September 6, 2026
ವರದಿ

ಮಡಂತ್ಯರು ವಲಯದಲ್ಲಿ ನೂತನವಾಗಿ ಆಯ್ಕೆಯಾದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ

ಮಡಂತ್ಯರು ವಲಯದಲ್ಲಿ ನೂತನವಾಗಿ ಆಯ್ಕೆಯಾದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ ಬಸವನಗುಡಿ ವಿಶ್ವಕರ್ಮ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ಯೋಜನಕಛೇರಿ ವ್ಯಾಪ್ತಿಯ ಮಡಂತ್ಯರು ವಲಯದಲ್ಲಿ ನೂತನವಾಗಿ ಆಯ್ಕೆಯಾದ ಒಕ್ಕೂಟದ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಗಾರ ಬಸವನಗುಡಿ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತ್ತು. ಜಿಲ್ಲಾ ನಿರ್ದೇಶಕರು ಮಹಾಬಲ ಕುಲಾಲ್ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಪದಾಧಿಕಾರಿಗಳ ಪಾತ್ರದ ಕುರಿತು ತರಬೇತಿ ನೀಡಿದ್ದರು ನಾಯಕತ್ವ ಹಾಗೂ ಸಂವಹನ ಕುರಿತಾಗಿ ತರಬೇತಿ ನೀಡಿದ್ದ ಯತೀಶ್ ನಿಲಯ ಪಾಲಕರು ರತ್ನಮಾನಸ ಉಜಿರೆ ಇವರು ನಾಯಕತ್ವ ವಹಿಸಿಕೊಂಡವರು ಸಮಾಜ ಮುಖಿಯಾಗಿ ಕೆಲಸ ಮಾಡಬೇಕು ಪದಾಧಿಕಾರಿಗಳು ಸ್ವ-ಇಚ್ಛೆಯಿಂದ ಆಯ್ಕೆಯಾದ ಬಳಿಕ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ನಿಯಮಡಿಯಲ್ಲಿ ಜನರಿಗೆ ಸೇವೆ ನೀಡಬೇಕು ಎಂದು ಹೇಳಿದರು.ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪದ್ಮನಾಭ ಸಾಲ್ಯಾನ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಒಕ್ಕೂಟ ಸಭೆ ನಡೆಸುವ ವಿಧಾನ ಉಪಸಮಿತಿ ಸಭೆಯ ಕುರಿತು ಮಾಹಿತಿಯನ್ನು ಕಚೇರಿ ಲೆಕ್ಕ ಪರಿಶೋಧನಾ ವಿಭಾಗದ ಯೋಜನಾಧಿಕಾರಿ ಅಮರ್ ಪ್ರಸಾದ್ ಪ್ರಾದೇಶಿಕ ಕಚೇರಿ ಉಡುಪಿ ಇವರು ಮಾಹಿತಿ ನೀಡಿದರು,ಮತ್ತು ಗುರುವಾಯನಕೆರೆ ಯೋಜನಕಛೇರಿ ಯೋಜನಾಧಿಕಾರಿ ದಯಾನಂದ ಪೂಜಾರಿ, ವಲಯದ ಮೇಲ್ವಿಚಾರಕರು ,ಮಡಂತ್ಯಾರ್ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು,ಪದಾಧಿಕಾರಿಗಳು,ವಲಯ ಎಲ್ಲಾ ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು, ವಲಯದ ನೂತನ ಅಧ್ಯಕ್ಷರಾಗಿ ಜಯ ಪೂಜಾರಿ ಕುತ್ತಿನ ಇವರನ್ನು ಆಯ್ಕೆ ಮಾಡಲಾಯಿತ್ತು

Related posts

ನಡ: ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ: ಧಾರ್ಮಿಕ ಸಭಾ ಉದ್ಘಾಟನಾ ಸಮಾರಂಭ

Suddi Udaya

ನಿಡ್ಲೆ : ಬೂಡುಜಾಲು ನಿವಾಸಿ ಸತೀಶ್ ಹೃದಯಾಘಾತದಿಂದ ನಿಧನ

Suddi Udaya

ವಿಶ್ವ ತಂಬಾಕು ರಹಿತ ದಿನ :ಉಜಿರೆ ಎಸ್ ಡಿ ಎಂ ಪ.ಪೂ. ಕಾಲೇಜಿನ ಎನ್ ಎಸ್ ಎಸ್ ಸ್ವಯಂ ಸೇವಕರಿಂದ ಜಾಗೃತಿ ಜಾಥಾ 

Suddi Udaya

ಧರ್ಮಸ್ಥಳ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಉತ್ತಮ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಮಾಲಾಡಿ: ಅಪ್ರಾಪ್ತ ಬಾಲಕ ಸವಾರಿ ಮಾಡುತ್ತಿದ್ದ ಬೈಕ್ ಡಿಕ್ಕಿ: ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಗಾಯ

Suddi Udaya

ಮಲವಂತಿಗೆ ಶ್ರೀ ವಿದ್ಯಾ ಗಣಪತಿ ಪೂಜ್ಯೋತ್ಸವ ಸಮಿತಿ ಅಧ್ಯಕ್ಷರಾಗಿ ತೀಕ್ಷಿತ್ ಕೆ., ಕಾರ್ಯದರ್ಶಿಯಾಗಿ ಜಯಂತ ಹೆಗ್ಡೆ ಆಯ್ಕೆ

Suddi Udaya
error: Content is protected !!