ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ತಾಲೂಕು ಮಟ್ಟದ ಬಾಲಕ, ಬಾಲಕಿಯರ ಮ್ಯಾಟ್ ಕಬ್ಬಡಿ ಪಂದ್ಯಾಟ

ಕೊಯ್ಯೂರು : ಬೆಳ್ತಂಗಡಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ, ಬಾಲಕಿಯರ ಮ್ಯಾಟ್ ಕಬ್ಬಡಿ ಪಂದ್ಯಾಟ ಕೊಯ್ಯೂರು ಸರಕಾರಿ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಜರುಗಿತು.
ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಯಾಮಣಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.


ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ,ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಉಪನಿರ್ದೇಶಕರ ಕಚೇರಿ ಭುವನೇಶ್ ಜೆ, ಬೆಳ್ತಂಗಡಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ವಿಧ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಂದ್ಯಾಟದಲ್ಲಿ ಭಾಗವಹಿಸುವ ಅವಶ್ಯಕತೆಗಳ ಬಗ್ಗೆ ಮಾತನಾಡಿದರು.


ಬೆಳ್ತಂಗಡಿ, ಕೊಯ್ಯೂರು, ಧರ್ಮಸ್ಥಳ, ಪೂಂಜಾಲಕಟ್ಟೆ, ಶ್ರೀರಾಮ ಸುಲ್ಕೇರಿ, ಗೇರುಕಟ್ಟೆ, ನಾವೂರು, ಬದನಾಜೆ,ವೇಣೂರು, ಮೊರಾರ್ಜಿಮಚ್ಚಿನಾ,ಬೆಳಾಲು,ವಿವೇಕಾನಂದ ಮುಂಡಾಜೆ ಪ್ರೌಢಶಾಲಾ 8 ಬಾಲಕ, 8ಬಾಲಕಿಯರ ತಂಡದ ವಿಧ್ಯಾರ್ಥಿಗಳು ಭಾಗವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರು, ಮಕ್ಕಳ ಪೋಷಕರು ಭಾಗವಹಿಸಿದರು.ಕೊಯ್ಯೂರು ಸರಕಾರಿ ಪ್ರೌಢ ಶಾಲೆ ನೇತೃತ್ವ ವಹಿಸಿದ್ದರು.

Related posts

ಬೆಳ್ತಂಗಡಿ ಪಿ.ಎಂ.ಶ್ರೀ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ಚುನಾವಣೆ

Suddi Udaya

ಗರ್ಡಾಡಿ : ಪ್ರಗತಿಪರ ಕೃಷಿಕ ಹಾಗೂ ಖ್ಯಾತ ಜ್ಯೋತಿಷಿ ಅನಂತ ಗೋವಿಂದ ಪಟವರ್ಧನ್ ನಿಧನ

Suddi Udaya

ಶಿಶಿಲ : 9 ವರ್ಷದ ಬಾಲಕ ಅಶ್ವಿನ್ ನಿಧನ

Suddi Udaya

ನ್ಯಾಯತರ್ಪು ಕಲಾಯಿದೊಟ್ಟು ನಲ್ಲಿ ಧರೆ ಕುಸಿತ: ಇನ್ನಷ್ಟು ಧರೆ ಕುಸಿಯುವ ಭೀತಿ

Suddi Udaya

ಮುಂಡಾಜೆ ಮತಗಟ್ಟೆ 74 ರಲ್ಲಿ ಕೈ ಕೊಟ್ಟ ಮತಯಂತ್ರ

Suddi Udaya

ತಾಲೂಕಿನಲ್ಲಿ ಶೇ.25 ರಷ್ಟು ಮತದಾನ

Suddi Udaya
error: Content is protected !!