ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರತಿಭಟನೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಪಟ್ರಮೆ ಗ್ರಾಮ ಪಂಚಾಯತ್ ಬಳಿ ಬಿಜೆಪಿ ಪ್ರತಿಭಟನೆ

ಪಟ್ರಮೆ : ಬಿಜೆಪಿ ಕಾರ್ಯಕರ್ತ ಜಯರಾಮ್ ರವರ ಮನೆಯಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಬಲಿದಾನ ದಿವಸವನ್ನು ಪುಷ್ಪನಮನದ ಮೂಲಕ ನಡೆಸಿ ಅಲ್ಲಿಂದ ಮೆರವಣಿಗೆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಪಟ್ರಮೆ ಗ್ರಾಮ ಪಂಚಾಯತ್ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರಮುಖ ಭಾಷಣಕಾರರಾಗಿ ಸಂದೀಪ್ ರೈ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ, ಪಂಚಾಯತ್ ಮಟ್ಟದಲ್ಲಿ ಈಗಿನ ಸರಕಾರದಿಂದ ಆಗುತ್ತಿರುವ ಅನ್ಯಾಯಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು.

9/11 ಸಮಸ್ಯೆ, ಅಕ್ರಮ ಸಕ್ರಮ ಸಮಸ್ಯೆ, ವಿದ್ಯುತ್ ದರ ಸಮಸ್ಯೆ, ವಸತಿ ಸಮಸ್ಯೆ, ಕೆಂಪು ಕಲ್ಲು ನಿಷೇಧ, ಬಿಪಿಎಲ್ ಕಾರ್ಡು ರದ್ಧತಿ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಮುಂತಾದ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ನೀಡಲಾಯಿತು.


ಪ್ರತಿಭಟನೆಯಲ್ಲಿ ಪಂಚಾಯತ್ ಅಧ್ಯಕ್ಷ ಮನೋಜ್, ಹಾಗೂ ಸದಸ್ಯರು, ಶಕ್ತಿಕೇಂದ್ರ ಪ್ರಮುಖ್ ಡಾಗಯ್ಯ ಗೌಡ, ಸೊಸೈಟಿ ನಿರ್ದೇಶಕರುಗಳು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related posts

ಅಭಿವೃದ್ದಿ ಹೊಂದುತ್ತಿರುವ ಉಜಿರೆ ಹಳೆಪೇಟೆ ಸರಕಾರಿ ಶಾಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ನೇತೃತ್ವದಲ್ಲಿ ಶ್ರಮದಾನ

Suddi Udaya

ವೇಣೂರು ಗ್ರಾ.ಪಂ. ನಿಧಿ 1ರ ಶೇ.25 ರ ಅನುದಾನದಲ್ಲಿ ಪ.ಜಾತಿ/ ಪ.ಪಂಗಡ ಫಲಾನುಭವಿಗಳಿಗೆ ಚಯರ್ ವಿತರಣೆ

Suddi Udaya

ಶಿಶಿಲೇಶ್ವರ ದೇವಸ್ಥಾನ ಜಲಾವೃತ : ತಹಶೀಲ್ದಾರರಿಂದ ಸ್ಥಳ ಪರಿಶೀಲನೆ

Suddi Udaya

ನಂದಿಬೆಟ್ಟ ಬಳಿ ಬೈಕ್ ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ: ಹುಟ್ಟುಹಬ್ಬದ ದಿನದಂದೆ ಓಡೀಲುವಿನ ಯುವಕ ದೀಕ್ಷಿತ್ ಬಲಿ

Suddi Udaya

ಕಾಶಿಪಟ್ಣ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಗುರುವಾಯನ ಕೆರೆ: ಶಕ್ತಿ ನಗರದ ನಿವಾಸಿ ಸುರೇಶ್ ಪೈ ಎಂ. ನಿಧನ

Suddi Udaya
error: Content is protected !!