ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಹೋರಾಟಗಳಿಗೆ ಸಾರ್ವಜನಿಕರು ಬೆಂಬಲ ನೀಡಬೇಕು: ಧರ್ಮಗುರು ಫಾ. ಆದರ್ಶ್ ಜೋಸೆಫ್

ಬೆಳ್ತಂಗಡಿ: ಪಶ್ಚಿಮ ಘಟ್ಟದ ತಪ್ಪಲಿನ ಅಂಚಿನಲ್ಲಿರುವ ಗ್ರಾಮಗಳಿಗೆ ಹಾಗೂ ರೈತರ ಕೃಷಿ ಜಾಗಗಳಿಗೆ ಕಸ್ತೂರಿ ರಂಗನ್ ವರದಿಯಿಂದ ಆಗುವ ತೊಂದರೆಗಳ ವಿರುದ್ದ ‘ಮಲನಾಡು ಜನ ಹಿತ ರಕ್ಷಣಾ ವೇದಿಕೆಯ’ ನೇತೃತ್ವದಲ್ಲಿ ನ. 15 ರಂದು ಗುಂಡ್ಯದಲ್ಲಿ ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಪುದುವೆಟ್ಟು ಗುತ್ತಿಗಾರು ಧರ್ಮಗುರು ಫಾ. ಆದರ್ಶ್ ಜೋಸೆಫ್ ತಿಳಿಸಿದರು.

ಹತ್ತು ಹಲವಾರು ಸಮಸ್ಯೆಗಳಿಂದ ನಮ್ಮ ರೈತರು ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದಾರೆ. ಅದರಲ್ಲಿ ಅವೈಜಾನಿಕ ಕಸ್ತೂರಿ ರಂಗನ್ ವರದಿ, ಪಶ್ಚಿಮ ಘಟ್ಟ ಮತ್ತು ಜನವಸತಿ ಕೇಂದ್ರಗಳ ಗಡಿ ಗುರುತು ಆಗದೇ ಇರುವುದು, ಫ್ಲೋಟಿಂಗ್ ಸಮಸ್ಯೆ, ಹಾಗೂ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ಆಗದೇ ಇರುವುದು. ಈ ಎಲ್ಲಾ ಸಮಸ್ಯೆಗಳಿಂದ ರೈತರ ಬದುಕು ತ್ರಿಶಂಕು ಲೋಕದಲ್ಲಿ ಇದೆ. ಆದುದ್ದರಿಂದ ಎಲ್ಲಾ ರೈತರು, ಭಾಧಿತ ಗ್ರಾಮಸ್ಥರು, ಸಂಘ ಸಂಸ್ಥೆಗಳು ಪಕ್ಷತಿತಾವಾಗಿ, ಧರ್ಮತಿತವಾಗಿ ಈ ಹೋರಾಟಕ್ಕೆ ಬೆಂಬಲ ಕೊಡಬೇಕಾಗಿ ಕೇಳಿಕೊಳ್ಳುತ್ತೇನೆ. ರೈತರಿಗೆ ಮಾನಸಿಕ ಒತ್ತಡ ಕೊಡುವಂತ ಈ ಸಮಸ್ಯೆಗಳಿಗೆ ತಾರ್ಕಿಕವಾದ ಅಂತ್ಯ ಕಾಣುವ ತನಕ ಹೋರಾಟ ಮುಂದುವರಿಸಬೇಕಾಗಿದೆ. ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಕೊಡಬೇಕಾಗಿ ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

,

Related posts

ಧರ್ಮಸ್ಥಳ ಗ್ರಾ.ಪಂ. ನಲ್ಲಿ ಆಯುಷ್ಮಾನ್ ಭವ ಆರೋಗ್ಯ ಸೇವೆಗೆ ಚಾಲನೆ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ: 13ನೇ ಗುರುತಿನ ಸ್ಥಳದಲ್ಲಿ ಜಿಪಿಆರ್ ಯಂತ್ರ ಬಳಸಿ ಪರಿಶೀಲನೆಗೆ ಮುಂದಾದ ಎಸ್.ಐ.ಟಿ

Suddi Udaya

ಮಡಂತ್ಯಾರು : ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾಷಣ ಸ್ಪರ್ಧೆ

Suddi Udaya

ಧರ್ಮಸ್ಥಳ: ನೇತ್ರಾವತಿ ಅಜಿಕುರಿ ಬಳಿ ರಸ್ತೆಗೆ ಬಿದ್ದ ಮರ

Suddi Udaya

ಬೆಳ್ತಂಗಡಿ ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಧರ್ಮಸ್ಥಳ ಗ್ರಾಮ ಸಮಿತಿ ರಚನೆ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಬೃಹತ್‌ ರಕ್ತದಾನ ಶಿಬಿರ

Suddi Udaya
error: Content is protected !!