ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರುಡ್ ಸೆಟ್ ಸಂಸ್ಥೆಯಲ್ಲಿ ಗೃಹೋಪಯೋಗಿ ವಿದ್ಯುತ್‌ ಉಪಕರಣ ಸೇವಾ ಉದ್ಯಮಿ ತರಬೇತಿಯ ಸಮಾರೋಪ

ಉಜಿರೆ : ನಾವು ಅತ್ಯಂತ ಕಷ್ಟದ ಸಮಯದಲ್ಲಿ ಸಹ ಸಕಾರಾತ್ಮಕವಾಗಿ ಯೋಚಿಸಿ ಮುನ್ನಡೆಯಬೇಕು. ಮತ್ತು ನಾವು ಯಾರ ಜೊತೆಗೆ ಇದ್ದೇವೆ ಎನ್ನುವುದರ ಮೂಲಕ ನಮ್ಮ ಬೆಳವಣಿಗೆ ಇರುತ್ತದೆ. ನಾವು ಇನ್ಸ್ಪೈರ್ ಮತ್ತು ಮೋಟಿವೇಶನ್‌ ವ್ಯತ್ಯಾಸ ನಮಗೆ ಗೊತ್ತಿರಬೇಕು. ಪ್ರತಿಯೊಬ್ಬರಲ್ಲಿ ಸಹ ಪ್ರತಿಭೆ ಇರುತ್ತದೆ ಆದರೆ ಅದಕ್ಕೆ ಬೇರೆ ಬೇರೆ ಲೇಪನ ಮಾಡಿಕೊಂಡ ಪರಿಣಾಮ ಹೊರ ಜಗತ್ತಿಗೆ ಕಾಣುವುದಿಲ್ಲ. ಅದಕ್ಕೆ ನಮ್ಮ ಮೇಲೆ ಇರುವ ಲೇಪನಗಳನ್ನು ತೆಗೆದು ನಮ್ಮ ವ್ಯಕ್ತಿತ್ವದ ಪ್ರತಿಭೆಯನ್ನು ಹೊರೆಗೆ ತೆಗೆಯುವ ಕೆಲಸವನ್ನು ರುಡ್‌ ಸೆಟ್‌ ಸಂಸ್ಥೆ ಮಾಡುತ್ತದೆ. ನಿಮ್ಮಲ್ಲಿರುವ ದೌರ್ಬಲ್ಯ ಕಡಿಮೆ ಮಾಡಿಕೊಂಡು ಬೆಳೆಯಬೇಕು. ರುಡ್‌ ಸೆಟ್‌ ಸಂಸ್ಥೆ ಎನ್ನುವುದು ಭಾವನಾತ್ಮಕ ಸಂಬಂಧವನ್ನು ಬೆಳೆಸುವಂತಾಗಿದೆ . ಪೂಜ್ಯರ ಆಶಯ ಯುವಜನರಿಗೆ ವ್ಯವಹಾರ ಶೈಲಿಯನ್ನು ಕಲಿಸಿಕೊಡುಬೇಕು ಎನ್ನುವುದನ್ನು ರುಡ್‌ ಸೆಟ್‌ ಸಂಸ್ಥೆಯಲ್ಲಿ ಕಲಿಸುತ್ತಾರೆ. ದೇಶಾದಾದ್ಯಂತ ಲಕ್ಷಾಂತರ ಯುವಜನರ ಬದುಕನ್ನು ಬದಲಾಯಿಸಿದ ಸಂಸ್ಥೆ ಅದು ರುಡ್‌ ಸೆಟ್‌ ಸಂಸ್ಥೆ. ನೀವು ಸಹ ಮುಂದಿನ ಬದುಕಿನಲ್ಲಿ ಹೊಸ ಬದಲಾವಣೆಯೊಂದಿಗೆ ಗುರಿ ತಲುಪಿ. ಯಶಸ್ಸು ನಿಮ್ಮದಾಗಲಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಹಾಸ್ಟಿಟಲ್‌ನ ಮ್ಯಾನೇಜಿಂಗ್‌ ಡೈರೆಕ್ಟರ್‌ ಶ್ರೀಯುತ ಎಂ. ಜರ್ನಾಧನ್‌ ಅಭಿಪ್ರಾಯ ಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 10 ದಿನಗಳ ಕಾಲ ನಡೆದ ಗೃಹೋಪಯೋಗಿ ವಿದ್ಯುತ್‌ ಉಪಕರಣ ಸೇವಾ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತರಿಸಿ ತಮ್ಮ ಅನುಭವ ಹಂಚಿಕೊಂಡು, ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು. ವಿನುಷ್‌, ವರ್ಷಿತ್‌ ಮತ್ತು ಸಂಜಯ ಪ್ರಾರ್ಥನೆ ಮಾಡಿದರು. ಶಿಬಿರಾರ್ಥೀಗಳಾದ ಗಣೇಶ್‌ , ಸಂಜಯ, ಪ್ರಶಾಂತ್‌ ತಮ್ಮ ತರಬೇತಿಯ ಅನುಭವ ಹಂಚಿಕೊಂಡರು.

Related posts

ಉಜಿರೆ ಎಸ್‌.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಸ್ಕಾರ್ಫ್ ದಿನಾಚರಣೆ

Suddi Udaya

ಬೆಳಾಲು : ವಿಶ್ವವಿಕಲಚೇತನರ ದಿನಾಚರಣೆ ಹಾಗೂ ವಿಶೇಷ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸ್ಮೈಲಿ ವರ್ಲ್ಡ್ ಮಕ್ಕಳ ಪಾಕ್೯ ಉದ್ಘಾಟನೆ

Suddi Udaya

ಬೈಂದೂರು ಉತ್ಸವ: ಸೇವಾಭಾರತಿ ತಂಡ ಭಾಗಿ

Suddi Udaya

ಮಾಜಿ ಶಾಸಕ ದಿ.ಕೆ ವಸಂತ ಬಂಗೇರರವರ 80ನೇ ಹುಟ್ಟುಹಬ್ಬ ಪ್ರಯುಕ್ತ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಈ ಭಾರಿ ಹೆಚ್ಚು ಕ್ರೀಡಾಭಿಮಾನಿಗಳು ಸೇರುವ ನಿರೀಕ್ಷೆ, ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಪಿ,

Suddi Udaya

ರಾ. ಹೆ. ಕಾಮಗಾರಿ ಮಡಂತ್ಯಾರು ಪೇಟೆಯಲ್ಲಿ ಅಲ್ಲಲ್ಲಿ ತೆರೆದ ಚರಂಡಿ: ಸಾವಜನಿಕರ ಓಡಾಟಕ್ಕೆ ಅಡಚಣೆ

Suddi Udaya
error: Content is protected !!