September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಆರರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನಃಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಪದ್ಮಶ್ರೀ ಜೈನ್ ದೀಪ ಪ್ರಜ್ವಲಿಸಿ ಚಾಲನೆ ನೀಡಿ ಮಾತನಾಡಿ ಆರೋಗ್ಯಕರ ಕುಟುಂಬದಲ್ಲಿ ಮಗು ಹೇಗೆ ಸಂತೋಷವಾಗಿ ಬೆಳೆಯುತ್ತದೆ ಎಂಬುದನ್ನು ವಿವರಿಸಿದರು.

ಹೆತ್ತವರ ವಿವಿಧ ಬಗೆಗಳು ,ವಿದ್ಯಾರ್ಥಿಗಳು ಹೇಗೆ ಇರುತ್ತಾರೆ, ಹೆತ್ತವರ ಜವಾಬ್ದಾರಿಯನ್ನು ಹಲವಾರು ನೈಜ ಉದಾಹರಣೆಗಳನ್ನು ನೀಡುತ್ತಾ ಹೆತ್ತವರ ಜೊತೆಗೆ ಸಂವಾದವನ್ನು ನಡೆಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಶಾಲಾ ರೀತಿ ನೀತಿಗಳ ಕುರಿತು ,ಮಾದಕ ವ್ಯಸನಿಗಳ ಕುರಿತು ಅದರ ಜಾಗೃತಿ ಕುರಿತು,ಹೊಸ ಪರೀಕ್ಷಾ ವಿಧಾನಗಳನ್ನು ಕುರಿತು ವಿವರಿಸಿದರು. ಶಾಲಾ ಸಹಶಿಕ್ಷಕಿ ಶ್ರೀಮತಿ ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

Related posts

ಧರ್ಮಸ್ಥಳ ಮಹಾಶಕ್ತಿ ಕೇಂದ್ರದ ಕಳೆoಜ ಶಕ್ತಿಕೇಂದ್ರದಲ್ಲಿ ನಮೋ ಯುವಚೌಪಲ್

Suddi Udaya

ಸುಲ್ಕೇರಿಮೊಗ್ರು ಶಾಲಾಭಿವೃದ್ಧಿ ಸಮಿತಿಯಿಂದ ಅಳದಂಗಡಿ ಗ್ರಾ.ಪಂ. ನ ನೂತನ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಪದಗ್ರಹಣ ಸಮಾರಂಭ

Suddi Udaya

ಗೂಡಿನಿಂದ ಕೋಳಿಗಳನ್ನು ಹೊತ್ತೊಯ್ದಿ ಕಾಡುಪ್ರಾಣಿ

Suddi Udaya

ಸುಲ್ಕೇರಿಮೊಗ್ರು ಶ್ರೀ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ, ವಾರ್ಷಿಕ ಜಾತ್ರೋತ್ಸವ

Suddi Udaya

ಮುಂಡಾಜೆ: ಜಿ.ಎನ್.ಭಿಡೆ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

Suddi Udaya
error: Content is protected !!