78.82 ಮತದಾನವಾಗಿದೆ. ಶಿಕ್ಷಕರ ಕ್ಷೇತ್ರದಲ್ಲಿ 878 ಮತದಾರರಿದ್ದು ಇವರಲ್ಲಿ 716 ಮಂದಿ ಮತದಾರರು ತಮ್ಮ ಮತ ಚಲಾಯಿಸಿ ಶೇ 81.54 ಮತದಾನವಾಗಿದೆ. 350 ಪುರುಷರ ಪೈಕಿ 323ಹಾಗೂ 508 ಮಹಿಳಾ ಮತದಾರ 393 ಪೈಕಿ ಮತ ಚಲಾಯಿಸಿದ್ದಾರೆ.

ತಾಲೂಕು ಆಡಳಿತ ಸೌಧದಲ್ಲಿಒಟ್ಟು ಮೂರು ಬೂತ್ ಗಳಲ್ಲಿ ಮತದಾನ ನಡೆದಿದ್ದು ಪದವಿಧರ ಕ್ಷೇತ್ರದ ಚುನಾವಣೆಗೆ ಎರಡು ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಒಂದು ಬೂತ್ ನಲ್ಲಿ ಮತದಾನ ನಡೆಯಿತು. ಅಗತ್ಯ ಸಂದರ್ಭಕ್ಕೆ ಒಂದು ಬೂತನ್ನು ಹೆಚ್ಚುವರಿ ಆಗಿ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಬೂತ್ ಗೆ ತಲಾ ಓರ್ವ ಪಿ ಆರ್ ಒ, ಎಪಿಆರ್ ಒ,ಡಿ ಗ್ರೂಪ್, ವಿಡಿಯೋ ಆಬ್ಜರ್ವರ್, ಮೈಕ್ರೋ ಆಬ್ಜರ್ವರ್, ಪೋಲಿಸ್ ಹಾಗೂ ತಲಾ ಇಬ್ಬರು ಪಿಒ ಕಾರ್ಯನಿರ್ವಹಿಸಲಿದ್ದಾರೆ.ಒಟ್ಟು 24 ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

Related posts

ಕಾಶಿಬೆಟ್ಟು ಸ್ವಾಮಿ ಪ್ರಸಾದ್ ಅಸೋಸಿಯೇಟ್ಸ್ ನಲ್ಲಿ ಆಯುಧ ಪೂಜೆ

Suddi Udaya

ಸಂತೃಪ್ತಿ ಆರ್. ರವರಿಗೆ ಡಿವಿಜನಲ್ ಲೇವಲ್ ಎಕ್ಸಲೆಂಟ್ ಅವಾರ್ಡ್ ಪ್ರಶಸ್ತಿ

Suddi Udaya

ಉಪ್ಪಿನಂಗಡಿ: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಮಾಹಿತಿ

Suddi Udaya

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿಜ್ -ವರ್ಲ್ಡ್ 2025

Suddi Udaya

ಅಳದಂಗಡಿಯಲ್ಲಿ ಕಾಳುಮೆಣಸು ಮತ್ತು ಜಾಯಿಕಾಯಿ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ

Suddi Udaya
error: Content is protected !!