30.7 C
ಪುತ್ತೂರು, ಬೆಳ್ತಂಗಡಿ
April 24, 2026
Uncategorized

ಉಜಿರೆಗೆ ಆಗಮಿಸಿದ ನಂದಿ ರಥಯಾತ್ರೆ

ಉಜಿರೆ: ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್‌, ಇದರ ನಂದಿ ರಥಯಾತ್ರೆಯು. ಡಿ.31 ಪ್ರಾರಂಭಗೊಂಡು ರಾಜ್ಯಾದ್ಯ0ತ ನಡೆಯುತ್ತಿದ್ದು, ಮಾ.18 ರಂದು ಸಂಜೆ ಉಜಿರೆಗೆ ಪ್ರವೇಶಿಸಿದೆ.

ಬೆಳಾಲು ಕ್ರಾಸ್ ಬಳಿ ಭವ್ಯ ಸ್ವಾಗತ ಕೋರಲಾಯಿತು. ಹಿಂದೂ ಮುಖಂಡರು ಹಾಗೂ ಆರ್. ಎಸ್. ಎಸ್ ಮುಖಂಡರು, ಉದ್ಯಮಿಗಳು, ಸಾರ್ವಜನಿಕರು ಒಟ್ಟಾಗಿ ಸೇರಿ ನಂದಿ ರಥಕ್ಕೆ ಗೌರವಾರ್ಪಣೆ ಮಾಡಿ ಶುಭ ಹಾರೈಸಿದರು.

ನಂತರ ಚೆಂಡೆ, ಕುಣಿತ ಭಜನೆ ಮೂಲಕ ಭವ್ಯವಾದ ಮೆರವಣಿಗೆಯೊಂದಿಗೆ ಉಜಿರೆ ಜನಾರ್ದನ ದೇವಸ್ಥಾನದ ಮುಂಭಾಗ ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ರವರು ಹಾಗೂ ತಾಲೂಕು ನಂದಿ ರಥಯಾತ್ರೆ ಸಂಚಾಲನ ಸಮಿತಿಯವರು ನಂದಿಗೆ ಹೂ ಹಾರ ಹಾಕಿ ಸ್ವಾಗತಿಸಿದರು. ಬಳಿಕ ಶಾರದ ಮಂಟಪದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ನಡೆದು ಸಭಾ ಕಾರ್ಯಕ್ರಮ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ವಹಿಸಿದ್ದರು. ರಾಧಾ ಸುರಭಿ ಗೋಮಂದಿರ ರಾಷ್ಟ್ರೀಯ ಗೋಸೇವಾ ಸಂಸ್ಥಾನದ ಅಧ್ಯಕ್ಷ ಭಕ್ತಿ ಭೂಷಣ್ ದಾಸ್ ರವರು ದಿಕ್ಸುಚಿ ಭಾಷಣ ನೆರವೇರಿಸಿದರು.

ವೇದಿಕೆಯಲ್ಲಿ ಕಳಂಜ ನಂದಗೋಕುಲ ಸ್ವಾಮಿಶ್ರೀ ವಿವೇಕಾನಂದ ಸೇವಾಶ್ರಮದ ಅಧ್ಯಕ್ಷ ಡಾ| ಎಂ.ಎಂ. ದಯಾಕರ್,ನಂದಿ ರಥಯಾತ್ರೆಗೆ ಚಾಲನೆ ನೀಡಿದಂತಹ ದೇಸೀ ಗೋಸಂರಕ್ಷಕರಮೇಶ್ ಎಸ್. ಬೆಳ್ತಂಗಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಸಹ ಕಾರ್ಯವಾಹ ಸುಭಾಷ್ ಕಳಂಜ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಪದ್ಮನಾಭ ಶೆಟ್ಟಿಗಾರ್, ರಾಮಚಂದ್ರ ಶೆಟ್ಟಿ, ಪ್ರಶಾಂತ್ ಜೈನ್, ಭರತ್, ಉಜಿರೆ ಗ್ರಾ.ಪಂ. ಉಪಾಧ್ಯಕ್ಷ ರವಿಕುಮಾರ್ ಬರಮೇಲು ವರ್ತಕರ ಸಂಘದ ಅರವಿಂದ ಕಾರಂತ್, ರವೀಂದ್ರ ಶೆಟ್ಟಿ ಬಳಂಜ, ಯಕ್ಷಗಾನ ಭಾಗವತ ಮಹೇಶ್ ಕನ್ಯಾಡಿ, ಶಶಿಧರ ಕಲ್ಮ0ಜ, ಸೋಮಶೇಖರ್ ಶೆಟ್ಟಿ, ವಿಶ್ವಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು, ಇನ್ನಿತರರು ಉಪಸ್ಥಿತರಿದ್ದರು.

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ಸ್ವಾಗತಿಸಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ನವೀನ್ ನೆರಿಯ ನಿರೂಪಿಸಿದರು.

Related posts

ಸಿಯೋನ್ ಆಶ್ರಮ: ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya

ಸರಕಾರದ ನಡೆ ಕಾರ್ಯಕರ್ತರ ಕಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾವೇಶದ ಬಗ್ಗೆ ಪಾರಂಕಿ, ಕುಕ್ಕಳ ಗ್ರಾಮದ ಕಾರ್ಯಕರ್ತರ ಸಭೆ

Suddi Udaya

ಜೆ ಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಎಸ್ ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ

Suddi Udaya

ಅರಸಿನಮಕ್ಕಿ: ಕುಲಾಲರ ಸಂಘದ ವಿಶೇಷ ಮಾಸಿಕ ಸಭೆ

Suddi Udaya

ನಾರಾವಿ ಲೈನ್ ಮ್ಯಾನ್ ಕಿಟ್ಟ ಯಾನೆ ಸುಧಾಕರ ಅಂಡಿಂಜೆಯ ಟಿಸಿ ಹತ್ತಿರ ಆಕಸ್ಮಿಕ ಸಾವು

Suddi Udaya

ನಿಯಂತ್ರಣ ತಪ್ಪಿ ಆಪೆ ರಿಕ್ಷಾ ಪಲ್ಟಿ: ಪ್ರಯಾಣಿಕರಿಗೆ ಗಾಯ

Suddi Udaya
error: Content is protected !!