ವರದಿ

ಗುರುವಾಯನಕೆರೆಯಲ್ಲಿ ಪತ್ತೆಯಾದ ಅಪರಿಚಿತ ಗಂಡಸಿನ ಗುರುತು ಪತ್ತೆಗೆ ಮನವಿ

ಬೆಳ್ತಂಗಡಿ : ಗುರುವಾಯನಕೆರೆಯ ಕೆರೆಯಲ್ಲಿ ಫೆ.9 ರಂದು ಸುಮಾರು 45-50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿದ್ದು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. ಮೃತದೇಹವನ್ನು ಮಂಗಳೂರು ಕೆ.ಎಸ್.ಹೆಗ್ಡೆ ಶವಗಾರದಲ್ಲಿ ಇಡಲಾಗಿದೆ.

ಸುಮಾರು 5.3 ಅಡಿ ಇದ್ದು, ಸಾಧಾರಣ ಶರೀರ,ಉರುಟು ಮುಖ,ಎಣ್ಣೆ ಕಪ್ಪು ಮೈಬಣ್ಣ, ಕಪ್ಪು ಬಿಳಿ ಮಿಶ್ರಿತ ಮೀಸೆ ಮತ್ತು ಗಡ್ಡ ಹಾಗೂ ಕಪ್ಪು ಬಿಳಿ ಮಿಶ್ರಿತ 2 ಇಂಚು ಇದ್ದ ತಲೆ‌ ಕೂದಲು ಇದ್ದು. ಮೃತದೇಹ ಸಿಕ್ಕಿದಾಗ ದೇಹದ ಮೇಲೆ ಹಳದಿ ಕಪ್ಪು ಗೆರೆಯ ಟೀ ಶರ್ಟದ, ನೀಲಿ ಕಪ್ಪು ಬಣ್ಣದ ಬರ್ಮುಡ ಚಡ್ಡಿ ಧರಿಸಿದ್ದರು. ಈ ಮೃತದೇಹದ ಗುರುತು ಇನ್ನೂ ಪತ್ತೆಯಾಗದೆ ಇದ್ದು. ಗುರುತು ಪತ್ತೆಗಾಗಿ ಬೆಳ್ತಂಗಡಿ ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಮೃತದೇಹದ ಗುರುತು ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08256-232093 ಅಥವಾ 9480805370 ನಂಬರನ್ನು ಸಂಪರ್ಕಿಸಲು ಸೂಚಿಸಿದ್ದಾರೆ.

Related posts

ಎಸ್ಐಆರ್ ಬಗ್ಗೆ ಮತದಾರರಿಗೆ ಇನ್ನಷ್ಟು ಮಾಹಿತಿ ನೀಡಲು ಶನಿವಾರ, ಭಾನುವಾರ ವಿಶೇಷ ಅಭಿಯಾನ : ವಿ.ಅನ್ಬುಕುಮಾ‌ರ್

Suddi Udaya

ಸುಬ್ರಹ್ಮಣ್ಯ ರೋಟರಿ ಹಾಗೂ ಸೀನಿಯರ್ ಚೇಂಬರ್ ವತಿಯಿಂದ ಸ್ವಚ್ಛತಾ ಅಭಿಯಾನ

Suddi Udaya

ಬೆಳ್ತಂಗಡಿ: ಟೀಚರ್ಸ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗೌರವ ಪುರಸ್ಕಾರ ಸಮಾರಂಭ

Suddi Udaya

ಸುಲ್ಕೇರಿ ಗ್ರಾ.ಪಂ. ವತಿಯಿಂದ ಸ್ವಾಮಿ ವಿವೇಕಾನಂದರ ಪುತ್ಥಳಿ ಲೋಕಾರ್ಪಣೆ

Suddi Udaya

ಗುರುವಾಯನಕೆರೆಯಲ್ಲಿ ಹೊಟೇಲ್ ರೇಸ್ ಇನ್ ಬೋರ್ಡಿಂಗ್ & ಲಾಡ್ಜಿಂಗ್ ಶುಭಾರಂಭ

Suddi Udaya

ರೆಖ್ಯ : 24 ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

Suddi Udaya
error: Content is protected !!