ಗ್ರಾಮಾಂತರ ಸುದ್ದಿ

ಸರ್ಕಾರಿ ಪದವಿಪೂರ್ವ ಕಾಲೇಜು, ಕೊಯ್ಯೂರು -ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ :


ಕೊಯ್ಯೂರು:”ಸಂಸ್ಕೃತಿ -ಸಂಸ್ಕಾರಗಳಿಂದ ಕೂಡಿದ ಶಿಕ್ಷಣ ಮನುಷ್ಯನನ್ನು ಜೀವನದಲ್ಲಿ ಉತ್ತುಂಗದೆಡೆ ಒಯ್ಯು ತ್ತದೆ. ಸಂಸ್ಕಾರರಹಿತ ಶಿಕ್ಷಣದಿಂದ ಸಮಾಜದ ಅದ:ಪತನವಾಗುತ್ತದೆ ”

ಎಂಬುದಾಗಿ ನಡ ಪದವಿಪೂರ್ವ ಕಾಲೇಜ್ ನ ರಾಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಶಿಲ್ಪ ಡಿ. ಅಭಿಪ್ರಾಯ ಪಟ್ಟರು. ಅವರು ಕೊಯ್ಯೂರು ಸರ್ಕಾರಿ ಪದವಿಪೂರ್ವ ಕಾಲೇಜ್ ನಲ್ಲಿ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕೊಯ್ಯೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ರಾಧಾಕೃಷ್ಣ ತಚ್ಛಮೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳನ್ನು ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳು ಸ್ವಾಗತಿಸಿ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ಮೋಹನ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳಿಗೆ ನೀಡಿದ ಸ್ಮರಣಿಕೆ ಪಟ್ಟಿಯನ್ನು ಕುಮಾರಿ ಭಾವನಾ ಮತ್ತು ಸ್ಪರ್ಧಾ ವಿಜೇತರ ಪಟ್ಟಿಯನ್ನು ದ್ವಿತೀಯ ವಾಣಿಜ್ಯ ವಿಭಾಗದ ಸುಮಂತ್ ವಿಜೇತರ ಪಟ್ಟಿ ವಾಚಿಸಿದರು.ವಿದ್ಯಾರ್ಥಿನಿಯರಾದ ಪ್ರಜ್ಞಾ, ದೀಪಾಶ್ರೀ, ಯಜ್ಞಶ್ರೀ, ಕೀರ್ತಿ, ಕೃಪಾ, ಪೂಜಶ್ರೀಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗದ ಕುಮಾರಿ ಸೌಜನ್ಯ ಸ್ವಾಗತಿಸಿ, ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗ ದ ಸೂರಜ್ ವಂದಿಸಿದರು. ದ್ವಿತೀಯ ಪಿ ಯು ಸಿ ವಾಣಿಜ್ಯ ವಿಭಾಗದ ಕುಮಾರಿ ವಿನಯ ಮತ್ತು ಚಿರಸ್ವಿ ಕಾರ್ಯಕ್ರಮ ನಿರ್ವಹಣೆ ಗೈದರು. ಉಪನ್ಯಾಸಕರಾದ ಶ್ರೀಮತಿ ರಶ್ಮಿದೇವಿ, ಶ್ರೀ ಲಕ್ಷ್ಮಣ ಗೌಡ,ಶ್ರೀಮತಿ ಭವ್ಯ, ಶ್ರೀಮತಿ ತೃಪ್ತಿ, ಶ್ರೀ ಸಂತೋಷ್ ಕುಮಾರ್, ಶ್ರೀಮತಿ ಪವಿತ್ರ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಜಿಲ್ಲೆ ಪ್ರಥಮ, ದ.ಕ. ಜಿಲ್ಲೆ ದ್ವಿತೀಯ

Suddi Udaya

ಧರ್ಮಸ್ಥಳ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಪ್ರಾಚೀನ ಭಾರತದ ನಾಣ್ಯಗಳ ಪ್ರದರ್ಶನಕ್ಕೆ ಚಾಲನೆ

Suddi Udaya

ಬೆಳ್ತಂಗಡಿ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದಿಂದ ಮಾಶಾಸನ ಹೆಚ್ಚಳ ಮತ್ತು ಮಹಿಳಾ ದೌರ್ಜನ್ಯ ಖಂಡಿಸಿ ಮನವಿ

Suddi Udaya

ರೆಖ್ಯ ಗ್ರಾಮದ ಸರ್ವೆ ನಂ,. 69ಕ್ಕೆ ಸಂಬಂಧಿಸಿದ ಅರಣ್ಯ ಭೂಮಿ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆ ಸಚಿವ ರಾಮಲಿಂಗಾ ರೆಡ್ಡಿ ರವರಿಗೆ ಶಾಸಕ ಹರೀಶ್ ಪೂಂಜ ಮನವಿ

Suddi Udaya

ಬೆಳ್ತಂಗಡಿ ಮುಳಿಯ ಗೋಲ್ಡ್ & ಡೈಮಂಡ್ಸ್ ಸಂಸ್ಥೆ ವತಿಯಿಂದ ಮುಂಡೂರು ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

Suddi Udaya

ಬೆಳ್ತಂಗಡಿ: ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ವತಿಯಿಂದ ನಂದಗೋಕುಲ ಗೋಶಾಲೆಗೆ ದೇಣಿಗೆ ವಿತರಣೆ

Suddi Udaya
error: Content is protected !!