September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಆಟಿಡೊಂಜಿ ದಿನಾಚರಣೆ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಮೆಮೋರಿಯಲ್ ಎಜುಕೇಷನಲ್ ಟ್ರಸ್ಟ್ (ರಿ) ನಿಂದ ನಡೆಸಲ್ಪಡುವ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವು, ಇಲ್ಲಿ “ತುಳುವರ ಬದುಕಿನ ಅನಾವರಣ ” ಎಂಬ ಪರಿಕಲ್ಪನೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿ ತರಗತಿವಾರು ಸ್ಪರ್ಧೆಯನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಬಬಿತಾ ಆರ್.ನಾಥ್ ಹಾಗೂ ಕಾರ್ಯದರ್ಶಿ ಶಿವಾನಿ ಆರ್ ನಾಥ್, ಟ್ರಸ್ಟಿಗಳಾದ ಯಜ್ಞೆಶ್ ರಾಜ್, ಜಯನಿ ಆರ್ ನಾಥ್ ದೀಪ ಬೆಳಗಿಸಿ ಉದ್ಘಾಟಿಸಿ ಆಟಿಕಳೆಂಜನ ಕುಣಿತದೊಂದಿಗೆ “ಆಟಿ ಕೂಟ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಸ್ಥೆಯ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ವಿಭಾಗ, ಪದವಿ ಹಾಗೂ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಸಮೂಹ‌ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತುಳುನಾಡಿನ ಕಲೆ, ಸಂಸ್ಕೃತಿ, ಜೊತೆಗೆ ಆಟಿ ತಿಂಗಳ ವಿಶೇಷತೆಯನ್ನು ತಿಳಿಸುವ ಗಾದೆ ಮಾತುಗಳು,ಆಹಾರ ಪದ್ಧತಿಗಳು,ಗಿಡಮೂಲಿಕೆಗಳು ಹಾಗೂ ತುಳುವರ ಬದುಕು ಮುಂತಾದ ಪ್ರಮುಖ ಅಂಶಗಳೊಂದಿಗೆ ಸಂಪ್ರದಾಯಿಕ ಉಡುಗೆ ಧರಿಸಿ ತುಳುನಾಡಿನ ಕಥೆ, ಹಾಡು, ನೃತ್ಯದೊಂದಿಗೆ ಮನರಂಜನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ , ಸಂಯೋಜಕರಾದ ಯಶವಂತ್ ಜಿ.ನಾಯಕ್ ಪ್ರಾಥಮಿಕ ಮತ್ತು ಪೌಢ ವಿಭಾಗದ ಮುಖ್ಯಶಿಕ್ಷಕಿ ವಿಜಯಾ.ಕೆ, ಬೋಧಕ ಹಾಗೂ ಬೋಧಕೇತರವೃಂದ ಮತ್ತು ಪೋಷಕ‌ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts

ಶಿಬಾಜೆ: ಕಟ್ಟಿಗೆ ತರಲೆಂದು ಹೋದವರು ಮನೆಗೆ ಹಿಂತಿರುಗಿ ಬಾರದೆ ನಾಪತ್ತೆ

Suddi Udaya

ವೇಣೂರು ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಂಘದ ಸಭೆ

Suddi Udaya

ಬೆಳ್ತಂಗಡಿ: ಆಳ್ವಾಸ್ ಪ್ರಗತಿ, ಬೃಹತ್ ಉದ್ಯೋಗ ಮಾಹಿತಿ ಶಿಬಿರ; ಶಾಸಕ ಹರೀಶ್ ಪೂಂಜರವರಿಂದ ಚಾಲನೆ

Suddi Udaya

ಕೊಕ್ಕಡ ವಲಯದ ಭಜನಾ ಪರಿಷತ್ ಸಭೆ

Suddi Udaya

ಬೆಳ್ತಂಗಡಿ ಹಳೆಕೋಟೆ ಎಂಬಲ್ಲಿ ಮನೆಯೊಂದರಿಂದ‌ ರೂ. 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ರೂ. 5 ಲಕ್ಷ ‌ ನಗದು ಕಳವು

Suddi Udaya

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ನಡ ಸರಕಾರಿ ಪ್ರೌಢಶಾಲೆಗೆ ಶೇ.96.07 ಫಲಿತಾಂಶ

Suddi Udaya
error: Content is protected !!