Uncategorized

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಮೆನ್ಸ್ ಪಾರ್ಲರ್ ಸೆಲೂನ್ ಉದ್ಯಮಿ ತರಬೇತಿ ಸಮಾರೋಪ

ಉಜಿರೆ: ಜೀವನದಲ್ಲಿ ನಿರೀಕ್ಷೆಗಳನ್ನು ಕಡಿಮೆ ಇಟ್ಟುಕೊಂಡಷ್ಟು ಬದುಕು ಸುಲಭವಾಗುತ್ತದೆ. ನೀರಲ್ಲದರೂ ಹಾಕು, ಹಾಲಲ್ಲಾದರೂ ಹಾಕು ಎನ್ನುವ ಹಾಗೇ ನೀರಲ್ಲಿ ಮೀನನಾಗಿ, ಹಾಲಿನಲ್ಲಿ ಕೆನೆಯಾಗಿ ಬದುಕುಬೇಕು ಇದೇ ರೀತಿಯಲ್ಲಿ ನಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು. ಇಂದು ಪುರುಷ-ಮಹಿಳೆಯರು ಸಮಾನವಾಗಿ ವೃತ್ತಿಯಾಗಿ ನಡೆಸುತ್ತಿದ್ದಾರೆ. ಕಲಿಕೆ ಅನ್ನುವುದು ನಿರಂತರವಾಗಿ ಇರುವುದು ಅದನ್ನು ನಾವು ಅನುಸರಿಸಬೇಕು. ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ ಪ್ರತಿಯೊಬ್ಬರು ವೃತ್ತಿ ಜೀವನದಲ್ಲಿ ತಮ್ಮದೇ ಆದ ಶಿಸ್ತು ಅನ್ನು ಅಳವಡಿಸಿಕೊಂಡರೆ ಯಶಸ್ಸು ಕಾಣಬಹುದು ಜೊತೆಗೆ ಬಹುಮುಖ್ಯವಾಗಿ ದುರಭ್ಯಾಸಗಳಿಂದ ದೂರ ಇರುಬೇಕು. ಹಾಗೂ ಕ್ಷೌರಿಕ ವೃತ್ತಿಯಲ್ಲಿ ಹೊಸ ಬದಲಾವಣೆಗಳು ಆಗುತ್ತಿದೆ ಅದನ್ನು ಆಳವಡಿಸಿಕೊಂಡು ವೃತ್ತಿಯಲ್ಲಿ ಮುನ್ನಡೇರಿ. ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರುಡ್‌ಸೆಟ್ ಸಂಸ್ಥೆಯಲ್ಲಿ ಅತ್ಯತ್ತಮವಾದ ಸೌಲಭ್ಯಗಳೊಂದಿಗೆ ಉಚಿತ ತರಬೇತಿ ನೀಡಿ ಯುವಜನರಿಗೆ ಅನುಕೂಲ ಮಾಡಿದ್ದಾರೆ. ಇದು ಪ್ರಪಂಚಕ್ಕೆ ಮಾದರಿಯಾಗಿದೆ. ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮೋತ್ಥನ ಟ್ರಸ್ಟ್ ಕಾರ್ಯದರ್ಶಿ ವೀರು ಶೆಟ್ಟಿ ಅಭಿಪ್ರಾಯಪಟ್ಟರು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ ೩೦ ದಿನಗಳ ಕಾಲ ನಡೆದ ಮೆನ್ಸ್ ಪಾರ್ಲರ್ ಸೆಲೂನ್ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯ ಕುಮಾರ್ ವಹಿಸಿ ಮಾತನಾಡಿ ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ-ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾದ ಲೋಕೇಶ್ ಮತ್ತು ರವಿ ಕುಮಾರ್ ಕಡೂರು ಉಪಸ್ಥಿತರಿದ್ದರು.

ಅತಿಥಿಗಳನ್ನು ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು ಉಪನ್ಯಾಸಕ ಕೆ. ಕರುಣಾಕರ ಜೈನ್ ವಂದಿಸಿದರು.

ಸುಮಾರು 35 ಜನ ಶಿಬಿರಾರ್ಥಿಗಳ ಭಾಗವಹಿಸಿದ್ದರು, ಮಂಜುನಾಥ, ಪ್ರಕ್ವಲ್, ರಕ್ಷಿತ್ ತರಬೇತಿಯ ಅನುಭವ ಹಂಚಿಕೊಂಡರು.

Related posts

ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ನಿತಿನ್ ನೇಣು ಬಿಗಿದು ಆತ್ಮಹತ್ಯೆ

Suddi Udaya

ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರನ್ನು ಭೇಟಿಯಾದಸೆ.12ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಕನ್ನಡ ಚಲನ ಚಿತ್ರ ರಾನಿ – RONNY‌ದ ನಿರ್ಮಾಪಕರಾದ ಉಮೇಶ್ ಹೆಗ್ಡೆ

Suddi Udaya

ಶೈಕ್ಷಣಿಕ ಸಂಶೋಧನೆ ಮತ್ತು ಸಂಶೋಧನಾ ಲೇಖನಗಳ ಪ್ರಸ್ತುತೀಕರಣ ಕ್ಷೇತ್ರದಲ್ಲಿ ಅದ್ಭುತ ಸಾಧನೆ ತೋರಿದ ಕುಮಾರಿ ಸೌಖ್ಯಳಿಗೆ ಸನ್ಮಾನ

Suddi Udaya

ಧರ್ಮಸ್ಥಳ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

Suddi Udaya

ಹೊಸಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಶ್ರೀ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

Suddi Udaya

ತಣ್ಣೀರುಪಂತ ಗ್ರಾಮ ಪಂಚಾಯತ್ ನಲ್ಲಿ ಶಾಂತಿ ಸಭೆ

Suddi Udaya
error: Content is protected !!