September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜು

ಉಜಿರೆ: ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆ ಪ್ರಾರಂಭೋತ್ಸವ

ಉಜಿರೆಯ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಜೂ.2ರಂದು ಜರಗಿತು.

ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉದ್ಘಾಟನೆ ನೆರವೇರಿಸಿ ಮಾತನಾಡಿದರು. ತಾನೂ ಈ ಶಾಲೆಯ ಹಳೆ ವಿದ್ಯಾರ್ಥಿ ಎಂದ ಅವರು, ತನ್ನ ವಿದ್ಯಾರ್ಥಿ ಜೀವನದ ನೆನೆಪುಗಳನ್ನು ಮೆಲುಕು ಹಾಕಿದರು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಕುರಿತ ಮಾಹಿತಿಯನ್ನು ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಹಂಚಿಕೊಂಡರು.

ಮುಖ್ಯ ಅತಿಥಿ, ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ಶಿಕ್ಷಣ ಸಂಯೋಜಕ ಶಶಿಶೇಖರ್ ಎನ್. ಕಾಕತ್ಕರ್, “ನಿಮ್ಮ ಹೆತ್ತವರ ಪರಿಶ್ರಮದ ಬಗ್ಗೆ ಆಲೋಚಿಸಿ, ಅವರ ಕಷ್ಟದ ಜೀವನ ನಿಮ್ಮ ಮೇಲೆ ಪರಿಣಾಮ ಬೀರಬಾರದು ಎಂದು ಹೆತ್ತವರು ಅಭಿಪ್ರಾಯಪಡುತ್ತಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅತಿಥಿ, ಉಜಿರೆ ಶ್ರೀ ಧ. ಮಂ. ಸ್ವಾಯತ್ತ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸುಧೀರ್ ಕೆ.ವಿ. ಮಾತನಾಡಿದರು. ವಿದ್ಯಾರ್ಥಿಗಳ ಗುರಿ ನಿಖರವಿರಬೇಕು, ಪೋಷಕರು ತಮ್ಮ ಮಕ್ಕಳ ಬಗ್ಗೆ ಕೀಳರಿಮೆ ಹೊಂದದೆ ಅವರನ್ನು ಹುರಿದುಂಬಿಸಬೇಕು ಎಂದರು.

ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿಯ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್, ‘ರತ್ನಮಾನಸ’ ವಿದ್ಯಾರ್ಥಿನಿಲಯದ ಪಾಲಕ ಯತೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಕೆ. ಸುರೇಶ್ ಸ್ವಾಗತಿಸಿದರು. ರವೀಶ್ ಕುಮಾರ್ ವಂದಿಸಿದರು. ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ಹೊಸದಾಗಿ ಸೇರ್ಪಡೆಯಾಗಿರುವ 8ನೇ ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರು ಆರತಿ ಬೆಳಗಿ, ಹಣೆಗೆ ಕುಂಕುಮವಿಟ್ಟು ಹೂ ಕೊಟ್ಟು ಸ್ವಾಗತಿಸಿದರೆ, ಹತ್ತನೇ ತರಗತಿ ವಿದ್ಯಾರ್ಥಿಗಳು ಆಯಾ ತರಗತಿಗೆ ಕರೆದುಕೊಂಡು ಹೋದರು.

Related posts

ಸುಲ್ಕೇರಿಮೊಗ್ರು ಪುರುಷರ ಬಳಗ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂದೀಪ್ ಪಟ್ಲ, ಕಾರ್ಯದರ್ಶಿಯಾಗಿ ಅಶೋಕ್ ಕಾಡಂಗೆ

Suddi Udaya

ಧರ್ಮಸ್ಥಳ ಪ್ರಕರಣದ ಬಗ್ಗೆ ಡಾ| ವೀರೇಂದ್ರ ಹೆಗ್ಗಡೆಯವರ ಮೊದಲ ಪ್ರತಿಕ್ರಿಯೆ: ಆರೋಪಗಳು ಆಧಾರ ರಹಿತ, ತನಿಖೆಯಿಂದ ಸತ್ಯ ಹೊರ ಬರಲಿದೆ: ಡಾ| ಹೆಗ್ಗಡೆ

Suddi Udaya

ಪಡಂಗಡಿ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಉಜಿರೆಯಲ್ಲಿ ಐಶ್ವರ್ಯ ಬ್ಯಾಂಗಲ್ ಸ್ಟೋರ್ ಶುಭಾರಂಭ

Suddi Udaya

ಉಜಿರೆ: ಅನಾರೋಗ್ಯದಿಂದ ಬಳಲುತ್ತಿರುವ ರಕ್ಷಿತ್ ರಾಜ್ ರವರ ಚಿಕಿತ್ಸೆಗೆ ಕರಿಗಂಧ ಸೇವಾ ಟ್ರಸ್ಟ್ ನಿಂದ ಧನಸಹಾಯ

Suddi Udaya

ಶಿಬಾಜೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಗೆ ಬಿಜೆಪಿ ಮಂಡಲ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಭೇಟಿ

Suddi Udaya
error: Content is protected !!