September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಸಹೋದರ, ಸಹೋದರಿಯರಿಗೆ ರಾಖಿಯನ್ನು ಕಟ್ಟುವ ಮುಖೇನ ರಕ್ಷಾ ಬಂಧನ ಹಬ್ಬ ಆಚರಣೆ

ಸನಾತನ ಧರ್ಮದಲ್ಲಿ ರಕ್ಷಾ ಬಂಧನ ಹಬ್ಬವನ್ನು ಶ್ರಾವಣ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ಆರತಿ ಬೆಳಗಿಸಿ, ಪ್ರೀತಿಯ ಪ್ರತಿಕವೆಂದು ರಾಖಿಯನ್ನು ಕಟ್ಟುತ್ತಾರೆ. ಸಹೋದರರು ಏನಾದರೂ ಒಂದು ವಸ್ತುವನ್ನು ಉಡುಗೊರೆಯಾಗಿ ನೀಡಿ ಆಶೀರ್ವಾದ ನೀಡುತ್ತಾರೆ. ಇದರ ಹಿಂದೆ ಸಹೋದರನ ಏಳಿಗೆಯಾಗಬೇಕು ಮತ್ತು ಸಹೋದರನು ಸಹೋದರಿಯ ರಕ್ಷಣೆಯನ್ನು ಮಾಡಬೇಕು ಎನ್ನುವ ಉದ್ದೇಶವಿರುತ್ತದೆ. ಇಬ್ಬರಲ್ಲಿನ ಕೊಡುಕೊಳ್ಳುವ ಲೆಕ್ಕಾಚಾರ ಕಡಿಮೆಯಾಗಿ ಈಶ್ವರನತ್ತ ಪ್ರಯಾಣಿಸುವ ಅವಕಾಶವನ್ನು ಒದಗಿಸುತ್ತದೆ. ಹಾಗೂ ಈ ಹಬ್ಬವು ಇಬ್ಬಾಗವಾಗಿರುವ ಸಮಾಜವನ್ನು ಒಗ್ಗೂಡಿಸುವ ಒಂದು ಸಂಧಿಯಾಗಿದೆ. ಇದರಿಂದ ಕುಟುಂಬದಲ್ಲಿರುವ ಕಲಹ ಶಾಂತವಾಗುತ್ತದೆ. ಮನಸ್ತಾಪ ದೂರವಾಗುತ್ತದೆ ಮತ್ತು ಸಾಮೂಹಿಕ ಸಂಕಲ್ಪ ಶಕ್ತಿ ಕಾರ್ಯಗತವಾಗುತ್ತದೆ. ಈ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯು ಸಹೋದರರಿಗೆ ರಾಖಿಯನ್ನು ಕಟ್ಟುವ ಮುಖಾಂತರ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು.

ಈ ನಿಟ್ಟಿನಲ್ಲಿ ಶಾಸಕ ಹರೀಶ್ ಪೂಂಜಾರವರಿಗೆ, ಪತ್ರಕರ್ತರಿಗೆ, ಹಿಂದುತ್ವನಿಷ್ಠರಿಗೆ ಹಾಗೂ ಧರ್ಮಪ್ರೇಮಿಗಳಿಗೆ ರಾಕಿ ಕಟ್ಟುವ ಮೂಲಕ ರಕ್ಷಾಬಂಧನದ ಶುಭಾಶಯವನ್ನು ಹೇಳಲಾಯಿತು.

Related posts

ಮೇಲಂತಬೆಟ್ಟು: ಕೃಷಿಕ ಯುವಕ ಮಂಡಲದ ಆಶ್ರಯದಲ್ಲಿ ಕೇಸರ್ ದ ಕಂಡಡ್ ಒಂಜಿ ದಿನ : ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಆರ್.ಎಸ್.ಎಸ್ ಸಂಘಟನೆಗೆ ನೂರರ ಸಂಭ್ರಮ, ಬಡ ಕುಟುಂಬಕ್ಕೆ ಮನೆ ನಿರ್ಮಾಣ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಬಿ.ವೈ. ರಾಘವೇಂದ್ರ ಭೇಟಿ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya

ಕನ್ನಡದಲ್ಲಿ ಬರಲಿದೆ ದಸ್ಕತ್ ತುಳು ಚಿತ್ರ

Suddi Udaya

ಬೆಳ್ತಂಗಡಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ತಾಲೂಕು ಮಟ್ಟದ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya
error: Content is protected !!