September 6, 2026
Uncategorizedಶಾಲಾ ಕಾಲೇಜು

ಉಜಿರೆ ಎಸ್.ಡಿ.ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆ

ಬೆಳ್ತಂಗಡಿ; ಉಜಿರೆ ಎಸ್.ಡಿ.ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನೆಯು ಜು. 5ರಂದು ನಡೆಯಿತು.
ಶಿಕ್ಷಣ ಸಂಸ್ಥೆಗಳ ಶಿಕ್ಷಣ ಸಂಯೋಜಕರಾದ ಎಸ್.ಎನ್ ಕಾಕತ್ಕರ್ ದೀಪ ಬೆಳಗುವ ಮೂಲಕ ಸಂಘಗಳನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,


ಕಲಿಕೆಯ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು. ಅಲ್ಲದೆ ಕೆಲವು ಸಣ್ಣ ಕುತೂಹಲ ಪ್ರಶ್ನೆಗಳನ್ನು ಕೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಿದರು.
ಯಕ್ಷಗಾನ ಪಾತ್ರಧಾರಿಗಳು ಕಿರು ಯಕ್ಷಗಾನ ಪ್ರಹಸನ, ವಿದ್ಯಾರ್ಥಿನಿಯರಿಂದ ನೃತ್ಯ, ಕ್ರೀಡಾಪಟುಗಳಿಗಾಗಿ ಹೊಸ ಅಂಕಣ ಉದ್ಘಾಟನೆ ಮೂಲಕ ಶೈಕ್ಷಣಿಕ ವರ್ಷದ ಸಾಂಘಿಕ ಕಾರ್ಯಕ್ರಮಗಳನ್ನು ಆರಂಭಿಸಲಾಯಿತು. ಶಾಲೆಯ ಮುಖ್ಯಸ್ಥ ಬಾಲಕೃಷ್ಣ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಯಕ್ಷಗಾನ ತರಬೇತುದಾರ ಲಕ್ಷ್ಮಣ ಗೌಡ, ನೃತ್ಯ ತರಬೇತಿಯನ್ನು ನೀಡಲಿರುವ ಚೈತ್ರಾ ಇವರುಗಳು ಭಾಗವಹಿಸಿದ್ದರು.
ಶಿಕ್ಷಕ ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಕೂಸಪ್ಪ ಗೌಡ ಇವರು ಅತಿಥಿಗಳಿಗೆ ಸ್ವಾಗತ ನೀಡಿದರೆ ಶಿಕ್ಷಕಿ ಸುಜಾತ ಧನ್ಯವಾದ ಅರ್ಪಿಸಿದರು. ಶಿಕ್ಷಕಿ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

Related posts

ನವೀಕೃತ ಉಜಿರೆ ಸಂತ ಅಂತೋನಿ ಚರ್ಚ್ ಉದ್ಘಾಟನೆ; ಆಶೀರ್ವಾಚನ

Suddi Udaya

ಕುಂಠಿನಿ ಮುಹಿಯ್ಯುದ್ಧೀನ್ ಅರಬಿಕ್ ಮದರಸಕ್ಕೆ ಪಬ್ಲಿಕ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya

ಎಕ್ಸೆಲ್ ಟೆಕ್ನೋ ಸ್ಕೂಲ್ ನಲ್ಲಿ ವಿದ್ಯಾರ್ಥಿ ಸಂಘ ಮತ್ತು ವಿವಿಧ ಕ್ಲಬ್ ಗಳ ಉದ್ಘಾಟನೆ : ನಾಯಕತ್ವ ಭವಿಷ್ಯದ ಜೀವನಕ್ಕೆ ಬುನಾದಿ: ಸಿ.ಕೆ. ರೋಹಿಣಿ

Suddi Udaya

ಮಾಲಾಡಿ ಯುವಕ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ

Suddi Udaya

ಪಿಯುಸಿ ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ವಾಣಿ ವಿದ್ಯಾ ಪುರಸ್ಕಾರ-2026

Suddi Udaya

ಬಂಗಾಡಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ: ಸ್ಟಾರ್ ಲೈನ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!