September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಬೆಳ್ತಂಗಡಿರಾಜ್ಯ ಸುದ್ದಿ

ಪದ್ಮಲತಾ ನಿಗೂಢ ಸಾವು ಪ್ರಕರಣ: ಎಸ್‌ಐಟಿಗೆ ದೂರು ನೀಡಲು ಸಿಪಿಐಎಂ ನಾಯಕರ ಜೊತೆ ಆಗಮಿಸಿದ ಮೃತಳ ಸಹೋದರಿ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಮೂರು ದಶಕಗಳಿಗೂ ಹಿಂದೆ ನಿಗೂಢ ವಾಗಿ ಸಾವುಗೀಡಾದ ಪದ್ಮಲತಾ ಅವರ ಸಹೋದರಿ ಆ.11ರಂದು ಪದ್ಮಲತಾ ಪ್ರಕರಣದ ಬಗ್ಗೆ ಮರುತನಿಖೆ ನಡೆಸುವಂತೆ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ದೂರು ನೀಡಲು ಆಗಮಿಸಿದ್ದಾರೆ.

ಪದ್ಮಲತಾ ಅವರ ಸಹೋದರಿ ಇಂದ್ರಾವತಿ ಅವರು ಸಿಪಿಎಂ ಪಕ್ಷದ ಮುಖಂಡ ಬಿ.ಎಂ.ಭಟ್ ಹಾಗೂ ಲಕ್ಷ್ಮಣ ಗೌಡ
ಇತರರೊಂದಿಗೆ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ
ಸುಮಾರು 39 ವರ್ಷಗಳ ಹಿಂದೆ ಅಂದರೆ 1986ರಲ್ಲಿ ಪದ್ಮಲತಾ ರವರು ನಿಗೂಢವಾಗಿ ಸಾವನ್ನಪ್ಪಿದ್ದರು. ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ನಡೆಸಿ ಪತ್ತೆಯಾಗದ ಪ್ರಕರಣ ಎಂದು ವರದಿ ನೀಡಿತ್ತು.

ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಅನಾಮಿಕ ದೂರುದಾರ ನೀಡಿರುವ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಎಸ್‌.ಐ.ಟಿ. ರಚಿಸಲಾಗಿದ್ದು, ತನಿಖೆ ನಡೆಸುತ್ತಿದೆ. ಈ ಮಧ್ಯೆ ಬೆಳ್ತಂಗಡಿಯಲ್ಲಿ ಎಸ್‌ಐಟಿ ಕಚೇರಿ ತೆರೆಯಲಾಗಿದ್ದು, ಅದಕ್ಕೆ ಠಾಣೆಯ ಸ್ಥಾನಮಾನ ನೀಡಲಾದ ಹಿನ್ನೆಲೆಯಲ್ಲಿ ಈ ದೂರನ್ನು ನೀಡಲಾಗುತ್ತಿದೆ.

Related posts

ಗುರುವಾಯನಕೆರೆ: ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದಲ್ಲಿ ಸನ್ಯಾಸಿ ಹಾಗೂ ಗುಳಿಗ ದೈವದ ಆರೂಢ ಶಿಲಾನ್ಯಾಸ

Suddi Udaya

ಬೆಳ್ತಂಗಡಿ ತಾಲ್ಲೂಕಿನ 76 ಕೆರೆಗಳ ಗಡಿ ಗುರುತಿಸಿ ಗ್ರಾಮ ಪಂಚಾಯಿತ್ ಹಾಗೂ ಪಟ್ಟಣ ಪಂಚಾಯತ್ ಹಸ್ತಾಂತರ: ವಿಧಾನ ಪರಿಷತ್ ನಲ್ಲಿ ಹರೀಶ್ ಕುಮಾರ್ ಪ್ರಶ್ನೆಗೆ ಸಚಿವರ ಉತ್ತರ

Suddi Udaya

ಬೆಳ್ತಂಗಡಿಯಲ್ಲಿ ಪ್ರಸಾದ್‌ ಕೆ.ಎಸ್‌. ರವರ ನೂತನ ವಕೀಲರ ಕಛೇರಿ ಉದ್ಘಾಟನೆ

Suddi Udaya

ಉಪ ತಹಸಿಲ್ದಾರ್ ಸುನಿಲ್ ಹೃದಯಘಾತದಿಂದ ನಿಧನ

Suddi Udaya

ಕೆನರಾ ಸ್ಟೀಲ್ ಇಂಡಸ್ಟ್ರೀಸ್‌ನ ಸಂಸ್ಥೆ ಪಣೆಜಾಲುವಿನಲ್ಲಿ ವಿನಯ ಸ್ಟೀಲ್ & ಮೆಟಲ್ಸ್ ಶುಭಾರಂಭ

Suddi Udaya

ಉಜಿರೆ: ಎಸ್ ಡಿ ಎಂ ಕಾಲೇಜು ಆಶ್ರಯದಲ್ಲಿ ಅಧಿವಕ್ತ ಪರಿಷದ್ ದ.ಕ. ಜಿಲ್ಲಾ ಘಟಕ ಮತ್ತು ಬೆಳ್ತಂಗಡಿ ವಕೀಲರ ಸಂಘದ ಸಹಯೋಗದಲ್ಲಿ ಸಂವಿಧಾನ ದಿನ ಆಚರಣೆ

Suddi Udaya
error: Content is protected !!