September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಲ್ಯಾಬ್ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಅತ್ಯಾಧುನಿಕ ಸಿಎಲ್‌ಐಎ ಮೆಶಿನ್ ಅಳವಡಿಕೆ

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಲ್ಯಾಬ್‌ನಲ್ಲಿ ಹಾರ್ಮೋನ್ ಪರೀಕ್ಷೆ, ಬಂಜೆತನ ಪರೀಕ್ಷೆ ಮತ್ತು ಸೋಂಕು ರೋಗಗಳ ಪತ್ತೆಗಾಗಿ ಕೆಮಿಲುಮಿನೆಸೆನ್ಸ್ ಇಮ್ಯೂನೊಲಿಸೆ ಸಿಎಲ್-9೦೦ಐ ಎಂಬ ಅತ್ಯಾಧುನಿಕ ಯಂತ್ರವನ್ನು ಆ. 5ರಂದು ಅಳವಡಿಸಲಾಯಿತು.
ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರ ಆಶಯದಂತೆ, ಡಿ. ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಿತದರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತದೆ. ಅವರ ನಿರ್ದೇಶನದಂತೆ ರೋಗಿಗಳಿಗೆ ಶೀಘ್ರವಾಗಿ ಮತ್ತು ನಿಖಿರವಾದ ವರದಿ ನೀಡಬಲ್ಲ ಅತ್ಯಾಧುನಿಕ ವೈದ್ಯಕೀಯ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಪ್ರಸ್ತುತ ಅಳವಡಿಸಿರುವ ಸಿಎಲ್-೯೦೦ಐ ಯಂತ್ರ ಅತ್ಯಂತ ಹೆಚ್ಚು ನಿಖರವಾಗಿ ಮತ್ತು ಅತೀ ಶೀಘ್ರವಾಗಿ ಫಲಿತಾಂಶ ನೀಡಬಲ್ಲದು.


ಇಲ್ಲಿ ಈಗಾಗಲೇ ಟೈಪ್-2 ಮಧುಮೇಹ ಪತ್ತೆ ಹಚ್ಚುವಲ್ಲಿ ಹೆಚ್ಚು ನಿಖರವಾದ ವರದಿ ನೀಡಬಲ್ಲ ಹೈಪಫಾರ್ಮೆನ್ಸ್ ಲಿಕ್ವಿಡ್ ಕ್ರೊಮ್ಯಾಟೋಗ್ರಫಿ ಯಂತ್ರವನ್ನು ಅಳವಡಿಸಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್‌ಪಿಎಲ್‌ಸಿ ವಿಧಾನದ ಮೂಲಕ ಟೈಪ್-೨ ಮಧುಮೇಹ ಪತ್ತೆ ಹಚ್ಚಲು ಸಾಧ್ಯವಾಗುವ ಏಕೈಕ ಆಸ್ಪತ್ರೆ ಇದಾಗಿದೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.
ವರದಿ: ನಾರಾಯಣ. ಬಿ

Related posts

ಬಂಗಾಡಿ ಶ್ರೀ ವೀರಭದ್ರ ಭದ್ರಕಾಳಿ ಲಿಂಗತ್ಯಾರ್ ನಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ದಶಮ ಸಂಭ್ರಮದ ಸಭಾ ಕಾರ್ಯಕ್ರಮ

Suddi Udaya

ಕರಾಟೆ ಕ್ರೀಡಾಕೂಟ: ಬೆಳ್ತಂಗಡಿ ಎಸ್ ಡಿ ಎಮ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಮಾ 11: ಉಜಿರೆ ಬ್ರಹ್ಮಕಲಶೋತ್ಸವ: “ಧರ್ಮಯಾನ “ಐತಿಹಾಸಿಕ ಶೋಭಾಯಾತ್ರೆ-ಪ್ರಚಾರ ವಾಹನ ಅಭಿಯಾನಕ್ಕೆ ಚಾಲನೆ

Suddi Udaya

ಗಾಳಿ ಮಳೆ: ಕೃಷಿ ಸೋತ್ತುಗಳಿಗೆ ಹಾನಿ : ತಡೆಗೋಡೆ‌ ಕುಸಿತ

Suddi Udaya

ಕಳಿಯ : ಧಾರಕಾರ ಮಳೆಗೆ ಮನೆಯ ತಡೆ ಗೋಡೆ ಕುಸಿತ

Suddi Udaya
error: Content is protected !!