September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ವೇಣೂರು ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭೋತ್ಸವ

ವೇಣೂರು: ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ.2ರಂದು ವಿದ್ಯಾರ್ಥಿಗಳನ್ನು ಪ್ರೀತಿಪೂರ್ವಕವಾಗಿ ಶಾಲೆಗೆ ಸ್ವಾಗತಿಸಲಾಯಿತು.

ಎಕ್ಸೆಲ್ ಆಂಗ್ಲ ಮಾಧ್ಯಮ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಪುಷ್ಪಾರ್ಚನೆ ಹಾಗೂ ಗೊಂಬೆ ನೃತ್ಯದ ಮೂಲಕ ಸ್ವಾಗತಿಸಲಾಯಿತು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಆಡಳಿತ ಮಂಡಳಿಯ ನಿರ್ದೇಶಕಿ ಶ್ರೀಮತಿ ಸಹನ, ಶೈಕ್ಷಣಿಕ ಸಂಯೋಜಕರಾದ ಕು.ನಿಶಾ, ಶ್ರೀಮತಿ ಶ್ರುತಿ, ಆಡಳಿತಧಿಕಾರಿ ಶಾಂತಿರಾಜ್ ಜೈನ್, ಶಾಲಾ ಮುಖ್ಯ ಶಿಕ್ಷಕಿ ಸುಜಾತ ವಿದ್ಯಾ ದೇಗುಲಕ್ಕೆ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ವೇಣೂರಿನ ವಿದ್ಯೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಹೆಗ್ಡೆಯವರು ಬದುಕಿನಲ್ಲಿ ಗಳುಸುವ ಬಹಳ ದೊಡ್ಡ ಸಂಪತ್ತು ಅಂದರೆ ವಿದ್ಯೆ. ಅಂಥ ವಿದ್ಯೆಯನ್ನು ಕಲಿಯಲು ಯೋಗ್ಯ ಶಾಲೆಯನ್ನು ಆರಿಸಿಕೊಂಡ ತಮಗೆ ಶುಭವಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಸುಜಾತ ವಿದ್ಯಾರ್ಥಿಗಳಿಗೆ ಶಾಲಾ ನೀತಿ ನಿಯಮಗಳನ್ನು ತಿಳಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಎಲ್ಲಾ ಸಿಬ್ಬಂದಿವರ್ಗದವರು, ಪೋಷಕರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

Related posts

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮೇಷ ಜಾತ್ರಾ ಮಹೋತ್ಸವ

Suddi Udaya

ಕಲ್ಮಂಜ: ನಿಡಿಗಲ್ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದು ಹಾನಿ

Suddi Udaya

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

Suddi Udaya

ಪತಿಯ ವರದಕ್ಷಿಣೆ ಕಿರುಕಳಕ್ಕೆ ಮನನೊಂದು ಪತ್ನಿ ಆತ್ಮಹತ್ಯೆ-ಪತಿ ಅಂಧರ್

Suddi Udaya

ಉಜಿರೆ ಟಿ.ಬಿ ಕ್ರಾಸ್ ಬಳಿ ಚರಂಡಿಗೆ ಉರುಳಿದ ಪಿಕಪ್

Suddi Udaya

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya
error: Content is protected !!