September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾಕೂಟ: ಬೆಳ್ತಂಗಡಿ ಶೊರಿನ್ ರಿಯೊ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

ಬೆಳ್ತಂಗಡಿ: ಮೌಲೆ ಶೋಟೋಕಾನ್ ಕರಾಟೆ ಡೊ ಅಸೋಸಿಯೇಷನ್, ಇಂಡಿಯಾ, ಆಯೋಜಿಸಿದ 6ನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯು ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯಾವಳಿಯಲ್ಲಿ ಉಜಿರೆ ಹಾಗೂ ಬೆಳ್ತಂಗಡಿ ಶೊರಿನ್ ರಿಯೊ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.

ಬ್ಲಾಕ್ ಬೆಲ್ಟ್ ಕ್ಯಾಟಗರಿಯಲ್ಲಿ ಸುಭಾಷ್(ಕಟ ಪ್ರಥಮ ಹಾಗು ಕುಮಿಟೆ ದ್ವಿತೀಯ), ಮೋಹನ್ (ಕಟಾ ದ್ವಿತೀಯ ಹಾಗು ಕುಮಿಟೆ ಪ್ರಥಮ), ಶಹೀರ್ ಅನಸ್ (ಕುಮಿಟೆ ಪ್ರಥಮ), ಬ್ರೌನ್ ಬೆಲ್ಟ್ ವಿಭಾಗದಲ್ಲಿ ಮೊಹಮ್ಮದ್ ರಯ್ಯಾನ್ (ಕಟಾ ಪ್ರಥಮ ಹಾಗೂ ಕುಮಿಟೆ ಪ್ರಥಮ), ಶೇಕ್ ಅಝೀಮ್(ಕಟಾ ತೃತೀಯ ಹಾಗೂ ಕುಮಿಟೆ ಪ್ರಥಮ) ಪ್ರಶಸ್ತಿಯನ್ನು ಪಡೆದಿರುತ್ತಾರೆ. ವಿಜೇತ ವಿದ್ಯಾರ್ಥಿಗಳಿಗೆ ಯು ಎಸ್ ಎ ಮೂಲದ ಗ್ರಾಂಡ್ ಮಾಸ್ಟರ್ ಪಿಯರ್ ಎಫ್ ಮೌಲೆ, ಆಯೋಜಕರಾದ ಶಿಹಾನ್ ವಿನೋದ್ ಶಿವಮೊಗ್ಗ ಹಾಗೂ ಇನ್ನಿತರ ಗಣ್ಯರು ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಇವರು ರೆನ್ಶಿ ಮುಹಮ್ಮದ್ ನದೀಮ್ ಹಾಗೂ ಶಿಹಾನ್ ಅಬ್ದುಲ್ ರಹ್ಮಾನ್ ರವರೊಂದಿಗೆ ತರಬೇತಿಯನ್ನು ಪಡೆದಿರುತ್ತಾರೆ.

Related posts

ಶೈಕ್ಷಣಿಕ ವರ್ಷದಲ್ಲಿ 8 ರಿಂದ 10ನೇ ತರಗತಿ ಮಕ್ಕಳಿಗೆ ತೆರೆದ ಪುಸ್ತಕ ಪರೀಕ್ಷೆ

Suddi Udaya

ಗುಂಡೂರಿ: ಗುಡ್ಡ ಜರಿದು ಮನೆ ಬದಿಯಲ್ಲಿ ಬಿದ್ದ ಮಣ್ಣಿನ ರಾಶಿಯ ತೆರವು ಕಾರ್ಯ

Suddi Udaya

ಪಟ್ರಮೆ: ಶಾಂತಿಕಾಯ ಬಳಿ ಬರೆ ಕುಸಿತ: ರಸ್ತೆಗೆ ಉರುಳಿ ಬಿದ್ದ ಮರ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಭಾರತೀಯ ಭೂ ಸೇನೆ ಅಗ್ನಿವೀರ್‌ಗೆ ನಡ ಗ್ರಾಮದ ರಂಜಿತ್ ಆಯ್ಕೆ

Suddi Udaya

ಬೆಳ್ತಂಗಡಿ: ಚುನಾವಣೆ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಬಿಗಿ : 24 ಗಂಟೆಯೂ ಸಂಚರಿಸುವ ವಾಹನಗಳ ಪರಿಶೀಲನೆ

Suddi Udaya
error: Content is protected !!