ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ಯಾಡಿ-2 ಸ.ಉ.ಹಿ. ಪ್ರಾಥಮಿಕ ಶಾಲೆಯಲ್ಲಿ “ರಾಷ್ಟ್ರೀಯ ಬಾಹ್ಯಾಕಾಶ ದಿನ”

ಕನ್ಯಾಡಿ-2: ಚಂದ್ರಯಾನ -3 ಮಿಷನ್ ನ ಯಶಸ್ಸಿನ ಸ್ಮರಣಾರ್ಥ “ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ” 2023 ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ನ್ನು ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಇಳಿಸಲಾಗಿತ್ತು . ಈ ಮೂಲಕ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶವೆಂಬ ಹೆಗ್ಗಳಿಕೆ ಗಳಿಸಿತ್ತು .ಅಲ್ಲದೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತ ವೆಂಬ ಅಭಿದಾನಕ್ಕೂ ಪ್ರಾಪ್ತವಾಗಿತ್ತು ಇದರ ಪ್ರಯುಕ್ತ “ರಾಷ್ಟ್ರೀಯ ಬಾಹ್ಯಾಕಾಶ ದಿನ” ವನ್ನು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ-2 ಯಲ್ಲಿ ಆಚರಿಸಲಾಯಿತು.


ಆ ಪ್ರಯುಕ್ತ ಮಕ್ಕಳಿಂದ ಈ ದಿನದ ವಿಷೇಶತೆ ಕುರಿತು ಮಾಹಿತಿ ಚಿತ್ರ ಕಲೆ ಮತ್ತು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದ ಹತ್ತು ತಂಡಗಳಲ್ಲಿ ತಲಾ ಎರಡು ತಂಡಗಳು ಪ್ರಥಮ ಮತ್ತು ದ್ವಿತೀಯ ಬಹುಮಾನ ಗಳಿಸಿದರು. ಈ ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಹಾಗೂ ಮಕ್ಕಳ ಸಹಭಾಗಿತ್ವದಲ್ಲಿ ಬಹಳ ಅರ್ಥವತ್ತಾಗಿ ಆಚರಿಸಲಾಯಿತು.

Related posts

ವಿಕಲಚೇತನರ ಇಲಾಖೆ ರಾಜ್ಯ ಆಯುಕ್ತೆ ಲತಾ ಕುಮಾರಿ (ಐ.ಎ.ಎಸ್) ಧರ್ಮಸ್ಥಳ ಭೇಟಿ

Suddi Udaya

ಕೋಟ್ಯಾಂತರ ರೂ. ಮೌಲ್ಯದ ಆರ್ಗ್ಯಾನಿಕ್ ಬ್ಯಾಗ್ ಮಾಡುವ ಯಂತ್ರದ ಹಣ ಹಿಂತಿರುಗಿಸದೆ ವಂಚನೆ ಆರೋಪ: ಬಳಂಜ ಅಶ್ವತ್ ಹೆಗ್ಡೆ ವಿರುದ್ಧ ಮಹಿಳೆ ದೂರು: ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಸ್ನಾತಕೋತ್ತರ ವಿಭಾಗದಲ್ಲಿ ನೈನಾಡಿನ ಚೇತನಾ ರವರಿಗೆ ನಾಲ್ಕು ಚಿನ್ನದ ಪದಕ

Suddi Udaya

ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ.ಶಿಕ್ಷಕ ರಕ್ಷಕ ಸಂಘದ ಪೋಷಕರ ಸಭೆ .

Suddi Udaya

ಮೇ 31: ಉಜಿರೆಯಲ್ಲಿ ಡಿ.ಡಿ ಮೆನ್ಸ್ & ವಿಮೆನ್ಸ್ ಸೆಂಟರ್ ಮಲ್ಟಿ ಶೋರೂಮ್ ಉದ್ಘಾಟನೆ

Suddi Udaya

ಬೆಳ್ತಂಗಡಿಯಲ್ಲಿ ವಿಜಯ ಸಂಕಲ್ಪ ಯಾತ್ರೆ

Suddi Udaya
error: Content is protected !!