September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

ಬೆಳ್ತಂಗಡಿ: ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಜೂ. 21ರಂದು ನಡೆಯಿತು.

ಉಜಿರೆ ಎಸ್‌. ಡಿ.ಎಂ ಕಾಲೇಜ್ ಆಫ್ ನ್ಯಾಚುರೋಪತಿ ಯೋಗಿಕ್ ಸೈನ್ಸಸ್ ನಲ್ಲಿ ಉಪನ್ಯಾಸಕರು ಮತ್ತು ವೈದ್ಯಕೀಯ ಅಧಿಕಾರಿ ಡಾ. ಪ್ರಣವ್ ಪಿ.ಪಿ ರವರು ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶ್ವ ಯೋಗ ದಿನಾಚರಣೆಯ ಮಹತ್ವ ಮತ್ತು ನಮ್ಮ ದಿನನಿತ್ಯದ ಜೀವನದಲ್ಲಿ ಯೋಗಾಸನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹೇಮಲತಾ ಎಂ. ಆರ್. ರವರು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ 10 ದಿನದ ಯೋಗ ತರಬೇತಿ ನೀಡಿರುವ ಎಸ್.ಡಿ.ಎಮ್ ಬಿ.ಎನ್.ವೈ.ಎಸ್ ಕಾಲೇಜಿನ ವಿದ್ಯಾರ್ಥಿನಿಯರಾದ ಪ್ರಾಪ್ತಿ ಮತ್ತು ಕೀರ್ತನಾ ಉಪಸ್ಥಿತರಿದ್ದರು. ಸುಮಾರು 200 ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಮಾಡಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಶಾಲಾ ದೈಹಿಕ ಶಿಕ್ಷಕ ಪ್ರವೀಣ್ ಎನ್, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕು| ಪ್ರಶ್ಯಾ ಸ್ವಾಗತಿಸಿದರು, ಕು|ನಿಧೀಶಾ ವಂದಿಸಿದರು ಶಿಕ್ಷಕರಾದ ಮರಳಿ.ಪಿ ಕಾರ್ಯಕ್ರಮ ನಿರೂಪಿಸಿದರು.

Related posts

ಭಾರತೀಯ ಮಜ್ದೂರು ಸಂಘದಿಂದ ಸಂಪರ್ಕ ಅಭಿಯಾನಕ್ಕೆ ಕರಪತ್ರವನ್ನು ನೀಡುವ ಮೂಲಕ ಚಾಲನೆ

Suddi Udaya

ಧರ್ಮಸ್ಥಳ: ಪಾದಯಾತ್ರಿಗಳಿಗೆ ಸನ್ಮಾನ

Suddi Udaya

ಉಜಿರೆ: ಶ್ರೀ ದೇಶಿಕೇಂದ್ರ ಎಜುಕೇಶನ್ ಟ್ರಸ್ಟ್ ಇದರ ನೂತನ ಒಳ ಕ್ರೀಡಾಂಗಣ ಪ್ರಾರಂಭೋತ್ಸವ ಮಕ್ಕಳ ಭವಿಷ್ಯಕ್ಕೆ ಆಧುನಿಕ ಶಿಕ್ಷಣ ಅಗತ್ಯ: ಶರತ್ ಕೃಷ್ಣ ಪಡ್ವೆಟ್ನಾಯ

Suddi Udaya

ಉಜಿರೆ ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಒಂದು ವಾರದ ಒಳಗೆ ಬೆಳೆ ವಿಮೆ ರೈತರ ಖಾತೆಗೆ ಜಮೆ ಮಾಡದೇ ಇದ್ದಲ್ಲಿ ಕಾನೂನು ಹೋರಾಟ : ರಕ್ಷಿತ್ ಪಣೆಕ್ಕರ

Suddi Udaya

ಮೆಸ್ಕಾಂ ಬೆಳ್ತಂಗಡಿ ಉಪವಿಭಾಗದ ಸ.ಕಾ ಅಭಿಯಂತರ ಶಿವಶಂಕರ್ ಪುತ್ತೂರಿಗೆ ವರ್ಗಾವಣೆ

Suddi Udaya
error: Content is protected !!