September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ‘ಜೀವನ ಕೌಶಲ’ ಕಾರ್ಯಾಗಾರ

ಉಜಿರೆ: ಹಿಂದಿನ ಕಾಲದ ಜನರು ಶಿಕ್ಷಣವಂಚಿತರಾದರೂ ಸಂಸ್ಕಾರವಂತರಾಗಿದ್ದರು. ಆದರೆ ಪ್ರಸ್ತುತ ಕಾಲದ ಜನರು ಸುಶಿಕ್ಷಿತರಾದರೂ ಅವರಲ್ಲಿ ಸಂಸ್ಕಾರದ ಕೊರತೆ ಕಂಡು ಬರುತ್ತಿದೆ ಎಂದು ವೇಣೂರಿನ ಎಸ್.ಡಿ.ಎಂ. ಕೈಗಾರಿಕಾ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಪದ್ಮ ಪ್ರಸಾದ್ ಖೇದ ವ್ಯಕ್ತಪಡಿಸಿದರು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆ.8 ಸಂಸ್ಥೆಯ ವಿಂಶತಿ ಹಿನ್ನೆಲೆ ಕಾರ್ಯಕ್ರಮ ಸರಣಿ ಭಾಗವಾಗಿ ಆಯೋಜಿಸಿದ್ದ ಒಂದು ದಿನದ ‘ಜೀವನ ಕೌಶಲ’ ಕಾರ್ಯಾಗಾರದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.

“ಹಿಂದೆ ಜನರು ಸಂಸ್ಕಾರವಂತರಾಗಿದ್ದರಿಂದ ಅಹಿತಕರ ಘಟನೆಗಳು ಘಟಿಸುತ್ತಿರಲಿಲ್ಲ. ಆದರೆ ಇಂದು ಉನ್ನತ ಶಿಕ್ಷಣ ಪಡೆದವರೇ ಭಯೋತ್ಪಾದನೆಯಂತಹ ಕುಕೃತ್ಯಗಳಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ಸಂಸ್ಕಾರಯುತ ಶಿಕ್ಷಣದ ಆವಶ್ಯಕತೆ ಎದ್ದು ಕಾಣುತ್ತಿದೆ” ಎಂದರು.

ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕಿ, ಕಿರಿಯ ತರಬೇತಿ ಅಧಿಕಾರಿ ಸಂದ್ಯಾ ಸ್ವಾಗತಿಸಿದರು.

Related posts

ತಾಲೂಕು ಸಹಕಾರ ಸಂಘಗಳ ಹಿತರಕ್ಷಣಾ ವೇದಿಕೆ: ನೂತನ ಅಧ್ಯಕ್ಷರಾಗಿ ಭಗೀರಥ ಜಿ. ಆಯ್ಕೆ

Suddi Udaya

ಮೊಗ್ರು: ಶ್ರೀರಾಮ ಶಿಶು ಮಂದಿರದಲ್ಲಿ ವನಮಹೋತ್ಸವ

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ರೇಬಿಸ್ ರೋಗದ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಮತದಾರರ ಪಟ್ಟಿಯಲ್ಲಿ ಎಡವಟ್ಟು: ಮುಂಡಾಜೆಯ ಅಶ್ವಿನಿ ಎ. ಹೆಬ್ಬಾರ್ ಬಂಟ್ವಾಳ ಆಡಳಿತ ಸೌಧದಲ್ಲಿ ಮತದಾನ

Suddi Udaya

ಸಹನಾಶ್ರೀ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಗಡಿಯಾರ ವಿತರಣೆ

Suddi Udaya

ಶಿಶಿಲ: ವೈಕುಂಠಪುರ ನಿವಾಸಿ ಕುಂಞ ಮಲೆಕುಡಿಯ ನಿಧನ

Suddi Udaya
error: Content is protected !!