September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ: ಬಂಟ್ವಾಳ ಧ.ಗ್ರಾ. ಯೋಜನೆಯ ಕೃಷಿ ಮೇಲ್ವಿಚಾರಕ ಸ್ಥಳದಲ್ಲೇ ಸಾವು

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬಿ.ಸಿ. ರೋಡ್ ಸಮೀಪದ ಅಜ್ಜಿಬೆಟ್ಟು ಎಂಬಲ್ಲಿ ಜೂ.30 ರಂದು ನಡೆದಿದೆ.

ಮೃತ ವ್ಯಕ್ತಿಯನ್ನು ಶಂಭೂರು ಕೊಪ್ಪಳ ನಿವಾಸಿ ಚಿದಾನಂದ( 50) ಎಂದು ಗುರುತಿಸಲಾಗಿದೆ.

ದ್ವಿಚಕ್ರ ಸವಾರ ಚಿದಾನಂದ ಅವರು ಬಿಸಿರೋಡು ಪೇಟೆಯಿಂದ ಅಜ್ಜಿಬೆಟ್ಟು ಎಂಬಲ್ಲಿ ರಸ್ತೆ ಕ್ರಾಸ್ ಮಾಡುವ ವೇಳೆ. ಬಿಸಿರೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಲಾರಿ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿಯಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಚಿದಾನಂದ ಅವರು ಬಂಟ್ವಾಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಧರ್ಮಸ್ಥಳ ಶ್ರೀ ಮಂ.ಸ್ವಾ. ಅ.ಹಿ.ಪ್ರಾ. ಶಾಲೆಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಹಣಕಾಸು ನಿರ್ದೇಶಕ ಡಿ. ನಿಶ್ಚಲ್ ಕುಮಾರ್ ಭೇಟಿ

Suddi Udaya

ವೇಣೂರಿನಲ್ಲಿ ಪ್ರಥಮ ದರ್ಜೆ ಕಾಲೇಜನ್ನು ಆರಂಭಿಸಲು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಶಾಸಕ ಹರೀಶ್ ಪೂಂಜ

Suddi Udaya

ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರಿಂದ ತೋಡಿನ ಹೂಳೆತ್ತುವ ಕಾರ್ಯಕ್ರಮ

Suddi Udaya

ಗಡಾಯಿಕಲ್ಲಿನ ಮೇಲೆ ಹೋದ ಕರಾಯದ ಯುವಕನ ಕಾಲು ಟ್ವಿಸ್ಟ್(ಉಳುಕಿ) ಆಗಿ ಅಲ್ಲೇ ಬಾಕಿ: ಯುವಕನನ್ನು ಕೆಳಗಿಳಿಸುವ‌ ಕಾಯಾ೯ಚರಣೆಗೆ ಮುಂದಾದ ಅಗ್ನಿಶಾಮಕ ದಳ

Suddi Udaya

ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್‌‌ ವತಿಯಿಂದ ಕರಂಬಾರು ಸ. ಹಿ. ಪ್ರಾ. ಶಾಲೆಯಲ್ಲಿ ‘ಶಾಲೆಡೊಂಜಿ ದಿನ’

Suddi Udaya

ರೇಂಜರ್ಸ್ ವಿಭಾಗದ ಜಾನಪದ ಗೀತ ಗಾಯನ ಸ್ಪರ್ಧೆ: ನಡ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ

Suddi Udaya
error: Content is protected !!