September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳದಲ್ಲಿ ಬಿವೋಕ್‌ ವಿದ್ಯಾರ್ಥಿಗಳಿಗೆ ಸ್ಟಾಪ್‌ ಮೋಶನ್‌ ಅನಿಮೇಶನ್‌ ಕಾರ್ಯಾಗಾರ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವ ಕಾಲೇಜು (ಸ್ವಾಯತ್ತ), ಉಜಿರೆ ಇದರ ಬಿ. ವೋಕ್‌ ಡಿಜಿಟಲ್‌ ಮೀಡಿಯಾ & ಫಿಲ್ಮ್‌ ಮೇಕಿಂಗ್‌ ವಿಭಾಗ ಹಾಗೂ ಧರ್ಮಸ್ಥಳದ ಮಂಜುಷಾ ಪುರಾತತ್ತ್ವ ಸಂಗ್ರಹಾಲಯದ ಸಹಭಾಗಿತ್ವದಲ್ಲಿ ಜುಲೈ 30 ರಿಂದ ಆಗಸ್ಟ್ 2 ರವರೆಗೆ ವಿದ್ಯಾರ್ಥಿಗಳಿಗೆ ʼಆನಿಮೇಟೆಡ್ ಆರ್ಟಿಫ್ಯಾಕ್ಟ್ಸ್ʼ ಎಂಬ ವಿಶಿಷ್ಟ ಸ್ಟಾಪ್‌ಮೋಶನ್ ಅನಿಮೇಷನ್ ಕಾರ್ಯಾಗಾರ ನಡೆಯಿತು.

ಡಿಜಿಟಲ್‌ ಮೀಡಿಯಾ & ಫಿಲ್ಮ್‌ ಮೇಕಿಂಗ್‌ ವಿಭಾಗ ಹಾಗೂ ಮಂಜುಷಾ ವಸ್ತುಸಂಗ್ರಹಾಲಯದ ನಡುವೆ ಇರುವ ಒಡಂಬಡಿಕೆಯ ಭಾಗವಾಗಿ ಈ ಕಾರ್ಯಾಗಾರ ನಡೆಯಿತು. ವಿದ್ಯಾರ್ಥಿಗಳು ಮಣ್ಣಿನ ಕ್ಲೇ ಬಳಸಿ ವಿವಿಧ ಪ್ರತಿಕೃತಿಗಳನ್ನು ರಚಿಸಿ, ಅವುಗಳ ಸ್ಟಾಪ್‌ ಮೋಶನ್‌ ಸಿನಿಮಾವನ್ನು ನಿರ್ಮಾಣ ಮಾಡಿದರು. ಒಟ್ಟು ಆರು ತಂಡಗಳಾಗಿ ವಿದ್ಯಾರ್ಥಿಗಳನ್ನು ವಿಂಗಡಿಸಿ, ವಿವಿಧ ಕಿರುಚಿತ್ರಗಳನ್ನು ನಿರ್ಮಿಸಲಾಯಿತು. ಸುಮೇಧ ಮತ್ತು ತಂಡ ರಚಿಸಿದ ಸಿನಿಮಾಗೆ ವಿಶೇಷ ಪುರಸ್ಕಾರ ನೀಡಲಾಯಿತು.

ಆಗಸ್ಟ್ 2ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಎಸ್‌ಡಿಎಂ ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥ ಶೈಲೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಂಜುಷಾ ವಸ್ತುಸಂಗ್ರಹಾಲಯದ ನಿರ್ದೇಶಕ ರಿತೇಶ್ ಶರ್ಮಾ, ಡಿಜಿಟಲ್ ಮೀಡಿಯಾ ಮತ್ತು ಫಿಲ್ಮ್ ಮೇಕಿಂಗ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ ಮತ್ತು ವಿಭಾಗದ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

Related posts

ಆ.12: ಬೆಳ್ತಂಗಡಿಯಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆಟಿದ ಕಷಾಯ ಮತ್ತು ಮೆತ್ತೆಗಂಜಿ ವಿತರಣೆ

Suddi Udaya

ಉಜಿರೆಯ ಪ್ರಣಮ್ಯ ಎಂ.ಕೆ. ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

Suddi Udaya

ವೇಣೂರು ಪಚ್ಚೇರಿ ಬಳಿ ಚಿರತೆ ಹಾವಳಿ: ನಾಯಿಯನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Suddi Udaya

ಕಲ್ಮಂಜ: ಸಿದ್ದಬೈಲು ಪರಾರಿ ಸ.ಹಿ.ಪ್ರಾ. ಶಾಲೆ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Suddi Udaya

ಕರಾಯ: ಚರಂಡಿಗೆ ಬಿದ್ದ ಖಾಸಗಿ ಬಸ್

Suddi Udaya

ಅರಸಿನಮಕ್ಕಿ: ಚೈತನ್ಯಮಿತ್ರ ಕಲಾವೃಂದದಿಂದ 22ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆ

Suddi Udaya
error: Content is protected !!