September 6, 2026
ಅಪರಾಧ ಸುದ್ದಿ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಆರೋಪಿ ಪುದುವೆಟ್ಟುವಿನ ಯುವಕನ ಬಂಧನ

ಬೆಳ್ತಂಗಡಿ: ಅಪ್ರಾಪ್ತಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆಕೆ ಗರ್ಭಿಣಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪುದುವೆಟ್ಟು ಗ್ರಾಮದ ಯುವಕನನ್ನು ಧರ್ಮಸ್ಥಳ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ ಘಟನೆ ಆ.೧೧ರಂದು ವರದಿಯಾಗಿದೆ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪುದುವೆಟ್ಟು ಗ್ರಾಮದ ಮೇಲ್ದಡ್ಕ ನಿವಾಸಿ ವೃತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡುತ್ತಿದ್ದ ದಿನೇಶ್ ಗೌಡ(೩೦ವ) ಬಂಧಿತ ಯುವಕನಾಗಿದ್ದಾನೆ. ಆರೋಪಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿರುವುದಲ್ಲದೆ ವಿಚಾರವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದೆ. ಕೆಲವು ದಿನಗಳ ಹಿಂದೆ ಬಾಲಕಿ ಹೊಟ್ಟೆ ನೋವು ಎಂದು ಮನೆಯವರಿಗೆ ತಿಳಿಸಿದ್ದು, ಆಸ್ಪತ್ರೆಯಲ್ಲಿ ತಪಾಸಣೆ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಪೋಷಕರು ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕೋ ಮತ್ತು ಅಟ್ರಾಸಿಟಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

Related posts

ಕೊಕ್ಕಡ ಪ್ರೌಢ ಶಾಲೆಯಿಂದ ರೂ. 3.20 ಲಕ್ಷ ಮೌಲ್ಯದ ಬ್ಯಾಟರಿ ಕಳವು ಮಾಡಿದ ಮೂವರ ಬಂಧನ

Suddi Udaya

ಯೂಟ್ಯೂಬ್ ಚಾನಲ್ ನ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜೈನ ಧರ್ಮದ ಜನರ ನಿಂದಿಸಿದ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವನವರ್ ಮತ್ತು ಶ್ರೀಮತಿ ರಾಧಿಕಾ ಕಾಸರಗೋಡು ಇವರ ಮೇಲೆ ಕೇಸು

Suddi Udaya

ಬೆಳ್ತಂಗಡಿ: ಖೋಟಾ ನೋಟು ಮುದ್ರಣ ಜಾಲ ಪತ್ತೆ ಪ್ರಕರಣ: ಆರೋಪಿಗಳು 6 ದಿನ ಪೊಲೀಸ್ ಕಷ್ಟಡಿಗೆ

Suddi Udaya

ಯುಟ್ಯೂಬರ್ ಸಮೀರ್ ಎಂಡಿ ವಿರುದ್ದ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ‌ ದಾಖಲು

Suddi Udaya

ಆಕಾಂಕ್ಷ ಸಾವು ಪ್ರಕರಣಕ್ಕೆ ಹೊಸ ತಿರುವು; ಪೊಲೀಸರಿಂದ ಮೋಸದ ಆರೋಪ: ಇನ್ನೂ ನಡೆಯದ ಮರಣೋತ್ತರ ಪರೀಕ್ಷೆ

Suddi Udaya

ಕೆದ್ದುನಲ್ಲಿ ಕಾರು ಡಿಕ್ಕಿ:ಬೈಕ್ ಸವಾರಿಬ್ಬರಿಗೆ ಗಾಯ

Suddi Udaya
error: Content is protected !!