ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕನ್ಯಾಡಿ ll ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

ಕನ್ಯಾಡಿ ll: ಇಲ್ಲಿಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದ ಪ್ರಯುಕ್ತವಾಗಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಸಾಂಸ್ಕೃತಿಕ ಸ್ಪರ್ಧೆ ಮತ್ತು ಕ್ರೀಡಾ ಸ್ಪರ್ಧೆಯ ಬಹುಮಾನವನ್ನು ಡಿ.12 ರಂದು ವಿತರಿಸಲಾಯಿತು.

ಮುಖ್ಯ ಅತಿಥಿಗಳಾದ ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ. ಶ್ರೀನಿವಾಸ್ ರಾವ್ ಬಹುಮಾನ ನೀಡುವ ಮೂಲಕ ಮಕ್ಕಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಭಾರತಿ, ಎಸ್ ಡಿ ಎಂ ಸಿ ಅಧ್ಯಕ್ಷ ನಂದಾ ಕೆ, ಉಪಾಧ್ಯಕ್ಷೆ ಶ್ರೀಮತಿ ರಮ್ಯ, ಗೌರವ ಸಲಹೆಗಾರ ರಾಜೇಂದ್ರ ಅಜ್ರಿ, ಪ್ರಭಾರ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಷ್ಪ ಎನ್, ಎಸ್ ಡಿ ಎಂ ಸಿ ಸದಸ್ಯರು ಮಕ್ಕಳಿಗೆ ಬಹುಮಾನವನ್ನು ವಿತರಿಸಲು ಕೈಜೋಡಿಸಿದರು.

ಶಾಲೆಯ ಸಹ ಶಿಕ್ಷಕರು, ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿ ಶಿಕ್ಷಕರಾದ ಶ್ರೀಮತಿ ಶ್ವೇತ ಸ್ವಾಗತಿಸಿ, ಸಹ ಶಿಕ್ಷಕರಾದ ಶ್ರೀಮತಿ ರಾಜಿ ಸಿ ಕೆ ಯವರು ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ನಾಗರಾಜ್ ಬಾರ್ಕೆರ್ ನಿರೂಪಿಸಿದರು.

Related posts

ಸಾವ್ಯ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಮತ್ತು ಸೈನಿಕರ ಸುರಕ್ಷತೆಗಾಗಿ ವಿಶೇಷ ಭಜನೆ ಮತ್ತು ಭಾರತ ಮಾತೆಗೆ ಪೂಜಾ ಕಾರ್ಯಕ್ರಮ

Suddi Udaya

ಕೇಳ್ಕರ, ಕಲ್ಲಮೆ – ಮುಂಡೂರು ಕೆಸರುಮಯ; ರಸ್ತೆ ಸಂಚಾರಕ್ಕೆ ಅಡ್ಡಿ

Suddi Udaya

ಯಕ್ಷಗಾನ ಕಲಾವಿದ ರಮೇಶ್ ಶೆಟ್ಟಿ ಪೆರಿಂಜೆ ಅವರಿಗೆ ಸಿದ್ದಕಟ್ಟೆ ಯಕ್ಷ ಮಿತ್ರ ಪ್ರಶಸ್ತಿ ಪ್ರದಾನ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ -ಸ್ಪೆಷಾಲಿಟಿ ಆಸ್ಪತ್ರೆ ದಶಮಾನೋತ್ಸವ ಸಂಭ್ರಮಾಚರಣೆ

Suddi Udaya

ಬೆಳಾಲು: ಮನೆಯಿಂದ ಹೊರಟು ಹೋದ ವ್ಯಕ್ತಿ ವಾಪಾಸು ಬಾರದೇ ನಾಪತ್ತೆ

Suddi Udaya

ಫೆ.19: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರೋತ್ಸವದ ಮಹಾರಥೋತ್ಸವದ ಪ್ರಯುಕ್ತ ‘ಬೆಳ್ತಂಗಡಿ ಮ್ಯೂಸಿಕಲ್ ನೈಟ್ಸ್’ ಹಾಗೂ ಬೀಟ್ ರಾಕರ್ಸ್ ಡ್ಯಾನ್ಸ್ ಇವರಿಂದ ಡಾನ್ಸ್ ಫ್ಲೇಮ್

Suddi Udaya
error: Content is protected !!