September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ ಕುಮಾರ್ ಹೆಗ್ಡೆ ರವರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ

ಉಜಿರೆ:ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘಟನೆಯ ಉನ್ನತ ಮಟ್ಟದ ಸಮಿತಿಯು 2024ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿಗಾಗಿ ಪ್ರಾಂಶುಪಾಲರಾಗಿ ಆಡಳಿತ ನಿರ್ವಹಣಾ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಎ. ಕುಮಾರ ಹೆಗ್ಡೆ ಅವರನ್ನು ಆಯ್ಕೆ ಮಾಡಿದೆ.

ಕಾಲೇಜಿನ ಪಠ್ಯ, ಪಠ್ಯೇತರ, ಸಾಂಸ್ಕೃತಿಕ, ಕ್ರೀಡಾ, ವಿಸ್ತರಣಾ ಹಾಗೂ ಸಂಶೋಧನಾ ಕ್ಷೇತ್ರಗಳ ಅಭಿವೃದ್ಧಿಗೆ ರಚನಾತ್ಮಕ ಚಟುವಟಿಕೆಗಳನ್ನು ಸಂಘಟಿಸಿದ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಇದೇ ಸೆಪ್ಟೆಂಬರ್ 15 ರಂದು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಜರಗುವ ವಿಶೇಷ ಸಮಾರಂಭದಲ್ಲಿ ಖ್ಯಾತ ಶಿಕ್ಷಣ ತಜ್ಞರು, ರಾಷ್ಟ್ರೀಯ ಮೌಲ್ಯಾಂಕನ ಪರಿಷತ್(ನ್ಯಾಕ್) ನ ಅಧ್ಯಕ್ಷರಾದ ಡಾ. ಅನಿಲ್ ಸಹಸ್ರಬುದ್ಧೆ ಅವರು ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.

Related posts

ಆರಂಬೋಡಿ 136ನೇ ಬೂತ್ ಸಮಿತಿಯಲ್ಲಿ ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಬಲಿದಾನ್ ದಿವಸ್ ಆಚರಣೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ಬ್ರಹ್ಮಕಲಶದ ದಿನಾಚರಣೆ

Suddi Udaya

ನಡ: ಸ್ಟಾರ್‌ಲೈನ್ ಆಂಗ್ಲ ಮಾಧ್ಯಮ ಶಾಲಾ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ

Suddi Udaya

ಜಾರಿಗೆಬೈಲಿನಲ್ಲಿ ಕೆ.ಎಮ್.ಜೆ. ವತಿಯಿಂದ “ಪ್ರಜಾ ಭಾರತ” ಸೌಹಾರ್ಧ ಕಾರ್ಯಕ್ರಮ

Suddi Udaya

ನ.1:ಬೆಳ್ತಂಗಡಿ ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾಭವನದಲ್ಲಿ ‘ಜೈ ಭಜರಂಗ ಬಲಿ’ ನಾಟಕ ಮತ್ತೊಮ್ಮೆ ಪ್ರದರ್ಶನ

Suddi Udaya

ಪಡ್ಡಂದಡ್ಕ ರಸ್ತೆ ದುರಸ್ಥಿ ಆಗ್ರಹಿಸಿ ಹೊಸಂಗಡಿ ಪಂಚಾಯತ್‌ಗೆ ಎಸ್‌ಡಿಪಿಐ ನಿಂದ ಮನವಿ

Suddi Udaya
error: Content is protected !!