September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು

ಬೆಳ್ತಂಗಡಿ : ಲಾಯಿಲ ಟಿ.ಬಿ ಕ್ರಾಸ್ ಬಳಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳತನ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಟಿ.ಬಿ ಕ್ರಾಸ್ ಹಳೆಪೇಟೆ ನಿವಾಸಿ ವರದರಾಜ ಹೆಗ್ಡೆ ಎಂಬವರ ಮನೆಯ ಅಂಗಳದಿಂದಲೇ ಬೈಕ್ ಕಳ್ಳತನವಾಗಿದೆ. ವರದರಾಜ ಹೆಗ್ಡೆ ಅವರು ಸೇಲ್ಸ್ ಮ್ಯಾ‌ನ್ ಕೆಲಸ ಮಾಡಿಕೊಂಡಿದ್ದು ಏ.25ರಂದು ಕೆಲಸ ಮುಗಿಸಿ ಬಂದು ರಾತ್ರಿಯ ವೇಳೆ ಮನೆಯ ಹೊರಗೆ ಶೆಡ್ ನಲ್ಲಿ ತನ್ನ ಕೆ.ಎ 70 E 1651ನಂಬರಿನ ಸುಜುಕಿ ಕಂಪೆನಿಯ ಮೋಟಾರ್ ಸೈಕಲ್ ಅನ್ನು ನಿಲ್ಲಿಸಿದ್ದರು. ಏ.26ರಂದು ಬೆಳಗ್ಗೆ ಎದ್ದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ನೆರಕರೆಯಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರಿಗೆ ಏ.26 ರಂದು ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಇಂದಬೆಟ್ಟು: ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಚ್ಚಿನ: ಬೈಕ್ ರೇಸ್ ನಲ್ಲಿ ಗಾಯಗೊಂಡ ನೌಷದ್ ರವರ ಆರೋಗ್ಯ ವಿಚಾರಿಸಿದ ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರು, ಸದಸ್ಯರು

Suddi Udaya

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಅಭಿವ್ಯಕ್ತಿ ಕೌಶಲ” ಕಾರ್ಯಗಾರ

Suddi Udaya

ಕಸರತ್ತ್ ತುಳು ವೆಬ್ ಸೀರೀಸ್ ನ ಮೊದಲ ಪೋಸ್ಟರ್ ಬಿಡುಗಡೆ

Suddi Udaya

ಗೋಳಿಯಂಗಡಿಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು

Suddi Udaya

ಉಜಿರೆ: ಅರಣ್ಯ ಇಲಾಖೆ ಹಾಗೂ ಎಸ್.ವೈ.ಎಸ್ ಉಜಿರೆ ಯೂನಿಟ್ ಸಹಯೋಗದೊಂದಿಗೆ ವನಮಹೋತ್ಸವ ಕಾರ್ಯಕ್ರಮ

Suddi Udaya
error: Content is protected !!