September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗೆಜ್ಜೆಗಿರಿ ಯಕ್ಷಗಾನ ಮೇಳದ ಪ್ರಧಾನ ಸಂಚಾಲಕರಾಗಿ ಪ್ರಮಲ್ ಕುಮಾರ್ ಕಾರ್ಕಳ

ಮಂಗಳೂರು: ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಆಡಳಿತಕ್ಕೆ ಒಳಪಟ್ಟ ಶ್ರೀ ಆದಿ ದುಮಾವತಿ, ದೇಯಿ ಬೈದೇತಿ ಕೋಟಿ ಚೆನ್ನಯ ಯಕ್ಷಗಾನ ಮಂಡಳಿಯ ಸಮಿತಿಯನ್ನು ಪುನರ್ ರಚಿಸಲಾಯಿತು.


ಗೌರವ ಸಂಚಾಲಕರಾಗಿ ಮಸ್ಕತ್ತಿನ ಪ್ರಶಾಂತ ಪೂಜಾರಿ, ಮುಖ್ಯ ಸಂಚಾಲಕರಾಗಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಸಂಚಾಲಕರಾಗಿ ಉಲ್ಲಾಸ್ ಕೋಟ್ಯಾನ್, ಹರೀಶ್ ಕೆ ಪೂಜಾರಿ, ಡಾ.ಸಂತೋಷ್ ಪೇರಂಪಲ್ಲಿ , ನಿತ್ಯಾನಂದ ನಾವರ ರವರು ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾದರು.

ಕ್ಷೇತ್ರದ ಗೌರವಾಧ್ಯಕ್ಷ ಪಿತಾಂಬರ ಹೇರಾಜೆ, ಗೆಜ್ಜೆ ಗಿರಿ ಕೇತ್ರದ ಆಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ ಸೆಂಟರ್, ಕಾರ್ಯದರ್ಶಿಗಳಾದ ಉಲ್ಲಾಸ್ ಕೋಟ್ಯಾನ್, ಡಾ. ರಾಜಾರಾಮ್ ಕೆಬಿ, ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ ವಾಮಜೂರು. ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ನವೀನ್ ಅಮೀನ್ ಕಟಪಾಡಿ, ನವೀನ್ ಸುವರ್ಣ ಸಜೀಪ, ಎಸ್ ಆರ್ ಶೈಲೇಂದ್ರ ಸುವರ್ಣ, ಜೈವಿಕ್ರಮ ಕಲ್ಲಾಪು, ಚಂದ್ರಶೇಖರ ಉಚ್ಚಿಲ, ಭಾಸ್ಕರ ಮುಂತಾದ ಪ್ರಮುಖರು ಉಪಸ್ಥಿತರಿದ್ದು ಗೆಜ್ಜೆ ಗಿರಿ ಮೇಳ ಕಳೆದ ಮೂರು ವರ್ಷಗಳಿಂದ ನಡೆದು ಬಂದ ದಾರಿ ಅದರ ಆಗು ಹೋಗುಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಿದರು.

Related posts

ಗುರುವಾಯನಕೆರೆ: ನವರಾತ್ರಿ, ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಶಿವಂ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್‌ನಲ್ಲಿ ಡಿಸ್ಕೌಂಟ್ ಆಫರ್

Suddi Udaya

ಸಾರ್ವಜನಿಕರಿಗಾಗಿ CPR ಮಾಹಿತಿ ಮತ್ತು ತರಬೇತಿ ಕಾರ್ಯಕ್ರಮ

Suddi Udaya

ಭಾರಿ ಗಾಳಿ ಮಳೆಗೆ ಹಾನಿಗೀಡಾದ ಮನೆ, ಶಾಲೆ, ಮದರಸಗಳಿಗೆ ನಾವೂರು ಗ್ರಾ.ಪಂ ನಿಂದ ಭೇಟಿ ಪರಿಶೀಲನೆ

Suddi Udaya

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಬಗ್ಗೆ ಅಶ್ಲೀಲ ಪದ ಬಳಕೆ ಆರೋಪ: ಮಹಿಳಾ ಕಾಂಗ್ರೆಸ್‌ನಿಂದ ದೂರು

Suddi Udaya

ಸಂಸತ್ತಿನಲ್ಲೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಗೆ ಅವಮಾನಿಸಿದ ಗೃಹ ಸಚಿವ ಅಮಿತ್ ಶಾ ತಮ್ಮ ದೇಶದ ಜನರೆದುರು ಕ್ಷಮೆಯಾಚಿಸಲಿ: ರಕ್ಷಿತ್ ಶಿವರಾಂ

Suddi Udaya

ಧರ್ಮಸ್ಥಳ: ಅನ್ಯಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

Suddi Udaya
error: Content is protected !!